ಬೇಸಿಗೆಯಲ್ಲಿ ದಿನಕ್ಕೆ ಒಮ್ಮೆಯಾದರೂ ನಿಂಬೆ ನೀರು ಕುಡಿಯಬೇಕಂತೆ, ಯಾಕೆಂದ್ರೆ?

ನಮ್ಮ ಆರೋಗ್ಯಕ್ಕೆ ಉತ್ತಮ ಪ್ರಭಾವ ಒದಗಿಸುವ ನಿಂಬೆ ಹಣ್ಣಿನ ನೀರನ್ನು ದಿನದಲ್ಲಿ ಒಂದು ಬಾರಿ ಸೇವಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ.

ಈಗಾಗಲೇ ಬೇಸಿಗೆ ಶುರುವಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಮುಖ್ಯವಾಗಿ ದೇಹದಲ್ಲಿ ಇರುವಂತಹ ನೀರಿನ ಅಂಶವೆಲ್ಲಾ ಬೆವರಿನ ರೂಪದಲ್ಲಿ ಹರಿದು ಹೋಗುತ್ತದೆ. ಇದು ನಿರ್ಜಲೀಕರಣ ಆಗುವಂತೆ ಮಾಡುತ್ತದೆ. ನಮ್ಮ ದೇಹದಲ್ಲಿ ಇರುವಂತಹ ಎಲ್ಲಾ ಅಂಗಾಂಗಗಳಿಗೆ ಸಮರ್ಪಕವಾಗಿ ನೀರಿನ ಅಂಶ ಸಿಕ್ಕರೆ ಅವುಗಳ ಕಾರ್ಯ ಚಟುವಟಿಕೆ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ನಿಂಬೆ ಹಣ್ಣಿನ ಪಾನೀಯ ಅದ್ಬುತವಾಗಿ ಕೆಲಸ ಮಾಡುತ್ತದೆ. ಇದರ ಇನ್ನಿತರ ಆರೋಗ್ಯ ಪ್ರಯೋಜನಗಳನ್ನು ನೋಡುವುದಾದರೆ….

ರೋಗ-ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ-ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಯಾವುದೇ ಸಂದರ್ಭದಲ್ಲಿ ಕಂಡುಬರುವಂತಹ ನೆಗಡಿ, ಶೀತ, ಜ್ವರ, ಕೆಮ್ಮು ಮತ್ತು ಇತ್ಯಾದಿ ಸೋಂಕುಗಳ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಜೀರ್ಣ ಶಕ್ತಿ ವೃದ್ಧಿಸುತ್ತೆ!

ಜೀರ್ಣ ಶಕ್ತಿ ವೃದ್ಧಿಸುತ್ತೆ!

ನಿಂಬೆಹಣ್ಣಿನ ಪಾನೀಯವನ್ನು ಆಗಾಗ ಪಡೆಯುವುದರಿಂದ ನಮ್ಮ ಜೀರ್ಣ ಶಕ್ತಿ ಹೆಚ್ಚಾಗುತ್ತದೆ ಮತ್ತು ನಾವು ಸೇವಿಸಿದ ಆಹಾರಗಳನ್ನು ಜೀರ್ಣ ಮಾಡಲು ಅಗತ್ಯವಾಗಿ ಬೇಕಾದ ಬೈಲ್ ರಸ ಉತ್ಪತ್ತಿಗೆ ನೆರವಾಗುತ್ತದೆ. ಇದು ನಮ್ಮ ಮಲಬದ್ಧತೆ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸುತ್ತದೆ. ಜೊತೆಗೆ ಹೊಟ್ಟೆ ಉಬ್ಬರ, ಅಜೀರ್ಣತೆ ಇತ್ಯಾದಿ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ. ಸುಲಭವಾಗಿ ಕರುಳಿನ ಚಲನೆ ಆಗುತ್ತದೆ.

ನಿರ್ಜಲೀಕರಣ ದೂರವಾಗುತ್ತದೆ

ನಿರ್ಜಲೀಕರಣ ದೂರವಾಗುತ್ತದೆ

ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಕಾರಣ ಅತಿಯಾದ ಬೆವರು. ಈ ಸಂದರ್ಭದಲ್ಲಿ ನಮ್ಮ ದೇಹದ ನೀರಿನ ಅಂಶವನ್ನು ಸಮತೋಲನ ಮಾಡಿಕೊಳ್ಳಬೇಕು ಎಂದರೆ ನಾವು ನಿಂಬೆ ಹಣ್ಣಿನ ತರಹದ ಆರೋಗ್ಯಕರ ಪಾನೀಯಗಳನ್ನು ಸೇವನೆ ಮಾಡಬೇಕು. ಇದರಿಂದ ಚರ್ಮದ ಸೌಂದರ್ಯ, ಕಿಡ್ನಿಗಳ ಆರೋಗ್ಯ ಮತ್ತು ನಮ್ಮ ಸಂಪೂರ್ಣ ದೈಹಿಕ ಆರೋಗ್ಯ ರಕ್ಷಣೆ ಆಗುತ್ತದೆ.

