ಕೆಲವರು ರಾತ್ರಿ ಪೂರ್ತಿ ಎಚ್ಚರವಾಗಿದ್ದು, ಚಲನಚಿತ್ರ ಅಥವಾ ಸರಣಿ ನೋಡುವ ಅಭ್ಯಾಸ ಹೊಂದಿರುತ್ತಾರೆ. ಮೊಬೈಲ್ ಅನ್‌ಲಾಕ್ ಮಾಡಿ ಕಿವಿಗೆ ಇಯರ್‌ಫೋನ್ ಹಾಕಿಕೊಂಡು, ಕುಳಿತು ಅಥವಾ ಮಲಗಿ ಮೊಬೈಲ್ ನಲ್ಲಿ ಚಲನಚಿತ್ರಗಳನ್ನು ನೋಡುವುದಕ್ಕೆ ಆರಂಭ ಮಾಡಿದರೆ ಸಮಯ ಕಳೆದಿದ್ದೆ ಗೊತ್ತಾಗುವುದಿಲ್ಲ. ಆದರೆ ಈ ರೀತಿಯ ಅಭ್ಯಾಸ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದರೆ ಈ ರೀತಿಯ ಅಭ್ಯಾಸ ನಮ್ಮ ದೇಹಕ್ಕೆ ಹೇಗೆ ಮಾರಕ? ನಮಗೆ ತಿಳಿಯದಂತೆ ಆವರಿಸಿಕೊಳ್ಳುವ ಸಮಸ್ಯೆಯನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಿನಿಮಾ (cinema) ಅಥವಾ ಓಟಿಟಿ (OTT) ಗಳಲ್ಲಿ ಬರುವ ಹೊಸ ಹೊಸ ಸರಣಿಗಳನ್ನು ಮಿಸ್ ಮಾಡದೆಯೇ ನೋಡುವ ಅಭ್ಯಾಸ ನಿಮಗೂ ಇದ್ಯಾ? ನೀವು ಮತ್ತು ನಿಮ್ಮ ಸ್ನೇಹಿತರು ಯಾವಾಗ ಭೇಟಿ ಆದ್ರೂ ಹೊಸದಾಗಿ ಬಂದಿರುವ ಸಿನೆಮಾ ಕಥೆಗಳ ಬಗ್ಗೆಯೇ ಮಾತನಾಡುತ್ತೀರಾ? ಈ ರೀತಿ ಅಭ್ಯಾಸ ನಮ್ಮ ಮಧ್ಯೆಯೇ ಹಲವರಿಗೆ ಇರುತ್ತದೆ. ಅಷ್ಟೇ ಅಲ್ಲ ಆ ಸಿನೆಮಾ ಅಥವಾ ಸರಣಿಯನ್ನು ಅದೇ ದಿನ ರಾತ್ರಿ ಕುಳಿತು ಪೂರ್ಣಗೊಳಿಸುತ್ತಾರೆ. ಇದು ರೀಲ್ ಅಥವಾ ಸೀರಿಯಲ್ ಗಳ ವಿಷಯದಲ್ಲಿಯೂ ಹೊರತಾಗಿಲ್ಲ. ಫೋನ್ ಅನ್‌ಲಾಕ್ ಆಗಿ ಕಣ್ಣ ಮುಂದೆ ಬಂದ್ರೆ ಸಮಯ ಕಳೆದಿದ್ದೆ ತಿಳಿಯುವುದಿಲ್ಲ. ಆಧುನಿಕ ಭಾಷೆಯಲ್ಲಿ ಹೇಳುವುದಾದರೆ, ಇದನ್ನು ಸ್ಕ್ರೋಲಿಂಗ್ (scrolling) ಎಂದು ಕರೆಯಲಾಗುತ್ತದೆ. ಇನ್ನು ಚಲನಚಿತ್ರ ಅಥವಾ ಸರಣಿಗಳ ವಿಷಯಕ್ಕೆ ಬಂದಾಗ, ಜನರು ರಾತ್ರಿಯಿಡೀ ಅವುಗಳನ್ನು ಸ್ಟ್ರೀಮಿಂಗ್ ಮಾಡುತ್ತಾ ಎಚ್ಚರವಾಗಿರುತ್ತಾರೆ. ಒಮ್ಮೊಮ್ಮೆ ಅಥವಾ ಅಪರೂಪಕ್ಕೆ ಈ ರೀತಿ ಮಾಡುವುದು ಸರಿ. ಆದರೆ ಹಲವರಿಗೆ, ಇದು ಒಂದು ವ್ಯಸನವಾಗಿ ಮಾರ್ಪಟ್ಟಿರುತ್ತದೆ. ಹಾಸಿಗೆಯ ಮೇಲೆ ಮಲಗಿ, ಕಿವಿಗೆ ಇಯರ್‌ಫೋನ್ ಹಾಕಿಕೊಂಡು, ಚಲನಚಿತ್ರಗಳನ್ನು ಆನಂದಿಸುತ್ತಾರೆ. ಆ ಸಮಯದಲ್ಲಿ, ಇದು ಮನಸ್ಸಿಗೆ ಮುದ ನೀಡಬಹುದು ಆದರೆ ಈ ಒಂದು ಅಭ್ಯಾಸ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ರಾತ್ರಿ ಮೊಬೈಲ್ (Mobile) ನೋಡುವ ಅಭ್ಯಾಸ ನಮ್ಮ ದೇಹಕ್ಕೆ ಹೇಗೆ ಮಾರಕ? ನಮಗೆ ತಿಳಿಯದಂತೆ ಆವರಿಸಿಕೊಳ್ಳುವ ಸಮಸ್ಯೆಯನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ರಾತ್ರಿ ಹಾಸಿಗೆಯ ಮೇಲೆ ಮಲಗಿ, ಕಿವಿಗೆ ಇಯರ್ ಬಡ್‌ಗಳನ್ನು ಹಾಕಿಕೊಂಡು ಚಲನಚಿತ್ರ ಅಥವಾ ರೀಲ್‌ಗಳನ್ನು ನೋಡುವ ಅಭ್ಯಾಸ ಹಲವರಿಗಿರುತ್ತದೆ. ಈ ಒಂದು ಅಭ್ಯಾಸ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಕಿವಿಗಳಿಗೆ ಮತ್ತು ಕೆಳ ಬೆನ್ನಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಸಿಗೆಯ ಮೇಲೆ ಕುಳಿತಿರಲಿ ಅಥವಾ ಮಲಗಿರಲಿ, ತಮ್ಮ ಫೋನ್‌ಗಳನ್ನು ಹಿಡಿದುಕೊಂಡಿರುವುದರಿಂದ ಇದು ಬೆನ್ನುಮೂಳೆಯ ಭಂಗಿಯನ್ನು ಬದಲಾಯಿಸುತ್ತದೆ. ಇದರ ಪರಿಣಾಮವಾಗಿ, ಡಿಸ್ಕ್ ಸಮಸ್ಯೆಗಳು ಸಹ ಹೆಚ್ಚಾಗಬಹುದು. ಹೆಚ್ಚುವರಿಯಾಗಿ, ಇದರಿಂದ ಇತರ ಸಂಭಾವ್ಯ ಸಮಸ್ಯೆಗಳು ಬರಬಹುದು.
ಯಾವ ರೀತಿಯ ಸಮಸ್ಯೆಗಳು ಕಂಡುಬರುತ್ತದೆ?
ರಾತ್ರಿ ಸಮಯದಲ್ಲಿ ಕುಳಿತು ಅಥವಾ ಮಲಗಿ ಮೊಬೈಲ್ ಅಥವಾ ಟಿವಿ ನೋಡುವುದರಿಂದ ಮಸ್ಕ್ಯುಲೋಸ್ಕೆಲಿಟಲ್ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರರ್ಥ ಬೆನ್ನುಮೂಳೆಯ ಕೆಳಗೆ ಇರುವ ಸ್ನಾಯುಗಳ ಮೇಲೆ ತೀವ್ರ ಒತ್ತಡ ಉಂಟಾಗುತ್ತದೆ. ಇದರೊಂದಿಗೆ, ಬೆನ್ನು ಮೂಳೆಯಲ್ಲಿರುವ ಡಿಸ್ಕ್‌ಗಳು ಸಡಿಲಗೊಳ್ಳುತ್ತವೆ. ಕುತ್ತಿಗೆಯ ನರಗಳು ಸಹ ಒತ್ತಡಕ್ಕೊಳಗಾಗುತ್ತವೆ. ಕುತ್ತಿಗೆ ಮತ್ತು ಬೆನ್ನಿಗೆ ಯಾವುದೇ ರೀತಿಯ ಬೆಂಬಲವಿಲ್ಲದೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನುಮೂಳೆಯ ಮೇಲೆ ಅತಿಯಾದ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ಗರ್ಭಕಂಠ ಮತ್ತು ಸೊಂಟದ ಸಮಸ್ಯೆಗಳು ಉಂಟಾಗುತ್ತವೆ, ಅಂದರೆ ಕುತ್ತಿಗೆ ಮತ್ತು ಬೆನ್ನುಮೂಳೆಯ ಸ್ನಾಯುಗಳು ಉದ್ವಿಗ್ನಗೊಳ್ಳುತ್ತವೆ. ಇದಲ್ಲದೆ, ಗಂಟೆಗಟ್ಟಲೆ ಇಯರ್ ಬಡ್‌ಗಳನ್ನು ಬಳಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹೆಚ್ಚಿನ ವಾಲ್ಯೂಮ್‌ನೊಂದಿಗೆ ಇಯರ್ ಬಡ್‌ಗಳನ್ನು ಬಳಸುವಾಗ ಶಬ್ದವಿಲ್ಲದ ವಾತಾವರಣದಲ್ಲಿ ಕುಳಿತುಕೊಳ್ಳುವುದು ಶ್ರವಣೇಂದ್ರಿಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ತೀವ್ರವಾಗಿದ್ದರೆ, ಶ್ರವಣ ನಷ್ಟದ ಅಪಾಯವೂ ಇರುತ್ತದೆ. ಮಾತ್ರವಲ್ಲ ಚಿಕ್ಕ ವಯಸ್ಸಿನಲ್ಲಿಯೇ ಶ್ರವಣ ಸಾಧನಗಳನ್ನು ಬಳಸಬೇಕಾದ ಪರಿಸ್ಥಿತಿ ಬರಬಹುದು.
ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?
ಮನರಂಜನೆಯ ಜೊತೆಗೆ, ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ರಾತ್ರಿಯಿಡೀ ಫಿಲ್ಮ್ ವೀಕ್ಷಿಸಬೇಕಾದಾಗ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅಂದರೆ ಫಿಲ್ಮ್ ಅಥವಾ ಸರಣಿಗಳನ್ನು ಪ್ರತಿದಿನ ನೋಡುವ ಬದಲು ಒಂದು ದಿನವನ್ನು ನೀವೇ ಫಿಕ್ಸ್ ಮಾಡಿಕೊಳ್ಳಿ. ಅದಲ್ಲದೆ ಫಿಲ್ಮ್ ನೋಡುವಾಗ ನಡುವೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಮಲಗಿ ನಿಮ್ಮ ಮೊಬೈಲ್ ನೋಡುವುದನ್ನು ತಪ್ಪಿಸಿ, ಬದಲಾಗಿ ನೇರವಾಗಿ ಕುಳಿತುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇನ್ನೊಂದು ಪ್ರಮುಖ ಮುನ್ನೆಚ್ಚರಿಕೆ ಎಂದರೆ ಇಯರ್‌ಬಡ್‌ಗಳನ್ನು ಬಳಸುವುದನ್ನು ತಪ್ಪಿಸುವುದು. ಬದಲಾಗಿ, ಸ್ಪೀಕರ್‌ಗಳನ್ನು ಬಳಸುವುದು ಉತ್ತಮ. ಈ ಸಲಹೆಗಳನ್ನು ಅನುಸರಿಸುವ ಮೂಲಕ, ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.
ವೈದ್ಯರು ಹೇಳುವುದೇನು?
ಡಾ. ಅರಿಂದಮ್ ಬ್ಯಾನರ್ಜಿ ಅವರು ಹೇಳುವ ಪ್ರಕಾರ, ಇತಿ ಮಿತಿ ಇರದಂತಹ ಯಾವುದೇ ಅಭ್ಯಾಸವಾಗಿರಲಿ ಅದರಿಂದ ತೊಂದರೆಗಳು ಉಂಟಾಗುತ್ತದೆ. ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿದಂತೆ. ಮಾತ್ರವಲ್ಲ ಕುಳಿತುಕೊಳ್ಳುವುದು ಧೂಮಪಾನ ಮಾಡಿದಷ್ಟೇ ಹಾನಿಕಾರಕವಾಗಿದೆ. ಈ ರೀತಿಯ ಅಭ್ಯಾಸ ನಿಮ್ಮ ಬೆನ್ನುಮೂಳೆ ಮತ್ತು ಕಣ್ಣುಗಳಿಗೆ ಮಾತ್ರವಲ್ಲದೆ ನಿಮ್ಮ ಹೃದಯ ಮತ್ತು ಮೆದುಳಿಗೂ ಕೂಡ ಹಾನಿ ಮಾಡುತ್ತದೆ. ಅಪರೂಪಕ್ಕೆ ನೋಡುವ ಅಭ್ಯಾಸ ಒಳ್ಳೆಯದು. ಆದರೆ ಅದೇ ವ್ಯಸನವಾದರೆ, ಹಾನಿಯಾಗುತ್ತದೆ ಹಾಗಾಗಿ ಈ ರೀತಿಯ ಅಭ್ಯಾಸವಿದ್ದರೆ ಅದನ್ನು ಮುಂದುವರಿಸಬೇಡಿ ಎಂದು ಹೇಳುತ್ತಾರೆ.
Views: 21