Nutritional profile of almonds: ಬಾದಾಮಿ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ತೂಕ ನಿರ್ವಹಣೆಯಲ್ಲಿ ಸಹಕಾರಿ, ಜೀವಕೋಶದ ರಕ್ಷಣೆಗಾಗಿ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ, ಮೆದುಳಿನ ಆರೋಗ್ಯಕ್ಕೆ ಉತ್ತಮ, ಮೂಳೆಯ ಬಲ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಕಾರಿ.

ನವದೆಹಲಿ: ಬಾದಾಮಿಯು ಸುವಾಸನೆ ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಪೋಷಕಾಂಶ ಸಮೃದ್ಧ ಬೀಜಗಳು ಆರೋಗ್ಯಕರ ಕೊಬ್ಬುಗಳು , ಫೈಬರ್, ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಬಾದಾಮಿ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ತೂಕ ನಿರ್ವಹಣೆಯಲ್ಲಿ ಸಹಕಾರಿ, ಜೀವಕೋಶದ ರಕ್ಷಣೆಗಾಗಿ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ, ಮೆದುಳಿನ ಆರೋಗ್ಯಕ್ಕೆ ಉತ್ತಮ, ಮೂಳೆಯ ಬಲ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ನಿಮ್ಮ ಆಹಾರದಲ್ಲಿ ಬಾದಾಮಿಯನ್ನು ಸೇರಿಸುವುದು ಹಲವಾರು ಸಕಾರಾತ್ಮಕ ಆರೋಗ್ಯ ಫಲಿತಾಂಶ ನೀಡುತ್ತದೆ.
ಬಾದಾಮಿಯ ಬಗ್ಗೆ ವ್ಯಾಪಕ ಅಧ್ಯಯನ ಮಾಡಲಾಗಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ತೋರಿಸಿದೆ. ಆದರೆ ಬಾದಾಮಿಯು ನಿಮ್ಮ ಸಮತೋಲಿತ ಆಹಾರದ ಭಾಗವಾಗಿರಬೇಕು. ನಿಯಮಿತ ದೈಹಿಕ ಚಟುವಟಿಕೆ ಮತ್ತು ಒಟ್ಟಾರೆ ಆಹಾರದ ಆಯ್ಕೆಗಳಂತಹ ಇತರ ಜೀವನಶೈಲಿಯ ಅಂಶಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.
ಬಾದಾಮಿಯ ಪೌಷ್ಟಿಕಾಂಶದ ವಿವರ
ಪ್ರತಿ 1 ಔನ್ಸ್ ಅಥವಾ 28 ಗ್ರಾಂ ಬಾದಾಮಿಯಲ್ಲಿ ಏನೇನು ಇರುತ್ತದೆ?
– ಕ್ಯಾಲೋರಿಗಳು: 161
– ಒಟ್ಟು ಕೊಬ್ಬು: 14 ಗ್ರಾಂ
– ಸ್ಯಾಚುರೇಟೆಡ್ ಕೊಬ್ಬು: 1.1 ಗ್ರಾಂ
– ಮೊನೊಸಾಚುರೇಟೆಡ್ ಕೊಬ್ಬು: 9 ಗ್ರಾಂ
– ಬಹುಅಪರ್ಯಾಪ್ತ ಕೊಬ್ಬು: 3.5 ಗ್ರಾಂ
– ಕೊಲೆಸ್ಟ್ರಾಲ್: 0 ಗ್ರಾಂ
– ಸೋಡಿಯಂ: 0 ಗ್ರಾಂ
– ಒಟ್ಟು ಕಾರ್ಬೋಹೈಡ್ರೇಟ್ಗಳು: 6 ಗ್ರಾಂ
– ಆಹಾರದ ಫೈಬರ್: 3. 5 ಗ್ರಾಂ(Dietary Fiber)
– ಸಕ್ಕರೆ: 1.2 ಗ್ರಾಂ
– ಪ್ರೋಟೀನ್: 6 ಗ್ರಾಂ
– ವಿಟಮಿನ್ ಇ: 7.3 ಮಿಗ್ರಾಂ (ದೈನಂದಿನ ಮೌಲ್ಯದ 37%)
– ಮೆಗ್ನೀಸಿಯಮ್: 76 ಮಿಗ್ರಾಂ (ದೈನಂದಿನ ಮೌಲ್ಯದ 19%)
ನಿಯಮಿತವಾಗಿ ಬಾದಾಮಿಯನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ರಾತ್ರಿ ಕೆಲವು ಬಾದಾಮಿಗಳನ್ನು ನೆನೆಸಿಟ್ಟು ಬೆಳಗ್ಗೆ ಅದರ ಸಿಪ್ಪೆ ತೆಗೆದು ಸೇವಿಸಿದ್ರೆ ನಿಮಗೆ ಹೆಚ್ಚು ಪ್ರಯೋಜನ ಸಿಗುತ್ತದೆ.