WTC 2023 Final: ಟೆಸ್ಟ್ ಚಾಂಪಿಯನ್​ಶಿಪ್ ಬಳಿಕ ನಿವೃತ್ತಿ ನೀಡಲಿದ್ದಾರೆ ಭಾರತದ ಈ ಸ್ಟಾರ್ ಪ್ಲೇಯರ್ಸ್

ಭಾರತ ಕ್ರಿಕೆಟ್ ತಂಡದ ಆಟಗಾರರು ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ (WTC Final 2023) ತಯಾರಿ ನಡೆಸುವನ್ನು ಬ್ಯುಸಿ ಆಗಿದ್ದಾರೆ. ಜೂನ್ 7ಕ್ಕೆ ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಈ ಪಂದ್ಯ ಶುರುವಾಗಲಿದೆ.ಈಗಾಗಲೇ ಟೀಮ್ ಇಂಡಿಯಾದ ಎಲ್ಲ ಆಟಗಾರರು ಇಂಗ್ಲೆಂಡ್​ಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅತ್ತ ಆಸ್ಟ್ರೇಲಿಯಾ ಆಟಗಾರರು ಕೂಡ ಲಂಡನ್​ಗೆ ತಲುಪಿದ್ದು ಪ್ರ್ಯಾಕ್ಸೀಟ್ ಶುರು ಮಾಡಿಕೊಂಡಿದ್ದಾರೆ.ಟೀಮ್ ಇಂಡಿಯಾ ಈಗ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಟೆಸ್ಟ್ ಚಾಂಪಿಯನ್​ಶಿಪ್​ನಲ್ಲೂ ಇದು ಮುಂದುವರೆದಿದೆ. ಕೆಲ ಹಿರಿಯ ಆಟಗಾರರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಹೀಗಾಗಿ ಈ ನಾಲ್ಕು ಆಟಗಾರರು ಟೆಸ್ಟ್ ಚಾಂಪಿಯನ್​ಶಿಪ್ ಮುಗಿದ ಬಳಿಕ ನಿವೃತ್ತಿ ನೀಡುವ ಸಾಧ್ಯತೆ ಇದೆ.ವೃದ್ದಿಮಾನ್ ಸಾಹ: ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಆದ ಬಳಿಕ ವೃದ್ದಿಮಾನ್ ಸಾಹ ಮುಖ್ಯ ವಿಕೆಟ್ ಕೀಪರ್ ಆಗಿದ್ದರು. ಆದರೆ, ರಿಷಭ್ ಪಂತ್ ತಂಡ ಸೇರಿಕೊಂಡ ಬಳಿಕ ಇವರ ಸ್ಥಾನಕ್ಕೆ ಕುತ್ತುಬಂತು. ಈಗಂತು ಕೆಎಸ್ ಭರತ್, ಇಶಾನ್ ಕಿಶನ್ ಕೂಡ ಇದ್ದಾರೆ. ಹೀಗಾಗಿ ಸಾಹ ನಿವೃತ್ತಿ ನೀಡುವುದು ಬಹುತೇಕ ಖಚಿತ.ಮಯಾಂಕ್ ಅಗರ್ವಾಲ್: 2022 ಮಾರ್ಚ್ ಬಳಿಕ ಅಗರ್ವಾಲ್ ಅವರನ್ನು ಯಾವುದೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿಲ್ಲ. ಓಪನರ್​ ಸ್ಥಾನಕ್ಕೆ ಟೀಮ್ ಇಂಡಿಯಾದಲ್ಲಿ ಶುಭ್​ಮನ್ ಗಿಲ್, ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಹೀಗೆ ಸಾಕಷ್ಟು ಆಯ್ಕೆಗಳಿವೆ. ಮುಂದಿನ ದಿನಗಳಲ್ಲಿ ಮಯಾಂಕ್​ಗೆ ಸ್ಥಾನ ಸಿಗುವುದು ಅನುಮಾನ.ಇಶಾಂತ್ ಶರ್ಮಾ: ಟೀಮ್ ಇಂಡಿಯಾ ಮಾರಕ ವೇಗಿಗಳಿಂದ ತುಂಬಿ ಹೋಗಿದೆ. ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕಟ್ ಹೀಗೆ ಇನ್ನೂ ಕೆಲ ಯುವ ವೇಗಿಗಳು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಇವರ ನಡುವೆ ಇಶಾಂತ್ ತಂಡಕ್ಕೆ ಕಮ್​ಬ್ಯಾಕ್ ಮಾಡುವುದು ಅನುಮಾನ. ಹೀಗಾಗಿ ಇವರು ಕೂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಬಳಿಕ ವಿದಾಯ ಹೇಳುವ ಸಾಧ್ಯತೆ ಇದೆ.ಉಮೇಶ್ ಯಾದವ್: ಟೀಮ್ ಇಂಡಿಯಾದ ಮತ್ತೋರ್ವ ವೇಗಿ ಉಮೇಶ್ ಯಾದವ್ ಟೆಸ್ಟ್ ವೃತ್ತಿ ಜೀವನ ಕೂಡ ತೂಗುಯ್ಯಾಲೆಯಲ್ಲಿದೆ. ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಇವರು ನಿರೀಕ್ಷಿತ ಪ್ರದರ್ಶನ ತೋರದಿದ್ದರೆ ಮುಂದೆ ಆಯ್ಕೆ ಆಗುವುದು ಅನುಮಾನ. ಸಿರಾಜ್ ಹಾಗೂ ಶಾರ್ದೂಲ್ ತಂಡದಲ್ಲಿರುವ ಕಾರಣ ಉಮೇಶ್ ನಿವೃತ್ತಿ ಕಡೆ ಮುಖ ಮಾಡಬಹುದು.

source https://tv9kannada.com/photo-gallery/cricket-photos/icc-world-test-championship-final-2023-these-4-team-india-players-to-retire-after-wtc-final-2023-vb-593369.html

Leave a Reply

Your email address will not be published. Required fields are marked *