ವಾಟ್ಸ್‌ಆ್ಯಪ್ ಹೊಸ ನಿಯಮ: ಅಕ್ಟೋಬರ್ 1 ರಿಂದ ಮೆಸೇಜ್‌ಗಳಿಗೆ ಶುಲ್ಕ! ಸಾಮಾನ್ಯ ಬಳಕೆದಾರರ ಮೇಲಾಗುವ ಪರಿಣಾಮವೇನು?

ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್‌ಆ್ಯಪ್ (WhatsApp), ಅಕ್ಟೋಬರ್ 1 ರಿಂದ ತನ್ನ ‘ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್’ (WhatsApp Business API) ನಿಯಮಗಳಲ್ಲಿ ಮಹತ್ವದ ಬದಲಾವಣೆ ತರುತ್ತಿದೆ. ಹೊಸ ಅಪ್‌ಡೇಟ್ ಪ್ರಕಾರ, ಗ್ರಾಹಕರಿಗೆ ಕಳುಹಿಸುವ ಕೆಲವು ನಿರ್ದಿಷ್ಟ ಸೇವಾ ಸಂದೇಶಗಳಿಗೆ ಇನ್ನುಮುಂದೆ ದರ ಪಾವತಿಸಬೇಕಾಗುತ್ತದೆ. ಹಾಗಾದರೆ ಇದರಿಂದ ಸಾಮಾನ್ಯ ಬಳಕೆದಾರರಿಗೆ ತೊಂದರೆಯಾಗಲಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ವಾಟ್ಸ್‌ಆ್ಯಪ್‌ನ ಹೊಸ ಶುಲ್ಕ ನೀತಿಯ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ, ಸಾಮಾನ್ಯ ಬಳಕೆದಾರರಲ್ಲಿ ಒಂದಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಆದರೆ ಈ ಹೊಸ ನಿಯಮಗಳಿಗೂ, ಸಾಮಾನ್ಯ ವಾಟ್ಸ್‌ಆ್ಯಪ್ ಬಳಕೆದಾರರಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ನೆಮ್ಮದಿಯ ವಿಚಾರ.

ಸಾಮಾನ್ಯ ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ! ನಾವು ದೈನಂದಿನ ಸಂವಹನಕ್ಕೆ ಬಳಸುವ ರೆಗ್ಯುಲರ್ ವಾಟ್ಸ್‌ಆ್ಯಪ್ ಆ್ಯಪ್ ಆಗಲಿ, ಅಥವಾ ಸಣ್ಣ ವ್ಯಾಪಾರಿಗಳು ಬಳಸುವ ‘ವಾಟ್ಸ್‌ಆ್ಯಪ್ ಬಿಸಿನೆಸ್ ಆ್ಯಪ್’ (WhatsApp Business App) ಆಗಲಿ ಸಂಪೂರ್ಣ ಉಚಿತವಾಗಿಯೇ ಮುಂದುವರಿಯಲಿದೆ. ನೀವು ನಿಮ್ಮ ಸ್ನೇಹಿತರು, ಕುಟುಂಬಸ್ಥರು ಅಥವಾ ಕಚೇರಿ ಕೆಲಸಗಳಿಗೆ ಕಳುಹಿಸುವ ಸಂದೇಶಗಳಿಗೆ, ಮಾಡುವ ಕರೆಗಳಿಗೆ ಎಂದಿನಂತೆ ಯಾವುದೇ ಶುಲ್ಕವಿರುವುದಿಲ್ಲ.

ಹಾಗಾದರೆ ಶುಲ್ಕ ಯಾರಿಗೆ ಬೀಳುತ್ತದೆ? ಈ ಹೊಸ ನಿಯಮ ಕೇವಲ ‘ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌‌ಫಾರ್ಮ್’ (WhatsApp Business API) ಬಳಸುವ ದೊಡ್ಡ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ಮಾತ್ರ ಅನ್ವಯಿಸುತ್ತದೆ. ಬ್ಯಾಂಕ್‌ಗಳು, ಇ-ಕಾಮರ್ಸ್ ಸಂಸ್ಥೆಗಳು (ಅಮೆಜಾನ್, ಫ್ಲಿಪ್‌ಕಾರ್ಟ್ ಇತ್ಯಾದಿ), ವಿಮಾನಯಾನ ಸಂಸ್ಥೆಗಳು ಮುಂತಾದವುಗಳು ಏಕಕಾಲದಲ್ಲಿ ಲಕ್ಷಾಂತರ ಗ್ರಾಹಕರಿಗೆ ಆಟೋಮ್ಯಾಟಿಕ್ ಆಗಿ ಸಂದೇಶಗಳನ್ನು (OTP, ಆಫರ್, ಆರ್ಡರ್ ಸ್ಟೇಟಸ್) ಕಳುಹಿಸಲು ಈ ವಿಶೇಷ ಪ್ಲಾಟ್‌ಫಾರ್ಮ್ ಬಳಸುತ್ತವೆ. ಇಂತಹ ಸಂಸ್ಥೆಗಳು ಕಳುಹಿಸುವ ಮೆಸೇಜ್‌ಗಳಿಗೆ ಅಕ್ಟೋಬರ್ 1 ರಿಂದ ಶುಲ್ಕ ಪಾವತಿಸಬೇಕಾಗುತ್ತದೆ.

