Skip to content
  • Thursday, March 26, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • IPL 2023: ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ ಮೊದಲ ಎಡಗೈ ಬೌಲರ್ ಜಡೇಜಾ..!
Sports

IPL 2023: ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ ಮೊದಲ ಎಡಗೈ ಬೌಲರ್ ಜಡೇಜಾ..!

May 24, 2023
samagrasuddi

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಧೋನಿ ಪಡೆ 15 ರನ್‌ಗಳಿಂದ ಗೆದ್ದು ಐಪಿಎಲ್ ಫೈನಲ್‌ಗೆ ತಲುಪಿದ್ದು ಗೊತ್ತೇ ಇದೆ. ಆದರೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದರು. ರವೀಂದ್ರ ಜಡೇಜಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 150 ನೇ ವಿಕೆಟ್ ಪೂರೈಸಿದರು. ನಿನ್ನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಆಟಗಾರ ದಸುನ್ ಶಾನಕ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ 150ನೇ ವಿಕೆಟ್ ಪಡೆದರು. ಅಲ್ಲದೆ ಡೇವಿಡ್ ಮಿಲ್ಲರ್ ಅವರನ್ನು ಕೂಡ ಪೆವಿಲಿಯನ್​ಗೆ ಅಟ್ಟುವ ಮೂಲಕ ನಿನ್ನೆಯ ಪಂದ್ಯದಲ್ಲಿಯೇ 151ನೇ ವಿಕೆಟ್ ಪೂರೈಸಿದರು. ಏತನ್ಮಧ್ಯೆ, ಜಡೇಜಾ ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ ಮೊದಲ ಎಡಗೈ ಬೌಲರ್ ಮತ್ತು ಈ ಲೀಗ್‌ನಲ್ಲಿ 150 ವಿಕೆಟ್ ಪಡೆದ 10 ನೇ ಆಟಗಾರ ಎನಿಸಿಕೊಂಡಿದ್ದಾರೆ.ಐಪಿಎಲ್‌ನಲ್ಲಿ ಎಡಗೈ ಬೌಲರ್‌ಗಳಾದ ಆಶಿಶ್ ನೆಹ್ರಾ ಮತ್ತು ಜಹೀರ್ ಖಾನ್ ಮಾಡಲು ಸಾಧ್ಯವಾಗದ ದಾಖಲೆಯನ್ನು ಜಡೇಜಾ ಮಾಡಿದ್ದಾರೆ. ಜಡೇಜಾ (151) ನಂತರ ಅಕ್ಷರ್ ಪಟೇಲ್ (112), ಆಶಿಶ್ ನೆಹ್ರಾ (106), ಟ್ರೆಂಟ್ ಬೌಲ್ಟ್ (105) ಮತ್ತು ಜಹೀರ್ ಖಾನ್ (102) ಐಪಿಎಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಬೌಲರ್‌ಗಳ ಅಗ್ರ 5 ಸ್ಥಾನಗಳಲ್ಲಿದ್ದಾರೆ. ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (187 ವಿಕೆಟ್) ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಲಸಿತ್ ಮಾಲಿಂಗ ಐಪಿಎಲ್‌ನಲ್ಲಿ 183 ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರೆ, ಇತ್ತೀಚೆಗೆ ಚಹಾಲ್ ಆ ದಾಖಲೆಯನ್ನು ಮುರಿದರು. ಸದ್ಯ ಮಾಲಿಂಗ 183 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದು, ಪಿಯೂಷ್ ಚಾವ್ಲಾ (177) ಮೂರನೇ ಸ್ಥಾನದಲ್ಲಿದ್ದಾರೆ.

source https://tv9kannada.com/photo-gallery/cricket-photos/ipl-2023-ravindra-jadeja-scripts-ipl-history-with-150-wickets-psr-585952.html

Tags: Chennai, Cricket, CSK, IPL, Ravindra jadeja, samagrasuddi, T-20, TATA IPL 2023, ಸಮಗ್ರ ಸುದ್ದಿ

Post navigation

ಚಿತ್ರದುರ್ಗದಲ್ಲಿ ಮೇ 26 ರಂದು ಉಚಿತ ಆರೋಗ್ಯ ಶಿಬಿರ : ಯಾವೆಲ್ಲಾ ಕಾಯಿಲೆಗಳಿಗೆ ಉಚಿತ ತಪಾಸಣೆ ? ಇಲ್ಲಿದೆ ಮಾಹಿತಿ…
MS Dhoni on Retirement: ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ಎಂಎಸ್ ಧೋನಿ..!

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

2026 ಶ್ರೀರಾಮನವಮಿ: ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಧ್ಯಾತ್ಮಿಕ ಮಹತ್ವದ ಸಂಪೂರ್ಣ ಮಾಹಿತಿ

March 25, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
  • Horoscope Today, 26 March: ಈ ರಾಶಿಯವರಿಗೆ ಇಂದು ಮಾನಸಿಕವಾಗಿ ಸ್ವಲ್ಪ ಗೊಂದಲದ ದಿನ.
  • 2026 ಶ್ರೀರಾಮನವಮಿ: ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಧ್ಯಾತ್ಮಿಕ ಮಹತ್ವದ ಸಂಪೂರ್ಣ ಮಾಹಿತಿ
  • RCB New Era:ಬೃಹತ್ ಮೊತ್ತಕ್ಕೆ ಮಾರಾಟವಾದ ಆರ್‌ಸಿಬಿ; ಹೊಸ ಮಾಲೀಕರು ಯಾರು? ಕೊಹ್ಲಿ ಭವಿಷ್ಯವೇನು? ಸಂಪೂರ್ಣ ವಿವರ.
  • UPSC ನಿಂದ ಮೆಗಾ ನೇಮಕಾತಿ: 1300ಕ್ಕೂ ಅಧಿಕ ವೈದ್ಯಾಧಿಕಾರಿ ಹುದ್ದೆಗಳು ಖಾಲಿ, ಮಾ.31 ಕಡೆ ದಿನ.
  • ಕರ್ನಾಟಕ ಆಯುಷ್ ಇಲಾಖೆ ನೇಮಕಾತಿ 2026:ಬೆಂಗಳೂರಿನಲ್ಲಿ ಖಾತೆ ಸಹಾಯಕ ಹುದ್ದೆಗೆ ನೇರ ಸಂದರ್ಶನ | AYUSH Karnataka Recruitment
Copyright © 2026
CONTACT US
Theme by: Theme Horse
Proudly Powered by: WordPress