Skip to content
  • Saturday, March 21, 2026
  • ABOUT US
  • CONTACT US
  • PRIVACY POLICY

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • PRIVACY POLICY
  • Horoscope
  • Home
  • Sports
  • IPL 2023: LSG ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ RCB?
Sports

IPL 2023: LSG ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ RCB?

April 30, 2023
samagrasuddi

IPL 2023: RCB vs LSG: ಏಪ್ರಿಲ್ 10, 2023..ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ಒದಗಿಸಿದ್ದರು.ಮೊದಲ ವಿಕೆಟ್​ಗೆ 96 ರನ್​ಗಳ ಜೊತೆಯಾಟವಾಡಿದ ಕಿಂಗ್ ಕೊಹ್ಲಿ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 61 ರನ್​ ಬಾರಿಸಿ ಔಟಾದರು. ಆ ಬಳಿಕ ಬಂದ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ಮೂಲಕ 115 ರನ್​ಗಳ ಜೊತೆಯಾಟವಾಡಿದರು.ಈ ವೇಳೆ ಡುಪ್ಲೆಸಿಸ್ 46 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ ಅಜೇಯ 76 ರನ್​ ಬಾರಿಸಿದರೆ, ಗ್ಲೆನ್ ಮ್ಯಾಕ್ಸ್​ವೆಲ್ 29 ಎಸೆತಗಳಲ್ಲಿ 6 ಸಿಡಿಲಬ್ಬರದ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 59 ರನ್​ ಕಲೆಹಾಕಿದರು. ಪರಿಣಾಮ ಆರ್​ಸಿಬಿ ತಂಡದ ಮೊತ್ತವು 212 ಕ್ಕೆ ಬಂದು ನಿಂತಿತು.ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆರ್​ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದರು. ಕೇವಲ 23 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಕ್ನೋ ತಂಡಕ್ಕೆ ಆ ಬಳಿಕ ನೆರವಾಗಿದ್ದು ಮಾರ್ಕಸ್ ಸ್ಟೋಯಿನಿಸ್. ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಫೋರ್​ನೊಂದಿಗೆ ಸ್ಟೋಯಿನಿಸ್ 65 ರನ್​ ಬಾರಿಸಿದರು.ಆ ನಂತರ ಬಂದ ನಿಕೋಲಸ್ ಪೂರನ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಪೂರನ್ ಅಂತಿಮವಾಗಿ 19 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 62 ರನ್​ ಚಚ್ಚಿದರು. ಅಲ್ಲಿಗೆ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್​ ಕಡೆ ವಾಲಿತು.ಇನ್ನು ಆಯುಷ್ ಬದೋನಿಯ 30 ರನ್​ಗಳ ನೆರವಿನಿಂದ ಪಂದ್ಯವು ಅಂತಿಮ ಓವರ್​ನತ್ತ ಸಾಗಿತು. ಕೊನೆಯ ಓವರ್​ನಲ್ಲಿ 5 ರನ್​ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ ಉನಾದ್ಕಟ್ 1 ರನ್​ ತೆಗೆದರು. 2ನೇ ಎಸೆತದಲ್ಲಿ ಮಾರ್ಕ್​ ವುಡ್ ಬೌಲ್ಡ್ ಆದರು. ಇನ್ನು 3ನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ 1 ರನ್​. ಅಲ್ಲಿಗೆ ಸ್ಕೋರ್ ಸಮಗೊಂಡಿತು. ಆದರೆ 5ನೇ ಎಸೆತದಲ್ಲಿ ಉನಾದ್ಕಟ್ ಔಟ್ ಆಗುವುದರೊಂದಿಗೆ ಪಂದ್ಯವು ಮತ್ತೆ ರೋಚಕತೆಯತ್ತ ಸಾಗಿತು.ಇತ್ತ ಸೂಪರ್ ಓವರ್ ನಿರೀಕ್ಷೆಯಲ್ಲಿ ಆರ್​ಸಿಬಿ ತಂಡವು ಫೀಲ್ಡಿಂಗ್ ಸೆಟ್ ಮಾಡಿತು. ಆದರೆ ಅಂತಿಮ ಎಸೆತದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಚೆಂಡು ಹಿಡಿಯಲು ವಿಫಲರಾದ ಕಾರಣ ಅವೇಶ್ ಖಾನ್ 1 ಬೈ ರನ್ ಓಡಿದರು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 1 ವಿಕೆಟ್​ನಿಂದ ಗೆಲುವು ದಾಖಲಿಸಿತು.ಇಡೀ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸಿದ್ದ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಗಾಂಭೀರ್ಯತೆಗೆ ಒಳಗಾಗಿದ್ದರು. ಕೊನೆಯ ಎಸೆತದವರೆಗೂ ಫುಲ್ ಟೆನ್ಶನ್​ನಲ್ಲಿ ಕಾಣಿಸಿಕೊಂಡ ಗಂಭೀರ್ ಲಕ್ನೋ ಗೆಲ್ಲುತ್ತಿದ್ದಂತೆ ಭರ್ಜರಿಯಾಗಿ ಸಂಭ್ರಮಿಸಿದರು.ಅಷ್ಟೇ ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಗುರಿಯಾಗಿಸಿ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದರು. ಗಂಭೀರ್ ಅವರ ಈ ಅತಿರೇಕದ ವರ್ತನೆಯ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ಆರ್​ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.ಇದೀಗ RCB ಸರದಿ. ಮೇ 1 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ತವರು ಮೈದಾನ ಏಕಾನ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ. ಮೊದಲ ಮುಖಾಮುಖಿಯಲ್ಲಿ ತನ್ನ ಅಭಿಮಾನಿಗಳನ್ನು ಕೆಣಕಿ ಸಂಭ್ರಮಿಸಿದ್ದ ಗಂಭೀರ್​ ಅವರಿಗೆ ಅವರದ್ದೇ ಮೈದಾನದಲ್ಲಿ ಆರ್​ಸಿಬಿ ಪ್ರತ್ಯುತ್ತರ ನೀಡಿ ಸೇಡು ತೀರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

