ಚಿತ್ರದುರ್ಗ ಮೇ. 7
ವರದಿ ಮತ್ತು ಪೋಟೋ ಕೃಪೆ ಸುರೇಶ್ ಪಟ್ಟಣ್
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 50 ವರ್ಷದ ರಾಜಕೀಯ ಜೀವನದ ಹಿನ್ನಲೆಯಲ್ಲಿ ಮೇ. 9 ರಂದು ಚಿತ್ರದುರ್ಗದಲ್ಲಿ ನಡೆಸಲು ಉದ್ದೇಶಿಸಿರುವ ಅಭೀಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಮೇ. 8 ರಂದು ಬಿ.ಎಸ್.ಯಡಿಯೂರಪ್ಪರವರ ಪುರ ಪ್ರವೇಶವಾಗಲಿದೆ ಈ ಸಮಯದಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತವನ್ನು ಮಾಡಲು ಸಕಲ ಸಿದ್ದತೆಯನ್ನು ಮಾಡಲಾಗಿದೆ ಎಂದು ಮೆರವಣಿಗೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ರಾಜ್ಯ ಓಬಿಸಿ ಮೋಚಾಧ ಅಧ್ಯಕ್ಷರಾದ ರಘು ಕೌಟಿಲ್ಯ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜನ ಸೇವೆಗಾಗಿಯೇ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದಾರೆ. ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸವನ್ನು ಮಾಡಿದ್ದಾರೆ. ಅಧಿಕಾರಕ್ಕಾಗಿ ಎಂದು ಸಹಾ ಹೋರಾಟವನ್ನು ಮಾಡಲಿಲ್ಲ, ಬಡವರ ಕಣ್ಣಿರನ್ನು ಒರೆಸುವ ಸಲುವಾಗಿ ಕೆಲಸವನ್ನು ಮಾಡಿದ್ದಾರೆ 50 ವರ್ಷ ಬಡವರ ಪರವಾಗಿ ಕೆಲಸವನ್ನು ಮಾಡಿದ್ದಾರೆ ಸೈಕಲ್ ಮೇಲೆ ರಾಜ್ಯ ಪ್ರವಾಸ ಮಾಡಿ, ಪಕ್ಷವನ್ನು ಕಟ್ಟಿ ಬೆಳೆಸಿದ ಅವರ ಹೋರಾಟ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದ್ದು ಜನರ ಪ್ರೀತಿ ವಿಶ್ವಾಸದ ಮೂಲಕ ಅಧಿಕಾರವನ್ನು ಹಿಡಿಯುವ ಪ್ರಯತ್ನವನ್ನು ಮಾಡಿದ್ದಾರೆ.ಎಂದ ಅವರು ಈ ಕಾರ್ಯಕ್ರಮದಲ್ಲಿ ಯಡೆಯೂರಪ್ಪರವರ ಪ್ರಾರಂಭದಲ್ಲಿ ಬಳಸಿದ ಅಂಬಾಸಿಡರ್ ಕಾರು ಸಿಕೆಆರ್ 45 ಇಲ್ಲಿಗೆ ತರಲಾಗುವುದು ಇದನ್ನು ಜನತೆ ನೊಡಲು ಅವಕಾಶವನ್ನು ಕಲ್ಪಿಸಲಾಗಿದೆ.


ಇಂದು ಬಿಜೆಪಿ ಯಡೆಯೂರಪ್ಪರವರ ಅಭಿಮಾನಿಗಳ ಹಾಗೂ ಹಿರಿಯರು ಸೇರಿಕೊಂಡು ಅಭೀಮಾನದಿಂದ ಮಾಡುತ್ತಿರುವ ಕಾರ್ಯಕ್ರಮ ಇದಾಗಿದೆ ಎಂದರು.ಈ ಮೆರವಣಿಗೆಯಲ್ಲಿ ಆರು ಎಲ್‍ಇ.ಡಿ.ಗಳು ಇರಲ್ಲಿದ್ದು, ಒಂದೊಂದರಲ್ಲಿ ಯಡೆಯೂರಪ್ಪರವರ ಬಾಲ್ಯದಿಂದ ಹಿಡಿದ ವಿಧಾನಸೌಧವರೆಗೂ ಅವರ ಜೀವನ ಚರಿತೆಯನ್ನು ಪ್ರದರ್ಶನ ಮಾಡುವುದರ ಮೂಲಕ ಜನತೆಗೆ ಯಡೆಯೂರಪ್ಪರವರ ಸಾಧನೆಯ ಹಾದಿಯನ್ನು ತಿಳಿಸಲಾಗುವುದು.
