Rishabh Pant accident: ರಿಷಬ್ ಪಂತ್ ಚೇತರಿಕೆಗಾಗಿ ಪ್ರಾರ್ಥಿಸಿದ ಪಾಕಿಸ್ತಾನ್ ಕ್ರಿಕೆಟಿಗರು

Rishabh Pant accident pakistan cricketers prayers for injured rishabh pant speedy recovery

ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant) ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿದೆ. ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾಗಿದೆ. ಅಪಘಾತದ ನಂತರ ಪಂತ್ ಅವರನ್ನು ತಕ್ಷಣ ಆಂಬುಲೆನ್ಸ್​ನಲ್ಲಿ ರೂರ್ಕಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆ ವೈದ್ಯರ ಹೇಳಿಕೆ ಪ್ರಕಾರ ಪಂತ್​ ಆರೋಗ್ಯ ಸ್ಥಿರವಾಗಿದ್ದು, ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ದೇವರ ಬಳಿ ಮೊರೆ ಇಟ್ಟಿದ್ದಾರೆ. ಭಾರತದಲ್ಲಿ ಎಲ್ಲರೂ ಪಂತ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದಲ್ಲೂ ಪಂತ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆಗಳು ನಡೆಯುತ್ತಿವೆ. ಶೋಯೆಬ್ ಮಲಿಕ್, ಮೊಹಮ್ಮದ್ ಹಫೀಜ್, ಹಸನ್ ಅಲಿ ಸೇರಿದಂತೆ ಹಲವು ಪಾಕಿಸ್ತಾನಿ ಕ್ರಿಕೆಟಿಗರು ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಆಟಗಾರರಷ್ಟೇ ಅಲ್ಲ, ಪಾಕಿಸ್ತಾನದ ಜನತೆಯೂ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಪಾಕ್ ಕ್ರಿಕೆಟಿಗರ ಪ್ರಾರ್ಥನೆ

ಪಂತ್ ಅಪಘಾತದ ಬಗ್ಗೆ ಟ್ವೀಟ್ ಮಾಡಿರುವ ಶೋಯೆಬ್ ಮಲಿಕ್, ಅಪಘಾತದ ಬಗ್ಗೆ ಈಗಷ್ಟೇ ತಿಳಿದು ಬಂದಿದೆ. ನೀವು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ. ಬೇಗ ಗುಣವಾಗಿ ಬ್ರದರ್ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ, ಪರಿಸ್ಥಿತಿ ಗಂಭೀರವಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪಾಕಿಸ್ತಾನಿ ಆಟಗಾರ ಹಸನ್ ಅಲಿ ಟ್ವೀಟ್ ಮಾಡಿದ್ದಾರೆ. ಪಂತ್ ನಾನು, ನೀವು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಇನ್ಶಾ ಅಲ್ಲಾಹ್ ನೀವು ಗುಣಮುಖರಾಗಿ ಶೀಘ್ರದಲ್ಲೇ ಮೈದಾನಕ್ಕೆ ಹಿಂತಿರುಗಿ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು

ಪಂತ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪಾಕಿಸ್ತಾನದ ಹಿರಿಯ ಆಟಗಾರ ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ ಕುಟುಂಬ ಸಮೇತ ಹೊಸ ವರ್ಷವನ್ನು ಸ್ವಾಗತಿಸಲು ಮನೆಗೆ ತೆರಳುತ್ತಿದ್ದಾಗ ಪಂತ್​ಗೆ ಈ ಅಪಘಾತ ಸಂಭವಿಸಿದೆ. ರೂರ್ಕಿ ಬಳಿ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ, ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯಿಂದಾಗಿ ಅವರ ಕಾರು ಪಲ್ಟಿಯಾಗಿದೆ. ಈ ಬೀಕರ ಅಪಘಾತದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಂತ್ ಬದುಕುಳಿದಿರುವುದು ಪವಾಡ ಅಂತಲೇ ಹೇಳಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/rishabh-pant-accident-pakistan-cricketers-prayers-for-injured-rishabh-pant-speedy-recovery-psr-au14-493278.html

Leave a Reply

Your email address will not be published. Required fields are marked *