ರಾಹುಲ್ ಗಾಂಧಿ ಮೇಲೆ ಶ್ರೀರಾಮನ ರಕ್ಷೆ ಇರಲಿದೆ : ಅಯೋಧ್ಯೆಯ ಪ್ರಧಾನ ಅರ್ಚಕರ ಆಶೀರ್ವಾದ

ಉತ್ತರಪ್ರದೇಶ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ ಪಕ್ಷ ಸಂಘಟನೆ ಮಾಡಲು ಹೊರಟಿದ್ದಾರೆ. ಕೊನೆಯಲ್ಲಿ ಜಮ್ಮು ಕಾಶ್ಮೀರ ತಲುಪಲಿದ್ದಾರೆ. ಈ ಮಧ್ಯೆ ಭಾರತ್ ಜೋಡೋ ಯಾತ್ರೆಗೆ ಸಾಕಷ್ಟು ಜನ ಜೊತೆಯಾಗಿದ್ದಾರೆ. ಇದೀಗ ಅಯೋಧ್ಯೆಯ ರಾಮಮಂದಿರದ ಪ್ರಧಾನ ಅರ್ಚಕ ಸಂತ್ಯೇಂದ್ರ ದಾಸ್ ಅವರ ಬೆಂಬಲವೂ ಸಿಕ್ಕಿದೆ.

ಈ ಸಂಬಂಧ ಪತ್ರ ಒಂದನ್ನು ಬರೆದಿರುವ ಅರ್ಚಕರು, ರಾಹುಲ್ ಗಾಂಧಿ ಮೇಲೆ ಶ್ರೀರಾಮನ ರಕ್ಷೆ ಇರಲಿದೆ. ಸರ್ವೇ ಜನತೋ ಸರ್ವೇ ಸುಖಿನೋ ಎಂಬಂತೆ ಜನರ ಹಿತಾಸಕ್ತಿಗಾಗಿ ನೀವೂ ಮಾಡುತ್ತಿರುವ ಹೋರಾಟಕ್ಕೆ ಯಶಸ್ಸು ಸಿಗಲಿದೆ. ಮುಂದಿನ ಕೆಲಸಗಳು ನೆರವೇರಲಿದೆ. ನಿಮ್ಮ ಆರೋಗ್ಯ ಇನ್ನೂ ಸುದೀರ್ಘವಾಗಿರಲಿದೆ. ಶ್ರೀರಾಮನ ಆಶೀರ್ವಾದ ನಿಮ್ಮ ಮೇಲೆ ಇರಲಿದೆ ಎಂದು ಆಶೀರ್ವಾದ ಮಾಡಿದ್ದಾರೆ.

ಸತ್ಯೇಂದ್ರ ದಾಸ್ ಅವರು ಭಾರತ್ ಜೋಡೋ ಯಾತ್ರೆಯಲ್ಲೂ ಭಾಗಿಯಾಗುವ ಸಾಧ್ಯತೆ ಇತ್ತು. ಆದರೆ ಅವರ ಆರೋಗ್ಯ ಕೈಕೊಟ್ಟಿದ್ದರಿಂದ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗುತ್ತಿರಲಿಲ್ಲ. ಇನ್ನು ಭಾರತ್ ಜೋಡೋ ಯಾತ್ರೆಯನ್ನು ಸ್ವಲ್ಪ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದೀಗ ಒಂಭತ್ತು ದಿನಗಳ ಬಳಿಕ ಇಂದಿನಿಂದ ಮತ್ತೆ ಯಾತ್ರೆ ಶುರುವಾಗಿದೆ.

The post ರಾಹುಲ್ ಗಾಂಧಿ ಮೇಲೆ ಶ್ರೀರಾಮನ ರಕ್ಷೆ ಇರಲಿದೆ : ಅಯೋಧ್ಯೆಯ ಪ್ರಧಾನ ಅರ್ಚಕರ ಆಶೀರ್ವಾದ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/EctOgza
via IFTTT

Leave a Reply

Your email address will not be published. Required fields are marked *