ಮುಖ್ಯಮಂತ್ರಿಗಳಾಗಿದ್ಧಾಗ ಮಾಡಿದ ಜನಪ್ರಿಯ ಯೋಜನೆಗಳು ಭಾಗ್ಯಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ, ಕೃಷಿ ಬಜೆಟ್, ಮೊದಲಾವುಗಳ ಪ್ರದರ್ಶನಕ್ಕೆ ಬೇಕಾದ ಸಿದ್ದತೆಯನ್ನು ಈಗಾಗಲೇ ಮಾಡಲಾಗಿದೆ. 1000ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಭದೊಂದಿಗೆ ಅವರನ್ನು ಬರ ಮಾಡಿಕೊಳ್ಳಲಾಗುವುದು. ರೈತರು ಸಂಪ್ರದಾಯಿಕ ಶೈಲಿಯಲ್ಲಿ ರಾಶಿ ಪೂಜೆಯೊಂದಿಗೆ ಗೌರವವನ್ನು ಸಲ್ಲಿಸಲಿದ್ದಾರೆ. ಯಡಿಯೂರಪ್ಪರವರನ್ನು ಅಲಂಕೃತವಾದ ವಾಹನದ ಮೆರವಣಿಗೆಯಲ್ಲಿ ಕರೆÀ ತರಲಾಗುವುದು. 2000ಕ್ಕೂ ಹೆಚ್ಚಿನ ರೈತರು ನೇಗಿಲನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಇದ್ದಲ್ಲದೆ ಚಿತ್ರದುರ್ಗದ ನೆಚ್ಚಿನ ನಾಯಕಿ ಒನಕೆ ಓಬವ್ವದ ನೆಲದಲ್ಲಿ ನಾರಿ ಶಕ್ತಿ ವಂದನ್ ಕಾಯ್ದೆಗೆ ಗೌರವ ಸಲ್ಲಿಸುಲು 200 ಮಹಿಳೆಯರುನ ಒನಕೆ ಓಬವ್ವ ಪಾತ್ರಧಾರಿಗಳು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ವಿವಿಧೆಡೆಗಳಿಂದ ಪೂಜಾ ಕುಣಿತ, ಪಟ ಕುಣಿತ, ಕೋಲಾಟ, ಗಾರುಡಿ ಗೊಂಬೆ, ಚಿಟ್ಟೆಮೇಳ,ಮಹಿಳಾ ವೀರಗಾಸೆ, ಮಹಿಳಾ ತಮಟೆ, ವೀರಗಾಸೆ, ಗೂರವರ ಕುಣಿತ,ಬೇಡರವೇಷ, ಹಗಲು ವೇಷ, ಡೂಳ್ಳು ಕುಣಿತ, ಕಂಸಾಳೆ,ಮ ಕೊಂಬು ಕಹಳೆ, ಲಂಬಾಣೀ ನೃತ್ಯ, ಕೀಲು ಕುದುರೆ ರಾಜರಾಣಿ ಉಗ್ರನರಸಿಂಹ ಮಹಿಷಾಸುರ ಜೋಕರ್, ಆರೆವಾದ್ಯ,ನಂಧಿ ಧ್ವಜ ವೀರಭದ್ರ ಕುಣಿತ,ನಗಾರಿ ಸೋಮನ ಕುಣಿತ ಚಂಡೆವಾದನ ರಂಗ ಕುಣಿತ ಗೋರುಕಾನ ನೃತ್ಯ ಸೇರಿದಂತೆ 25ಕ್ಕೂ ಹೆಚ್ಚು ಸಾಂಸ್ಕøತಿಕ ಹಾಗೂ ಜನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ವೆಂಕಟೇಶ್, ಆಶ್ವಿನಿ, ಸಿದ್ದಾಪುರ ಸುರೇಶ್, ಬಸವರಾಜ್, ಸಂಪತ್ ಕುಮಾರ್, ದಗ್ಗೆ ಶಿವಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

