ರಾಜ್ ಕುಟುಂಬಕ್ಕೆ ದೊಡ್ಡ ಶಾಕ್: ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಇನ್ನಿಲ್ಲ

ಮೂರು ದಿನಗಳ ಹಿಂದೆಯಷ್ಟೇ ವಿಜಯ ರಾಘವೇಂದ್ರ ಮತ್ತವರ ಕುಟುಂಬ ಬ್ಯಾಂಕಾಕ್ ಗೆ ಫ್ಯಾಮಿಲಿ ಟ್ರಿಪ್ ತೆರಳಿತ್ತು. ವಿದೇಶ ಪ್ರವಾಸಕ್ಕಾಗಿ ಥಾಯ್ಲೆಂಡ್‌ನಲ್ಲಿದ್ದ  ಸಂದರ್ಭದಲ್ಲಿ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ. 

Actor Vijay Raghavendra’s Wife Spandana No More: ಚಂದನವನದ ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗುತ್ತಿದೆ. ಇನ್ನೂ ಕೂಡ ಅಪ್ಪು ನಿಧನದಿಂದ ಚೇತರಿಸಿಕೊಳ್ಳಲಾಗದ ಡಾ. ರಾಜ್ ಕುಟುಂಬಕ್ಕೆ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಇನ್ನಿಲ್ಲ ಎಂಬ ಸುದ್ದಿ ದೊಡ್ಡ ಶಾಕ್ ನೀಡಿದೆ. 

ವಿದೇಶ ಪ್ರವಾಸಕ್ಕೆ ತೆರಳಿದ್ದ ವಿಜಯ್ ರಾಘವೇಂದ್ರ ಕುಟುಂಬ: 
ಮೂರು ದಿನಗಳ ಹಿಂದೆಯಷ್ಟೇ ವಿಜಯ ರಾಘವೇಂದ್ರ ಮತ್ತವರ ಕುಟುಂಬ ಬ್ಯಾಂಕಾಕ್ ಗೆ ಫ್ಯಾಮಿಲಿ ಟ್ರಿಪ್ ತೆರಳಿತ್ತು. ವಿದೇಶ ಪ್ರವಾಸಕ್ಕಾಗಿ ಥಾಯ್ಲೆಂಡ್‌ನಲ್ಲಿದ್ದ  ಸಂದರ್ಭದಲ್ಲಿ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಸ್ಪಂದನ ಕೊನೆಯುಸಿರೆಳೆದಿದ್ದಾರೆ. ಮೃತ ಸ್ಪಂದನಾ ಅವರ ಪಾರ್ಥೀವ ಶರೀರವನ್ನು ನಾಳೆ ಬೆಂಗಳೂರಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ. 

ಮೂಲತಃ ದಕ್ಷಿಣ ಕನ್ನಡವರಾದ ಸ್ಪಂದನಾ ಜನಿಸಿದ್ದು ಬೆಂಗಳೂರಿನಲ್ಲಿ. ಇವರ ತಂದೆ ಬಿ.ಕೆ. ಶಿವರಾಮ್ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲಿಗೆ ಮಲ್ಲೇಶ್ವರಂ ಕಾಫಿ ಡೇ ನಲ್ಲಿ ಭೇಟಿಯಾಗಿದ್ದ ಬಿ.ಕೆ. ಶಿವರಾಮ್  ಪುತ್ರಿ ಸ್ಪಂದನಾ ನಟ ವಿಜಯ್ ರಾಘವೇಂದ್ರ  ಇಬ್ಬರೂ 26 ಆಗಸ್ಟ್ 2007 ರಂದು ವಿವಾಹವಾಗಿದ್ದರು. ನಟ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 

ಚಿತ್ರರಂಗಕ್ಕೂ ಕಾಲಿಟ್ಟಿದ್ದ ಸ್ಪಂದನಾ: 
ಇನ್ನೂ ಸದಾ ಪತಿ ವಿಜಯ ರಾಘವೇಂದ್ರ ಅವರಿಗೆ ಬೆನ್ನೆಲುಬಾಗಿದ್ದ ಸ್ಪಂದನಾ 2016ರಲ್ಲಿ ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ವಿ. ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಸಿನಿಮಾದಲ್ಲಿ ಸ್ಪಂದನಾ ನಟಿಸಿದ್ದರು. ಈ ಚಿತ್ರದಲ್ಲಿ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಪತ್ನಿಯಾಗಿ ಕಾಣಿಸಿಕೊನಿದ್ದಾರು.

ಲಭ್ಯವಿರುವ ಮಾಹಿತಿಗಳ ಪ್ರಕಾರ, ಸ್ಪಂದನಾ ಅವರಿಗೆ ಲೋ ಬಿಪಿ ಇತ್ತು. ಇದೇ ಇವರ ಹೃದಯಾಘಾತಕ್ಕೂ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.  ಪುನೀತ್ ರಾಜ್​ಕುಮಾರ್ ಸೇರಿ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದೀಗ ಸ್ಪಂದನಾ ಕೂಡ ಹೃದಯಾಘಾತದಿಂದ ಮೃತ ಪತ್ತಿರುವುದು ನಿಜಕ್ಕೂ ಶಾಕಿಂಗ್ ಆಗಿದೆ. 

Source : https://zeenews.india.com/kannada/entertainment/a-big-shock-for-the-raj-family-vijay-raghavendra-s-wife-spandana-is-no-more-150824

Leave a Reply

Your email address will not be published. Required fields are marked *