ನಡೆಯಬೇಕಾದರೆ ಮಂಡಿಯಲ್ಲಿ ಕಟ್ ಕಟ್ ಎನ್ನುವ ಶಬ್ದ! ಏಕೆ ಹೀಗೆ?

ಕೆಲವರಿಗೆ ಕುಳಿತುಕೊಂಡಾಗ, ನಡೆದಾಗ ಇದ್ದಕ್ಕಿದ್ದಂತೆ ಮಂಡಿಗಳ ಭಾಗದಿಂದ ಕಟ್ ಕಟ್ ಎನ್ನುವ ಶಬ್ದ ಕೇಳಿ ಬರುತ್ತದೆ. ಇದು ಆಶ್ಚರ್ಯವನ್ನು ಉಂಟು ಮಾಡಬಹುದು ಮತ್ತು ಕಾರಣವನ್ನು ತಿಳಿದುಕೊಳ್ಳುವ ಕುತೂಹಲ ತರಬಹುದು. ಬನ್ನಿ ಈ ಲೇಖನದಲ್ಲಿ ಈ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ದೇಹದ ಬಹು ಮುಖ್ಯ ಅಂಗಗಳು ಎಂದರೆ ಅದು ಮೂಳೆಗಳು. ಮೂಳೆಗಳಲ್ಲಿ ಕೀಲುಗಳು ಇನ್ನು ಮುಖ್ಯವಾಗುತ್ತದೆ. ಅದರಲ್ಲೂ ನಮ್ಮ ಮಂಡಿಯ ಭಾಗದ ಮೂಳೆಗಳು ನಮಗೆ ನಡೆಯಲು, ಒಂದು ಕಡೆ ಕುಳಿತುಕೊಳ್ಳಲು, ನಿಂತುಕೊಳ್ಳಲು ಮತ್ತು ನಮ್ಮ ದೇಹವನ್ನು ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತವೆ. ಇಲ್ಲಿ ಬರುವ ಲಿಗಾಮೆಂಟ್ ಈ ನಿಟ್ಟಿನಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವೊಮ್ಮೆ ನಾವು ನಡೆಯುವಾಗ ಇದ್ದಕ್ಕಿದ್ದಂತೆ ಮಂಡಿಗಳ ಭಾಗದಲ್ಲಿ ಕಟ್ ಕಟ್ ಎನ್ನುವ ಶಬ್ದ ಕೇಳಿ ಬರುತ್ತದೆ. ಕುಳಿತುಕೊಂಡಾಗ ಈ ರೀತಿ ಆಗುತ್ತದೆ. ಈ ಬಗ್ಗೆ ಪಿ ಎಸ್ ಆರ್ ಐ ಹಾಸ್ಪಿಟಲ್ ನಲ್ಲಿ ಮೂಳೆ ರೋಗ ತಜ್ಞರಾಗಿರುವ ಡಾಕ್ಟರ್ ಗೌರವ ಪ್ರಕಾಶ್ ಭಾರದ್ವಾಜ್ ಹೀಗೆ ಹೇಳುತ್ತಾರೆ.

ಯಾವಾಗ ಮಂಡಿಗಳ ಭಾಗದಿಂದ ಈ ರೀತಿ ಶಬ್ದ ಬರುತ್ತದೆ?

ಯಾವಾಗ ಮಂಡಿಗಳ ಭಾಗದಿಂದ ಈ ರೀತಿ ಶಬ್ದ ಬರುತ್ತದೆ?
  • ನಮ್ಮ ಮಂಡಿ ಭಾಗದಲ್ಲಿ ಕಂಡುಬರುವ ಕೀಲು ಸಂಕೀರ್ಣ ವಾಗಿದ್ದು, ಇಲ್ಲಿ ಲಿಗಮೆಂಟ್, ಮೂಳೆ, ಟೆಂಡನ್, ಕಾರ್ಟಿಲೆಜ್ ಇರುತ್ತದೆ. ನಾವು ನಡೆಯುವ ಸಂದರ್ಭದಲ್ಲಿ ಇವುಗಳೆಲ್ಲಾ ಒಂದಕ್ಕೊಂದು ಸಂಬಂಧಿಸಿದಂತೆ ಸಹಕರಿಸಿ ಕೆಲಸ ಮಾಡುತ್ತವೆ.
  • ಇಲ್ಲಿ ನಡೆಯುವ ಅಸಮತೋಲನ ಮಂಡಿಗಳ ಭಾಗದಲ್ಲಿ ಕಟ್ ಕಟ್ ಎನ್ನುವ ಶಬ್ದ ಬರುವಂತೆ ಮಾಡುತ್ತವೆ. ಮಂಡಿಗಳ ಭಾಗದಲ್ಲಿ ಗ್ಯಾಸ್ ಗುಳ್ಳೆಗಳು ಈ ತರಹದ ಶಬ್ದ ಬರಲು ಕಾರಣವಾಗುತ್ತವೆ. ನಾವು ಮಂಡಿ ಮಡಚಿದಾಗ ಈ ಗುಳ್ಳೆಗಳು ಒಡೆದು ಶಬ್ದ ಬರುತ್ತದೆ. ಇದು ಸಹಜ ಪ್ರಕ್ರಿಯೆ ಆಗಿರುತ್ತದೆ ಎಂದು ಹೇಳಬಹುದು ಎನ್ನುತ್ತಾರೆ.

ಮಂಡಿಯ ಭಾಗದ ಕಾರ್ಟಿಲೆಜ್ ​

ಮಂಡಿಯ ಭಾಗದ ಕಾರ್ಟಿಲೆಜ್ <sup>​</sup>
  • ಮತ್ತೊಂದು ಕಾರಣವನ್ನು ನೋಡುವುದಾದರೆ, ಮಂಡಿಯ ಭಾಗದ ಕಾರ್ಟಿಲೆಜ್ ಹರಿದು ಹೋಗುವುದು ಕೂಡ ಇರುತ್ತದೆ. ಎರಡು ಮೂಳೆಗಳ ಮದ್ಯೆ ಇರುವ ಈ ಭಾಗವು ಮೂಳೆಗಳ ಘರ್ಷಣೆಯನ್ನು ತಡೆಯುತ್ತದೆ.
  • ನಮ್ಮ ಚಟುವಟಿಕೆಗಳು ಹೆಚ್ಚಾದರೆ ವಯಸ್ಸಾದಂತೆ ಈ ಪದರವು ತೆಳ್ಳಗಾಗುತ್ತಾ ಬರುತ್ತದೆ. ಮೂಳೆಗಳ ನಡುವೆ ಕಂಡುಬರುವ ಘರ್ಷಣೆ ಈ ರೀತಿಯ ಶಬ್ದ ಬರುವಂತೆ ಮಾಡುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಆಸ್ಟಿಯೋ ಆರ್ಥೋರಿಟಿಸ್ ಎಂದು ಕರೆಯಲಾಗುತ್ತದೆ.​

ಲಿಗಾಮೆಂಟ್ ಸರಿಯಾದ ಸ್ಥಳದಿಂದ ಪಕ್ಕಕ್ಕೆ ಜರುಗಿದ್ದರೆ

ಇನ್ನು ಕೆಲವೊಮ್ಮೆ ಮಂಡಿಗಳ ಭಾಗದಲ್ಲಿ ಇರುವಂತಹ ಮಾಂಸ ಖಂಡ ಗಳು ಅಥವಾ ಲಿಗಾಮೆಂಟ್ ಸರಿಯಾದ ಸ್ಥಳದಿಂದ ಪಕ್ಕಕ್ಕೆ ಜರುಗಿದ್ದರೆ ಕೂಡ ಈ ರೀತಿ ಶಬ್ದ ಬರುತ್ತದೆ. ಒಬ್ಬ ವ್ಯಕ್ತಿ ಅತ್ತಿತ್ತ ಚಲಿಸಿದಾಗ, ವ್ಯಾಯಾಮ ಮಾಡಿದಾಗ, ಜಾಸ್ತಿ ಹೊತ್ತು ಒಂದೇ ಕಡೆ ಕುಳಿತುಕೊಂಡಿ ದ್ದಾಗ, ಮಂಡಿಯಿಂದ ಈ ರೀತಿಯ ಶಬ್ದ ಕೇಳಿಸಬಹುದು.

ಯಾವಾಗ ಎಚ್ಚರಿಕೆಯಿಂದ ಇರಬೇಕು?

ಯಾವಾಗ ಎಚ್ಚರಿಕೆಯಿಂದ ಇರಬೇಕು?
  • ಒಂದು ವೇಳೆ ನಿಮ್ಮ ಮಂಡಿಗಳ ಭಾಗದಿಂದ ಈ ರೀತಿ ಶಬ್ದ ಕೇಳಿಸುತ್ತಿದ್ದು, ಯಾವುದೇ ನೋವು, ಊತ ಅಥವಾ ಇನ್ನಿತರ ತೊಂದರೆಗಳು ಇಲ್ಲದಿದ್ದರೆ, ನೀವು ಸುಲಭವಾಗಿ ಇದನ್ನು ಹಗುರವಾದ ವ್ಯಾಯಾಮಗಳನ್ನು ಮಾಡುವ ಮೂಲಕ ಮತ್ತು ಆರೋಗ್ಯಕರವಾದ ತೂಕವನ್ನು ನಿರ್ವಹಣೆ ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಹೊರ ಬರಬಹುದು.
  • ಒಂದು ವೇಳೆ ನೋವು, ಊತ, ಇದ್ದರೆ ಅಥವಾ ನಡೆಯಲು ಕಷ್ಟವಾಗು ತ್ತಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಸಮಯಕ್ಕೆ ಸರಿಯಾಗಿ ರೋಗ ನಿರ್ಣಯ ಮಾಡಿ ಕೊಳ್ಳುವುದು ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಆರೋಗ್ಯಕರ ವಾದ ಮಂಡಿಗಳನ್ನು ಹೊಂದಲು ಸಹಾಯಮಾಡುತ್ತದೆ.

ಹಕ್ಕು ನಿರಾಕರಣೆ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲೂ ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಸಮಗ್ರ ಸುದ್ದಿ ಇದರ ಸತ್ಯತೆ, ನಿಖರತೆ ಮತ್ತು ಪರಿಣಾಮದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Source : Vijayakarnataka

Views: 25

Leave a Reply

Your email address will not be published. Required fields are marked *