ಅಕ್ಟೋಬರ್ 1 ರಿಂದ ಆಗುವ ಪ್ರಮುಖ ಬದಲಾವಣೆಗಳೇನು?

  • 24 ಗಂಟೆಗಳ ಉಚಿತ ಸೇವೆ ಕಡಿತ: ಈ ಹಿಂದೆ ಗ್ರಾಹಕರು ವಾಟ್ಸ್‌ಆ್ಯಪ್ ಮೂಲಕ ಸಂಸ್ಥೆಯನ್ನು ಸಂಪರ್ಕಿಸಿದರೆ, ಮುಂದಿನ 24 ಗಂಟೆಗಳ ಅವಧಿಯಲ್ಲಿ ಕಂಪನಿಗಳು ಕಳುಹಿಸುವ ಆರ್ಡರ್ ಟ್ರ್ಯಾಕಿಂಗ್, ಡೆಲಿವರಿ ಅಪ್‌ಡೇಟ್ ಮುಂತಾದ ಮೆಸೇಜ್‌ಗಳು ಉಚಿತವಾಗಿದ್ದವು. ಆದರೆ ಅಕ್ಟೋಬರ್ 1 ರಿಂದ 24 ಗಂಟೆಗಳ ವಿಂಡೋ ಮುಂದುವರಿದರೂ, ಯುಟಿಲಿಟಿ ಮತ್ತು ಸೇವಾ ಸಂದೇಶಗಳಿಗೆ ದರ ಅನ್ವಯವಾಗುತ್ತದೆ.
  • ಮೊದಲ 1,000 ಸಂದೇಶಗಳು ಉಚಿತ: ಕಂಪನಿಗಳಿಗೆ ರಿಲೀಫ್ ನೀಡುವ ನಿಟ್ಟಿನಲ್ಲಿ, ಪ್ರತಿ ತಿಂಗಳು ಒಂದು ಬಿಸಿನೆಸ್ ನಂಬರ್‌ನಿಂದ ಕಳುಹಿಸಲಾಗುವ ಮೊದಲ 1,000 ಸೇವಾ ಸಂದೇಶಗಳು ಸಂಪೂರ್ಣ ಉಚಿತವಾಗಿರಲಿವೆ. ಈ ಮಿತಿ ದಾಟಿದ ನಂತರವಷ್ಟೇ ಪ್ರತಿ ಸಂದೇಶಕ್ಕೆ ಶುಲ್ಕ ಲೆಕ್ಕಹಾಕಲಾಗುತ್ತದೆ.

ಯಾವ ಮೆಸೇಜ್‌ಗೆ ಎಷ್ಟು ದರ? (ಭಾರತದಲ್ಲಿನ ಅಂದಾಜು ದರಗಳು) ಮೆಟಾ ಸಂಸ್ಥೆಯು ಸಂದೇಶಗಳ ಸ್ವರೂಪಕ್ಕೆ ಅನುಗುಣವಾಗಿ ದರವನ್ನು ನಿಗದಿಪಡಿಸಿದೆ:

  1. ಯುಟಿಲಿಟಿ ಮತ್ತು ಸೇವಾ ಸಂದೇಶಗಳು (Utility & Service Messages): ಆರ್ಡರ್ ಕನ್ಫರ್ಮೇಶನ್, ಡೆಲಿವರಿ ಅಪ್‌ಡೇಟ್, ಬಿಲ್ಲಿಂಗ್ ಮಾಹಿತಿ ಇತ್ಯಾದಿಗಳಿಗೆ ಮೂಲ ದರ 11.5 ಪೈಸೆ ಇರಲಿದೆ. ಇದಕ್ಕೆ ಶೇ. 18ರಷ್ಟು ಜಿಎಸ್‌ಟಿ ಸೇರಿಸಿದರೆ ಪ್ರತಿ ಮೆಸೇಜ್‌ಗೆ ಸುಮಾರು 14 ಪೈಸೆ ವೆಚ್ಚವಾಗಲಿದೆ. (ಉದಾಹರಣೆಗೆ: 1000 ಮೆಸೇಜ್‌ಗಳಿಗೆ ಅಂದಾಜು ₹135 ಖರ್ಚಾಗಬಹುದು).
  2. ದೃಢೀಕರಣ ಸಂದೇಶಗಳು (Authentication/OTP): ಲಾಗಿನ್ ಕೋಡ್ ಅಥವಾ ಒಟಿಪಿ ಸಂದೇಶಗಳಿಗೂ ಕೂಡ ಜಿಎಸ್‌ಟಿ ಸೇರಿ ಅಂದಾಜು 14 ಪೈಸೆ ಶುಲ್ಕವಿರಲಿದೆ.
  3. ಪ್ರಚಾರ ಸಂದೇಶಗಳು (Marketing Messages): ಹೊಸ ಆಫರ್‌ಗಳು, ಡಿಸ್ಕೌಂಟ್ ಮತ್ತು ಜಾಹೀರಾತು ಮೆಸೇಜ್‌ಗಳಿಗೆ ದರ ತುಸು ದುಬಾರಿಯಾಗಿದೆ. ಇದರ ಮೂಲ ದರ 86 ಪೈಸೆಯಷ್ಟಿದ್ದು, ಜಿಎಸ್‌ಟಿ ಸೇರಿಸಿದರೆ ಪ್ರತಿ ಮೆಸೇಜ್‌ಗೆ ಅಂದಾಜು ₹1.02 ರೂ. ಪಾವತಿಸಬೇಕಾಗುತ್ತದೆ.

ವ್ಯವಹಾರ ನಡೆಸುವ ಸಂಸ್ಥೆಗಳು ಗಮನಿಸಲೇಬೇಕಾದ ಅಂಶ! ವಾಟ್ಸ್‌ಆ್ಯಪ್ ಎಪಿಐ (API) ಬಳಸುತ್ತಿರುವ ಸಂಸ್ಥೆಗಳು ಸೆಪ್ಟೆಂಬರ್ 30ರ ಒಳಗಾಗಿ ತಮ್ಮ ಖಾತೆಯಲ್ಲಿ ‘ಪಾವತಿ ವಿಧಾನ’ವನ್ನು (Payment Method/Credit card details) ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಸೆಪ್ಟೆಂಬರ್ 30ರ ಗಡುವು ಮೀರಿದರೆ, ಅಕ್ಟೋಬರ್ 1 ರಿಂದ ನಿಮ್ಮ ಗ್ರಾಹಕರಿಗೆ ಹೋಗಬೇಕಾದ ಪ್ರಮುಖ ಸಂದೇಶಗಳ (OTP, ಆರ್ಡರ್ ಅಪ್‌ಡೇಟ್ಸ್) ವಿತರಣೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಮೆಟಾ ಎಚ್ಚರಿಕೆ ನೀಡಿದೆ.

ಉದ್ಯಮಿಗಳಿಗೆ ಒಂದಷ್ಟು ಸಲಹೆಗಳು: ಈ ಹೊಸ ನಿಯಮದಿಂದ ಬಿಸಿನೆಸ್ ನಿರ್ವಹಣಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಉದ್ಯಮಗಳು ಕೇವಲ ಅತ್ಯಗತ್ಯ ಮಾಹಿತಿಗಳನ್ನು (ಉದಾ: OTP, ಡೆಲಿವರಿ ಟ್ರ್ಯಾಕಿಂಗ್) ಮಾತ್ರ ವಾಟ್ಸ್‌‌ಆ್ಯಪ್ ಮೂಲಕ ಕಳುಹಿಸಿ, ಉಳಿದ ಸಾಮಾನ್ಯ ಮಾಹಿತಿ ಮತ್ತು ಪ್ರಚಾರದ ವಿಚಾರಗಳನ್ನು ಇಮೇಲ್ (Email) ಅಥವಾ ಆ್ಯಪ್ ಪುಶ್-ನೋಟಿಫಿಕೇಶನ್ ಮೂಲಕ ಕಳುಹಿಸಿದರೆ ಸಾಕಷ್ಟು ಹಣ ಉಳಿತಾಯ ಮಾಡಬಹುದು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *