ಬೆನ್ನಿನ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಕಾರಣವೇನು? ತಜ್ಞರು ಸೂಚಿಸಿದ ಪರಿಹಾರ ಕ್ರಮಗಳಿವು!

How to Remove Pimples: ಬೆನ್ನಿನ ಮೇಲಿನ ಹುಣ್ಣುಗಳು ಹಾಗೂ ಮೊಡವೆಗಳನ್ನು ಹೋಗಲಾಡಿಸಲು ಆರೋಗ್ಯ ತಜ್ಞರು ನೀಡಿರುವ ಸಲಹೆಗಳು ಈ ಸ್ಟೋರಿಯಲ್ಲಿವೆ ಸಂಪೂರ್ಣವಾಗಿ ಓದಿ.

How to Remove Pimples: ಹಲವು ಜನರು ತಮ್ಮ ಮುಖದ ಮೇಲೆ ಮೊಡವೆಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಕೆಲವರು ತಮ್ಮ ಬೆನ್ನಿನ ಮೇಲೆ ಮೊಡವೆಗಳ ತೊಂದರೆಗೆ ಒಳಗಾಗಿದ್ದಾರೆ. ಬೆನ್ನಿನ ಮೇಲಿನ ಮೊಡವೆಗಳು ಹಾಗೂ ಹುಣ್ಣುಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣವೇನು? ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂಬುದರ ವೈದ್ಯಕೀಯ ತಜ್ಞರು ಸಲಹೆ ನೀಡಿದ್ದಾರೆ.

ವ್ಯಾಯಾಮ ಮುಗಿಸಿದ ಬಳಿಕ ಹೊರಗಿನಿಂದ ಮನೆಗೆ ವಾಪಸ್​ ಬರುವ ಜನರು ತಕ್ಷಣವೇ ಸ್ನಾನ ಮಾಡದಿದ್ದರೆ ಈ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ ಹೊರಗಿನಿಂದ ಮನೆ ಬಂದ ಬಳಿಕ ಸ್ನಾನ ಮಾಡಬೇಕಾಗುತ್ತದೆ. ಮುಖ್ಯವಾಗಿ ಸ್ನಾನ ಮಾಡುವುದರಿಂದ ಬೆವರು ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಹಾಗೂ ಗುಳ್ಳೆಗಳು ಆಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಬೆನ್ನನ್ನು ಸರಿಯಾಗಿ ಉಜ್ಜದೇ ಇದ್ದರೂ ಕೂಡ ಈ ಸಮಸ್ಯೆ ಕಂಡು ಬರಬಹುದು.

ಅನೇಕ ಜನರು ತಮ್ಮ ಬೆನ್ನು ಸರಿಯಾಗಿ ಉಜ್ಜಿಕೊಳ್ಳುವುದಿಲ್ಲ. ಇದರಿಂದ ಮೇಲ್ಮೈ ಸ್ವಚ್ಛವಾಗುವುದಿಲ್ಲ. ಚರ್ಮದಲ್ಲಿ ಎಣ್ಣೆ ಮತ್ತು ಕೊಳೆ ಸಂಗ್ರಹವಾಗಿ ಮೊಡವೆ ಸಮಸ್ಯೆ ಉಂಟಾಗುತ್ತದೆ. ಬೆನ್ನನ್ನು ಚೆನ್ನಾಗಿ ಉಜ್ಜಿಕೊಳ್ಳಬೇಕು. ನಿಮ್ಮ ಚರ್ಮದ ಗುಣವನ್ನು ಆಧರಿಸಿ ಸ್ಕ್ರಬ್ಬರ್ ಆಯ್ಕೆ ಮಾಡಿಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ.

ಎಣ್ಣೆ ಮಸಾಜ್: ಟೀ ಟ್ರೀ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮದ ವಿವಿಧ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಆಗಾಗ್ಗೆ ನಿಮ್ಮ ಬೆನ್ನಿಗೆ ಮಸಾಜ್ ಮಾಡಿಕೊಳ್ಳಬೇಕಾಗುತ್ತದೆ. ಟೀ ಟ್ರೀ ಎಣ್ಣೆಯಿಂದ ತಯಾರಿಸಿದ ಲೋಷನ್‌ಗಳು, ಕ್ಲೆನ್ಸರ್‌ಗಳು ಹಾಗೂ ಕ್ರೀಮ್‌ಗಳನ್ನು ಬಳಸುವುದರಿಂದಲೂ ಉತ್ತಮ ಫಲಿತಾಂಶಗಳು ಲಭಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