ದೇಹದ ತೂಕಕ್ಕೆ ಅನುಕೂಲಕರ

ದೇಹದ ತೂಕಕ್ಕೆ ಅನುಕೂಲಕರ

ಲೆಮನ್ ವಾಟರ್ ನಲ್ಲಿ ಕಡಿಮೆ ಕ್ಯಾಲೋರಿಗಳು ಇರಲಿದ್ದು, ಬೇಸಿಗೆಯಲ್ಲಿ ಅತಿ ಹೆಚ್ಚು ಪ್ರಯೋಜನಗಳನ್ನು ಒದಗಿಸುತ್ತದೆ. ಇದು ನಮ್ಮ ಮೆಟ ಬೋಲಿಸಂ ವೃದ್ಧಿಸುವ ಜೊತೆಗೆ ದೇಹದ ಕೊಬ್ಬು ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ಹಸಿವಿನ ನಿಯಂತ್ರಣದಲ್ಲಿ ಕೂಡ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನ ಪಾನೀಯಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ.

ಚರ್ಮದ ಆರೋಗ್ಯ ಹೆಚ್ಚಾಗುತ್ತದೆ​

ಚರ್ಮದ ಆರೋಗ್ಯ ಹೆಚ್ಚಾಗುತ್ತದೆ<sub>​</sub>
  • ನಿಂಬೆ ಹಣ್ಣಿನ ನೀರಿನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಚರ್ಮದ ಮೇಲಿನ ಮೊಡವೆ, ಸುಕ್ಕುಗಳನ್ನು ಹೋಗಲಾಡಿಸುತ್ತದೆ. ಚರ್ಮಕ್ಕೆ ಇದು ನೀರಿನ ಅಂಶವನ್ನು ಒದಗಿಸುತ್ತದೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಾಗಿಸುತ್ತದೆ.
  • ವಿಷಕಾರಿ ಅಂಶಗಳನ್ನು ದೂರವಾಗಿಸುತ್ತದೆ: ನಿಂಬೆ ಹಣ್ಣಿನ ನೀರಿನಲ್ಲಿ ನೈಸರ್ಗಿಕವಾಗಿ ವಿಷಕಾರಿ ಅಂಶಗಳನ್ನು ನಮ್ಮ ಕಿಡ್ನಿ ಹಾಗೂ ಲಿವರ್ ಗಳಿಂದ ದೂರವಾಗಿಸುವ ಕೆಲಸ ಮಾಡುತ್ತದೆ. ಇದು ನಮ್ಮ ದೇಹವನ್ನು ಸ್ವಚ್ಚಪಡಿಸುತ್ತದೆ. ಇದರಿಂದ ನಮ್ಮ ದೇಹ ಹಗುರಾಗುತ್ತದೆ. ನಮ್ಮ ದೇಹಕ್ಕೆ ಶಕ್ತಿ ಒದಗಿಸುತ್ತದೆ.

ರಕ್ತದ ಒತ್ತಡ ನಿರ್ವಹಣೆ ಮಾಡುತ್ತದೆ

ರಕ್ತದ ಒತ್ತಡ ನಿರ್ವಹಣೆ ಮಾಡುತ್ತದೆ

ನಿಂಬೆ ಹಣ್ಣಿನ ಪಾನೀಯದಲ್ಲಿ ನಮ್ಮ ಅಧಿಕ ರಕ್ತದ ಒತ್ತಡವನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ನಮ್ಮ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ರಕ್ತನಾಳಗಳಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ. ನಿಂಬೆ ಹಣ್ಣಿನ ಪಾನೀಯ ನಮ್ಮ ರಕ್ತದ ಒತ್ತಡವನ್ನು ನಿರ್ವಹಣೆ ಮಾಡುತ್ತದೆ.

ಬಾಯಿಯ ದುರ್ವಾಸನೆ ದೂರವಾಗುತ್ತದೆ

ಬಾಯಿಯ ದುರ್ವಾಸನೆ ದೂರವಾಗುತ್ತದೆ

ನೈಸರ್ಗಿಕವಾಗಿ ನಮ್ಮ ಬಾಯಿಯಲ್ಲಿನ ದುರ್ವಾಸನೆ ದೂರ ಮಾಡುವ ಕೆಲಸವನ್ನು ನಿಂಬೆ ಹಣ್ಣಿನ ಪಾನೀಯ ಮಾಡುತ್ತದೆ. ಬಾಯಿಯಲ್ಲಿ ಬ್ಯಾಕ್ಟೀರಿಯಾಗಳ ನಿರ್ವಹಣೆ ಆಗುತ್ತದೆ. ಬೆಳಗಿನ ಸಮಯದಲ್ಲಿ ನಿಂಬೆ ಹಣ್ಣಿನ ಪಾನೀಯ ಸೇವಿಸುವುದರಿಂದ ಬಾಯಿಯಲ್ಲಿ ಸೂಕ್ಷ್ಮಾಣುಗಳು ಹೆಚ್ಚಾಗುವ ಸಾಧ್ಯತೆ ಕಡಿಮೆ ಇರುತ್ತದೆ.

Source: https://vijaykarnataka.com/lifestyle/health/from-control-bp-to-boost-immunity-know-the-benefits-of-drinking-one-glass-of-lemon-water-this-summer/articleshow/119032235.cms?story=7

Leave a Reply

Your email address will not be published. Required fields are marked *