ಚಿತ್ರದುರ್ಗ ಸೆ. 12
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಮತ್ತು ಸಂವಿಧಾನಬದ್ಧ ಹಕ್ಕುಗಳ ಈಡೇರಿಕೆಗೆ ಅಗ್ರಹಿಸಿ ಅಹಿಂದ ಚಳುವಳಿಯನ್ನು ರಾಜ್ಯಾದ್ಯಂತ ಇನ್ನಷ್ಟು ಬಲಪಡಿಸಲು ನಿರ್ಧರಿಸಲಾಗಿದೆ ಈ ಸಂಬಂಧ ಭಾರತ ಸಂವಿಧಾನವನ್ನು ಅಳವಡಿಸಿಕೊಂಡು 77 ವರ್ಷಗಳು ಸಂದ ಸ್ಮರಣೆ ಸಲುವಾಗಿ ನವಂಬರ್ 26 ರಂದು ಅರಮನೆ ಮೈದಾನದಲ್ಲಿ ಅಲ್ಪಸಂಖ್ಯಾತರು ಅತಿ ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳ ಅಹಿಂದ ಕೇಡರ್‍ಗಳ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಅಹಿಂದ ಚಳುವಳಿಯ ರಾಜ್ಯ ಸಂಚಾಲಕರಾದ ಹಾಗೂ ವಕ್ತಾರರಾದ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಗಂಗಾಭಿಕಾ ಸಮುದಾಯ ಭವನದಲ್ಲಿ ನಡೆದ ಅಹಿಂದ ಸಂಘಟನೆಯ ರಾಜ್ಯ ಸಮಿತಿ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಎಚ್. ಮೂರ್ತಿ ಅವರ ನಾಯಕತ್ವದಲ್ಲಿ ಅಹಿಂದ ಚಳುವಳಿಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಕ್ತಿಶಾಲಿಯಾಗಿ ಬೆಳೆದಿದೆ. ಇದು ಯಾವುದೇ ಪಕ್ಷ ಅಥವಾ ಧರ್ಮಕ್ಕೆ ಸೀಮಿತವಾಗದೆ, ಸಮಾಜದ ಶೇಕಡಾ 80 ರಷ್ಟಿರುವ ಅಹಿಂದ ವರ್ಗದ ಜನರ ಸಮಗ್ರ ಪ್ರಗತಿಗಾಗಿ ರೂಪುಗೊಂಡ ಜನಪರ ಚಳುವಳಿಯಾಗಿದೆ ಎಂದು ಸ್ಪಷ್ಟಪಡಿಸಿದ ಅವರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ವರದಿ, ಜಯಪ್ರಕಾಶ್ ಹೆಗ್ಡೆ ಅವರ ಪೂರಕ ವರದಿ ಹಾಗೂ ಮಧುಸೂದನ್ ನಾಯಕ್ ಅವರ ವರದಿಯನ್ನು ಸರ್ಕಾರ ತಕ್ಷಣವೇ ಜಾರಿಗೆ ತರಬೇಕು. ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ರಾಜೇಂಧರ್ ಸಚಾರ್ ವರದಿ ಹಾಗೂ ಜಸ್ಟಿಸ್ ರಂಗನಾಥ್ ಮಿಶ್ರಾ ಆಯೋಗದ ವರದಿಗಳನ್ನು ಅಂಗೀಕರಿಸಿ, ಅಲ್ಪಸಂಖ್ಯಾತರ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ/ಪಂಗಡಗಳಿಗೆ ಹೆಚ್ಚಿಸಲಾದ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ತಡೆಯನ್ನು ತೆರವುಗೊಳಿಸಿ, ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಮುಂಬರುವ ಜನಗಣತಿಯಲ್ಲಿ ಕಡ್ಡಾಯವಾಗಿ ‘ಜಾತಿ ಜನಗಣತಿ’ಯನ್ನು ಒಳಗೊಳಿಸಬೇಕು. ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಇರುವಂತೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೂ ಉದ್ಯೋಗ ಹಾಗೂ ಬಡ್ತಿಗಳಲ್ಲಿ ಮೀಸಲಾತಿ ವಿಸ್ತರಿಸಬೇಕು. ಬಯಲುಸೀಮೆ ನೀರಾವರಿ ಯೋಜನೆಗಳು: ಕೋಲಾರ, ಚಿಕ್ಕಬಳ್ಳಾ ಪುರ, ಚಿತ್ರದುರ್ಗ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರಿನ ಅಭಾವ ನೀಗಿಸಲು ಭದ್ರಾ ಮೇಲ್ದಂಡೆ ಯೋಜನೆಯ ಜೊತೆಗೆ ಎತ್ತಿನಹೊಳೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿ ಸಬೇಕು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಕೇಂದ್ರ ಸರ್ಕಾರ ಇದನ್ನು ಲಘುವಾಗಿ ಪರಿಗಣಿ ಸುತ್ತಿದೆ. ಬ್ಯಾಂಕಿಂಗ್ ವಲಯದಲ್ಲಿದ್ದ ಬಿಎಸ್‍ಆರ್‍ಬಿ ವ್ಯವಸ್ಥೆ ರದ್ದುಗೊಳಿಸಿ ಐಬಿಪಿಎಸ್ ತಂದಿರುವುದರಿಂದ ದಕ್ಷಿಣ ಭಾರತದ ಯುವಕರಿಗೆ ಬ್ಯಾಂಕಿಂಗ್ ಉದ್ಯೋಗಗಳು ಸಿಗದಂತಾಗಿದೆ. ಈ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ತರಬೇಕು ಎಂದು ಒತ್ತಾಯಿಸಿದರು.
ಕಳೆದ 77 ವರ್ಷಗಳಿಂದ ಸಮಾಜದ ಬಹುಸಂಖ್ಯಾತ ಅಹಿಂದ ಸಮುದಾಯಗಳಿಗೆ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದ ಮುಖಂಡರು, ಸಂವಿಧಾನದ ‘ಸಮಪಾಲು, ಸಮಬಾಳು ತತ್ವದಂತೆ ಹಕ್ಕುಗಳನ್ನು ಪಡೆಯಲು ಸಾರ್ವಜನಿಕರು ಈ ಜನಪರ ಚಳುವಳಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ ಅವರು. ಶಿವಮೊಗ್ಗ ಜಿಲ್ಲೆಯ ಶರಾವತಿ ಹಾಗೂ ಕಾಳಿ ಯೋಜನೆಗಳಿಂದ ನಿರಾಶ್ರಿತರಾದ ಜನರಿಗೆ ಇದುವರೆಗೆ ಸರಿಯಾದ ಪರಿಹಾರ ಹಾಗೂ ಅರಣ್ಯ ಹಕ್ಕುಗಳನ್ನು ನೀಡಿಲ್ಲ. ಸಂತ್ರಸ್ತರ ಪರವಾಗಿ ಅಹಿಂದ ಸಂಘಟನೆ ಹೋರಾಟ ನಡೆಸಲಿದೆ ಎಂದು ಅಶೋಕ್ ತಿಳಿಸಿದರು.
ಈ ಸಂದರ್ಭದಲ್ಲಿ ಅಹಿಂದ ಚಳುವಳಿಯ ಸಂಸ್ಥಾಪಕರಾದ ಮೂರ್ತಿ ಎಸ್. ಮುಖ್ಯ ಸಂಚಾಲಕರಾದ ವೆಂಕಟೇಶ್ವರ ಜಿಬಿಎ ಮುಖ್ಯ ಸಂಚಾಲಕರಾದ ವೆಂಕಟೇಶ್, ಬೆಂಗಾವಿಯ ಕುರಗೋಡು ಮಲ್ಲಪ್ಪ, ದಾವಣ ಗೆರೆಯ ಖಾಸಿಂಬಾಷಾ, ಚಿತ್ರದುರ್ಗ ಮುಖ್ಯ ಸಂಚಾಲಕರಾದ ಸುರೇಶ್ ಬಾಬು ಕೆ. ಜಿಲ್ಲಾ ಜಂಟಿ ಸಂಚಾಲಕ ರಾದ ಲಕ್ಷ್ಮೀಕಾಂತ ಎಸ್. ಸಂಚಾಲಕರಾದ ಸುನಿಲ್ ಕುಮಾರ್, ಚಳ್ಳಕೆರೆ ಮುಖ್ಯ ಸಂಚಾಲಕರಾದ ದೊಡ್ಡರಂಗಪ್ಪ ಮೊಳಕಾಲ್ಮೂರು ಮುಖ್ಯ ಸಂಚಾಲಕರಾದ ಚಲುಮೆಸ್ವಾಮಿ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j