ಜೂ.21ರಂದು ವಿಶ್ವ ಯೋಗ ದಿನ ಹಾಗೂ ಅಂತರಾಷ್ಟ್ರೀಯ ಸಂಗೀತ ವಿಶೇಷ ದಿನ. 

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ, ಜೂ,19  ಅಂತರಾಷ್ಟ್ರೀಯ ಯೋಗ ಹಾಗೂ ವಿಶ್ವ ಸಂಗೀತ ವಿಶೇಷ ದಿನದ ಪ್ರಯುಕ್ತ  ಅಭಿನಂದನಾ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಬೆಂಗಳೂರು ಹಾಗೂ ಚಿತ್ರದುರ್ಗ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ,ಚಿತ್ರದುರ್ಗ  ಸಹಯೋಗದಲ್ಲಿ ಜೂನ್.21ರ ಶನಿವಾರ ಸಂಜೆ 5:30 ಗಂಟೆಗೆ ನಗರದ ಸಹ್ಯಾದ್ರಿ ಬಡಾವಣೆಯ ಎರಡನೇ ಮುಖ್ಯ ರಸ್ತೆಯ ಒಂದನೇ ತಿರುವಿನ ಯೋಗ ಬಂದು ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಯೋಗಾಚಾರ್ಯ ಎಲ್.ಎಸ್ .ಚಿನ್ಮಯಾನಂದ ವಹಿಸಲಿದ್ದು ,ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎಮ್ .ಗುರುನಾಥ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಹುರುಳಿ ಎಂ. ಬಸವರಾಜ್ ಭಾಗವಹಿಸಲಿದ್ದು, ಅಭಿನಂದನೆಗೆ ಭಜನಾರಾಗಲಿರುವ ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ಪಂಡಿತ್ ತೋಟಪ್ಪ ಉತ್ತಂಗಿ ಎಂ. ಅವರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9986295285ಗೆ ಸಂಪರ್ಕಿಸಲು ಸಂಘಟನೆಗಳವರು ಕೋರಿದ್ದಾರೆ.

Leave a Reply

Your email address will not be published. Required fields are marked *