Vitamin C Deficiency: ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಈ 2 ಹಣ್ಣುಗಳು ಸಾಕು

Vitamin C Deficiency: ಯಾವುದೇ ಕಾಯಿಲೆಯ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು ಬಹಳ ಮುಖ್ಯ. ಇದಕ್ಕಾಗಿ, ಮುಖ್ಯವಾದ ಪೋಷಕಾಂಶವೆಂದರೆ ವಿಟಮಿನ್ ಸಿ. ಈ ಪೋಷಕಾಂಶಕ್ಕಾಗಿ ಔಷಧಿಗಳ ಮೊರೆ ಹೋಗುವ ಬದಲು ಬಹಳ ಸುಲಭವಾಗಿ ಲಭ್ಯವಿರುವ ಎರಡೇ ಎರಡು ಹಣ್ಣುಗಳ ಸೇವನೆ ನಿಮಗೆ ಪ್ರಯೋಜನಕಾರಿ ಆಗಿದೆ. 

Vitamin C Deficiency: ಮಳೆಗಾಲ, ಚಳಿಗಾಲದಲ್ಲಿ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಇಂತಹ ಸೋಂಕಿನ ವಿರುದ್ಧ ಹೋರಾಡಲು ಬಲವಾದ ರೋಗ ನಿರೋಧಕ ಶಕ್ತಿ ಬಹಳ ಮುಖ್ಯ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದಾರೆ ಇದರಿಂದ ಸೋಂಕಿನ ಅಪಾಯವು ಕಡಿಮೆಯಾಗುತ್ತದೆ. ಆದರೆ, ಇದಕ್ಕಾಗಿ ಔಷಧಿಗಳ ಮೊರೆ ಹೋಗುವ ಅಗತ್ಯವಿರುವುದಿಲ್ಲ. ಬದಲಿಗೆ ಕೆಲವು ಆಹಾರ ಪದಾರ್ಥಗಳಿಂದ, ಹಣ್ಣುಗಳಿಂದಲೂ ಇದು ಸಾಧ್ಯವಾಗುತ್ತದೆ. 

ಆರೋಗ್ಯ ತಜ್ಞರ ಪ್ರಕಾರ, ಸೋಂಕಿನ ವಿರುದ್ಧ ಹೋರಾಡಲು ನಮ್ಮರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಕೆಲವು ಸಿಟ್ರಸ್ ಹಣ್ಣುಗಳು ಕೂಡ ತುಂಬಾ ಪ್ರಯೋಜನಕಾರಿ ಆಗಿವೆ. ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ವೃದ್ಧಿಗೆ ಈ ಹಣ್ಣುಗಳ ಸೇವನೆ ನೈಸರ್ಗಿಕ ಮಾರ್ಗವಾಗಿದೆ. ಹಾಗಿದ್ದರೆ, ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಸಹಾಯಕವಾಗುವ ಆ ಎರಡು ಅತ್ಯುತ್ತಮ ಹಣ್ಣುಗಳು ಯಾವುವು ಎಂದು ನೋಡುವುದಾದರೆ…  

ಈ ಸಿಟ್ರಸ್ ಹಣ್ಣುಗಳ ಸೇವನೆಯಿಂದ ದೂರವಾಗುತ್ತೆ ವಿಟಮಿನ್ ಸಿ ಕೊರತೆ:
* ಕಿತ್ತಳೆ ಹಣ್ಣು:

ಬಹಳ ಸುಲಭವಾಗಿ ಕೈಗೆಟುಕುವ ಬೆಳೆಯಲ್ಲಿ ಲಭ್ಯವಿರುವ ಹಣ್ಣು ಎಂದರೆ ಕಿತ್ತಳೆ ಹಣ್ಣು. ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ನಮ್ಮ ಸಮೃದ್ಧವಾಗಿದೆ. ಈ ಹಣ್ಣನ್ನು ನಿಮ್ಮ ಡಯಟ್ನಲ್ಲಿ ಸೇರಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸ್ವತಂತ್ರ ರಾಡಿಕಲ್‌ಗಳಿಂದ ನಮ್ಮನ್ನು ರಕ್ಷಿಸುತ್ತವೆ. ಈ ಹಣ್ಣನ್ನು ನೆರವಾಗಿಯೂ ಸೇವಿಸಬಹುದು. ಮಾತ್ರವಲ್ಲ, ಜ್ಯೂಸ್ ರೂಪದಲ್ಲೂ ಸೇವಿಸಬಹುದು. 

* ಕಿವಿ: 
ದುಬಾರಿ ಹಣ್ಣು ಎಂತಲೇ ಖ್ಯಾತಿ ಪಡೆದಿರುವ ಕಿವಿ ಹಣ್ಣಿನಲ್ಲೂ ವಿಟಮಿನ್ ಸಿ ಸಮೃದ್ಧವಾಗಿದೆ. ಸಂಶೋಧನೆಯ ಪ್ರಕಾರ, ಕಿವಿ ಹಣ್ಣಿನಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚಿನ ವಿಟಮಿನ್ ಸಿ ಕಂಡು ಬರುತ್ತದೆ. ಕಿವಿ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಾತ್ರವಲ್ಲದೆ, ಇದರಲ್ಲಿ ಹಲವು ಪೋಷಕಾಂಶಗಳು ಹೆಚ್ಚಾಗಿದ್ದು ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

Source : https://zeenews.india.com/kannada/health/these-2-fruits-are-enough-to-overcome-vitamin-c-deficiency-146927

Views: 0

Leave a Reply

Your email address will not be published. Required fields are marked *