ಅತರಷಟರಯ ಕರಕಟನಲಲ ಬಲಗ ಮಡ ವಕಟ ಪಡದ ಟಪ 10 ವಕಟ ಕಪರಗಳವರ

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೌಲರ್​ಗಳು ಹಾಗೂ ಆಲ್​ರೌಂಡರ್​ಗಳನ್ನು ಹೊರತುಪಡಿಸಿ ಅರೆಕಾಲಿಕ ಬೌಲರ್​ಗಳು ಬೌಲಿಂಗ್ ಮಾಡುವುದು ತೀರ ವಿರಳ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್​ನಂತಹ ಬ್ಯಾಟರ್​ಗಳು ಅರೆಕಾಲಿಕ ಸ್ಪಿನ್ನರ್​ ಸಹ ಆಗಿದ್ದಾರೆ. ಆದರೆ ಇವರಿಗೆ ಬೌಲಿಂಗ್ ಮಾಡುವ ಅವಕಾಶ ಸಿಗವುದು ತೀರ ವಿರಳ.ಇನ್ನೂ ವಿಕೆಟ್ ಕೀಪರ್​ಗಳ ವಿಚಾರಕ್ಕೆ ಬಂದರೆ, ಇತ್ತೀಚಿನ ದಿನಗಳಲ್ಲಿ ವಿಕೆಟ್ ಕೀಪರ್​ಗಳು ಕೇವಲ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್​ಗೆ ಸೀಮತರಾಗಿರುತ್ತಾರೆ. ಆದರೆ ಈ ವಿಕೆಟ್ ಕೀಪರ್​ಗಳಲ್ಲಿಯೂ ಕೆಲವರು ಕೀಪಿಂಗ್, ಬ್ಯಾಟಿಂಗ್​ ಜೊತೆಗೆ ಬೌಲಿಂಗ್​ನಲ್ಲೂ ಕಮಾಲ್ ಮಾಡಿದ್ದಾರೆ ಎಂದರೆ ನೀವು ನಂಬುತ್ತೀರಾ? ಅಂತಹ ಟಾಪ್ 10 ವಿಕೆಟ್ ಕೀಪರ್​ಗಳ ವಿವರ ಹೀಗಿದೆ.ಟೀಂ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್​ನಲ್ಲಿ 1, ಏಕದಿನದಲ್ಲಿ 4 ವಿಕೆಟ್ ಪಡೆದಿದ್ದಾರೆ.ಆಫ್ರಿಕಾ ತಂಡ ಬ್ಯಾಟರ್ ಎಬಿ ಡಿವಿಲಿಯರ್ಸ್​ ಕೀಪಿಂಗ್ ಜೊತೆಗೆ ಬೌಲಿಂಗ್ ಮಾಡಿ ಟೆಸ್ಟ್​ನಲ್ಲಿ 2, ಏಕದಿನದಲ್ಲಿ 7 ವಿಕೆಟ್ ಪಡೆದಿದ್ದಾರೆ.ಭಾರತದ ಸಯ್ಯದ್ ಕೀರ್ಮಾನಿ ಟೆಸ್ಟ್​ನಲ್ಲಿ 1 ವಿಕೆಟ್ ಪಡೆದಿದ್ದಾರೆ.ಲಂಕಾ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಟೆಸ್ಟ್ ಕ್ರಿಕೆಟ್​ನಲ್ಲಿ ಬೌಲಿಂಗ್ ಮಾಡಿ 1 ವಿಕೆಟ್ ಪಡೆದಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಏಕದಿನದಲ್ಲಿ 1 ವಿಕೆಟ್ ಪಡೆದಿದ್ದಾರೆ.ನ್ಯೂಜಿಲೆಂಡ್ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಬ್ರೆಂಡನ್ ಮೆಕಲಮ್ ಕೂಡ ಟೆಸ್ಟ್​ನಲ್ಲಿ 1 ವಿಕೆಟ್ ಉರುಳಿಸಿದ್ದಾರೆ.ದಕ್ಷಿಣ ಆಫ್ರಿಕಾದ ಮಾರ್ಕ್​ ಬೌಚರ್ ಟೆಸ್ಟ್​ನಲ್ಲಿ 1 ವಿಕೆಟ್ ಪಡೆದಿದ್ದಾರೆ.ಮತ್ತೊಬ್ಬ ಲಂಕಾ ಆಟಗಾರ ತಿಲಕರತ್ನೆ ದಿಲ್ಶಾನ್ ಕೀಪಿಂಗ್ ಜೊತೆಗೆ, ಏಕದಿನದಲ್ಲಿ 106, ಟೆಸ್ಟ್​ನಲ್ಲಿ 39 ಹಾಗೂ ಟಿ20ಯಲ್ಲಿ 9 ವಿಕೆಟ್ ಪಡೆದಿದ್ದಾರೆ.ಜಿಂಬಾಬ್ವೆಯ ಬ್ರೆಂಡನ್ 	ಟೇಲರ್ ಟಿ20ಯಲ್ಲಿ 1 ಏಕದಿನದಲ್ಲಿ 9 ವಿಕೆಟ್ ಪಡೆದಿದ್ದಾರೆ.ಜಿಂಬಾಬ್ವೆಯ ಟಾಟೆಂಡರ್ ಟೈಬು ಟೆಸ್ಟ್​ನಲ್ಲಿ 1, ಏಕದಿನದಲ್ಲಿ 2 ವಿಕೆಟ್ ಪಡೆದಿದ್ದಾರೆ.

source https://tv9kannada.com/photo-gallery/cricket-photos/list-of-top-10-wicketkeepers-who-picked-wickets-in-international-cricket-psr-602496.html

Leave a Reply

Your email address will not be published. Required fields are marked *