source https://tv9kannada.com/photo-gallery/cricket-photos/ipl-2023-rcb-vs-lsg-revenge-match-kannada-news-zp-au50-567183.html

Post navigation

IPL 2023: RCB ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ: ಹೀಗಿರಲಿದೆ ಪ್ಲೇಯಿಂಗ್ 11
Satwik sai raj and Chirag Shetty: ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಸಾತ್ವಿಕ್-ಚಿರಾಗ್ ಶೆಟ್ಟಿ

Leave a Reply Cancel reply

Your email address will not be published. Required fields are marked *

CITIES

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್ ಚಿತ್ರದುರ್ಗ ಮಾ. 18ತುಮಕೂರು ಜಿಲ್ಲೆಯ ತುರುವೇಕೆರೆಯ ವಿದ್ಯಾರಣ್ಯ ಡಿಎಡ್ ಕಾಲೇಜ್‍ನಲ್ಲಿ 2006 2007ನೇ ಸಾಲಿನ ಹಿರಿಯ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆ ಲಕ್ಷ್ಮೀಕಾಂತ್ ವಹಿಸಿದ್ದರು. ಶಿಕ್ಷಕರುಗಳಾದ ಶಿವಮೂರ್ತಿ,…

Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi
Cities

SSLC ಪರೀಕ್ಷೆ 2026: ಮಾರ್ಚ್ 18ರಿಂದ ಪರೀಕ್ಷೆ ಪ್ರಾರಂಭ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಟ್ಟುನಿಟ್ಟಿನ ನಿಯಮಗಳು!

March 14, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.4 | ದಿನ 76

March 19, 2026
samagrasuddi
Spiritual

ದಿನಕ್ಕೊಂದು ಶ್ಲೋಕ: Bhagavad Gita – ಅಧ್ಯಾಯ 4| ಶ್ಲೋಕ 3 (ಜ್ಞಾನ ಯೋಗ)| ದಿನ 75

March 18, 2026
samagrasuddi
  • ವಿಶ್ವ ಸಂತೋಷ ಸೂಚ್ಯಂಕ 2026: ಸತತ 9ನೇ ಬಾರಿಗೆ ಫಿನ್ಲೆಂಡ್ ಮೊದಲು; ಭಾರತದ ಸ್ಥಾನದಲ್ಲಿದೆ ಸುಧಾರಣೆ!
  • ​Day Special, ಮಾರ್ಚ್ 21: ಜಾಗತಿಕ ಇತಿಹಾಸ, ಸಂಸ್ಕೃತಿ ಮತ್ತು ಪ್ರಕೃತಿಯ ವಿಶೇಷ ಸಂಗಮ.
  • Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78
  • ನಿತ್ಯ ಭವಿಷ್ಯ, ಮಾರ್ಚ್ 21 : ಈ ರಾಶಿಯವರಿಗೆ ಇಂದು ಆರ್ಥಿಕ ಸಂಕಷ್ಟ ಸಾಧ್ಯತೆ; ದ್ವಾದಶ ರಾಶಿಗಳ ಫಲ ಇಲ್ಲಿದೆ.
  • ​Day Special, ಮಾರ್ಚ್ 20: ಇತಿಹಾಸ, ಪರಿಸರ ಮತ್ತು ಸಂತೋಷದ ಅಪೂರ್ವ ಸಂಗಮ
Copyright © 2026
CONTACT US
Theme by: Theme Horse
Proudly Powered by: WordPress