ಸನ್‌ಸ್ಕ್ರೀನ್: ಬಹುತೇಕರು ಸನ್‌ಸ್ಕ್ರೀನ್ ಮುಖಕ್ಕೆ ಮಾತ್ರ ಹಚ್ಚಿಕೊಳ್ಳುತ್ತಾರೆ. ಇದು ಬೆನ್ನಿಗೆ ಕೂಡ ಹಚ್ಚಿಕೊಳ್ಳಬೇಕಾಗುತ್ತದೆ. ಮಾಲಿನ್ಯ ಹಾಗೂ ಧೂಳಿನಿಂದ ಮುಚ್ಚಿಹೋಗಿರುವ ಚರ್ಮದ ರಂಧ್ರಗಳನ್ನು ಇದು ತೆರೆಯುವಂತೆ ಮಾಡುತ್ತದೆ. ಇದು ಚರ್ಮದ ಕೋಶಗಳನ್ನು ಶುದ್ಧೀಕರಿಸುತ್ತದೆ ಹಾಗೂ ಮೊಡವೆ ಸಮಸ್ಯೆ ತಡೆಯಲು ಪೂರಕವಾಗಿದೆ. ಎಣ್ಣೆ ರಹಿತ ಸನ್‌ಸ್ಕ್ರೀನ್ ಲೋಷನ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

ಗ್ಲೈಸೆಮಿಕ್ ಸೂಚ್ಯಂಕ: ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಆಹಾರಗಳನ್ನು ಸೇವಿಸುವುದರಿಂದ ಬೆನ್ನಿನಲ್ಲಿ ಹುಣ್ಣುಗಳು ಹಾಗೂ ಮೊಡವೆಗಳ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ತರಕಾರಿಗಳು, ಧಾನ್ಯಗಳು ಹಾಗೂ ಹಣ್ಣುಗಳನ್ನು ಆಹಾರದಲ್ಲಿ ಸೇರಿಕೊಳ್ಳುವುದು ಉತ್ತಮ. ಮಹಿಳೆಯರಲ್ಲಿ ಸಡಿಲವಾದ ಕೇಶವಿನ್ಯಾಸ ಇತ್ತೀಚಿನ ದಿನಗಳಲ್ಲಿ ಒಂದು ಸ್ಟೈಲ್​ ಆಗಿದ್ದು, ಇದು ನೋಡಲು ಚೆನ್ನಾಗಿ ಕಾಣುತ್ತದೆ. ಇವು ನಿಮ್ಮ ಬೆನ್ನಿನ ಮೇಲಿನ ಮೊಡವೆಗಳಿಗೆ ಕಾರಣವಾಗುವ ಸಾಧ್ಯತೆಯನ್ನು ಹೆಚ್ಚಿರುತ್ತದೆ.

ಪೌಷ್ಟಿಕ ಆಹಾರ: ಕೂದಲು ಕಿರುಚೀಲಗಳಲ್ಲಿರುವ ಎಣ್ಣೆಗಳು ಬೆನ್ನಿನ ಚರ್ಮಕ್ಕೆ ಅಂಟಿಕೊಳ್ಳುವುದರಿಂದ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಕೂದಲು ತುದಿ ಒಡೆಯುವುದನ್ನು ತಪ್ಪಿಸಲು ಎಣ್ಣೆ ಹಚ್ಚುವಾಗ ಪೋನಿಟೇಲ್ ಅಥವಾ ಬನ್ ಕೇಶವಿನ್ಯಾಸ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಅತಿಯಾದ ಮಾನಸಿಕ ಒತ್ತಡವೂ ಬೆನ್ನಿನ ಮೇಲಿನ ಮೊಡವೆಗಳಿಗೆ ಕಾರಣವಾಗುತ್ತದೆ. ಆತಂಕವು ದೇಹದಲ್ಲಿ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಬೆನ್ನಿನ ಮೇಲೆ ಹುಣ್ಣುಗಳು ಕಾಣಿಸುತ್ತವೆ. ಈ ಸಮಸ್ಯೆ ನಿವಾರಿಸಲು ಪೌಷ್ಟಿಕಾಂಶದ ಆಹಾರ ಸೇವಿಸುವುದರ ಜೊತಗೆ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡಬೇಕು. ಇಷ್ಟೆಲ್ಲಾ ಪ್ರಯತ್ನಗಳ ಬಳಿಕವೂ ಸಮಸ್ಯೆ ಕಡಿಮೆ ಆಗದಿದ್ದರೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

Source: https://www.etvbharat.com/kn/!health/acne-removing-tips-how-to-control-pimples-on-back-kas25012401050

Leave a Reply

Your email address will not be published. Required fields are marked *