ರಿಷಬ್ ಪಂತ್ ಜೀವ ಉಳಿಸಿದ ಬಸ್ ಡ್ರೈವರ್ ನೈಜ ಘಟನೆ ಬಗ್ಗೆ ಹೇಳಿದ್ದೇನು..?

ಭಾರತೀಯ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಕಾರು ಭೀಕರವಾಗಿ ಅಪಘಾತಕ್ಕೀಡಾಗಿದೆ. ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ಇದನ್ನು ಬಸ್ ಚಾಲಕನೊಬ್ಬ ಪ್ರತ್ಯಕ್ಷವಾಗಿ ಕಂಡಿದ್ದು, ಅಲ್ಲಿ ನಡೆದದ್ದು ಏನು ಎಂಬುದನ್ನು ವಿವರಿಸಿದ್ದಾರೆ.

ಸುಶಿಲ್ ಈ ಅಪಘಾತದ ಬಗ್ಗೆ ಮಾತನಾಡಿದ್ದು, ಕಾರು ದೆಹಲಿ ಕಡೆಗೆ ಬರುತ್ತಿತ್ತು. ಈ ವೇಳೆ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರನ್ನು ಬ್ರೇಕ್ ಹಾಕಿ ನಿಲ್ಲಿಸಲಾಗಿದೆ. ಅಷ್ಟರಲ್ಲಾಗಲೇ ಕಾರು ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು, ಸ್ಕಿಡ್ ಆಗಿ ಬೆಂಕಿ ಹೊತ್ತಿಕೊಂಡಿತ್ತು.

ಕಾರು ಬೆಂಕಿಯಿಂದ ಹೊತ್ತಿ ಉರಿಯುತ್ತಿತ್ತು. ಕಾರಿನ ಒಳಗಿದ್ದ ವ್ಯಕ್ತಿ ನಾನು ರಿಷಬ್ ಪಂತ್ ಎಂದು ಕೂಗಿದರು. ಕಾರಿನ ಗಾಜು ಹೊಡೆದು ಅವರನ್ನು ಹೊರಗೆ ತರಲಾಯಿತು ಎಂದು ಹೇಳಿದ್ದಾರೆ. ಅವರನ್ನು ಕಾರಿನಿಂದ ಹೊರಗೆ ತರುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಇನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಡಾಮಿ ಈ ಬಗ್ಗೆ ಗಮನಹರಿಸಿದ್ದು, ಎಲ್ಲಾ ಸೌಕರ್ಯವನ್ನು ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಅವರ ಆರೋಗ್ಯದ ಬಗ್ಗೆ ವೈದ್ಯರ ಬಳಿ ಅಪ್ಡೇಟ್ ಪಡೆಯುತ್ತಿದ್ದಾರೆ.

The post ರಿಷಬ್ ಪಂತ್ ಜೀವ ಉಳಿಸಿದ ಬಸ್ ಡ್ರೈವರ್ ನೈಜ ಘಟನೆ ಬಗ್ಗೆ ಹೇಳಿದ್ದೇನು..? first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/tdLqfim
via IFTTT

Leave a Reply

Your email address will not be published. Required fields are marked *