China Virus: ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕರೋನಾವೈರಸ್ ಪತ್ತೆಯಾದ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಆತಂಕ ಸೃಷ್ಟಿಸಿದೆ. ಈ ವೈರಸ್ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ಮಾಡುತ್ತಿರುವುದು ಜನರ ಚಿಂತೆ ಹೆಚ್ಚಿಸಿದೆ.

ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ನಿಗೂಢ ವೈರಸ್ ಒಂದು ಕಾಣಿಸಿಕೊಂಡಿದ್ದು, ಈ ಅಪಾಯಕಾರಿ ಸೋಂಕು ಮಕ್ಕಳಲ್ಲಿ ತುಂಬಾ ವೇಗವಾಗಿ ಹಾರಾಡುತ್ತಿದೆ. ಈ ಅಪಾಯಕಾರಿ ವೈರಸ್ ನಿಂದ ಮಕ್ಕಳನ್ನು ರಕ್ಷಿಸಲು ಆರೋಗ್ಯ ತಜ್ಞರು ಕೆಲವು ಸಲಹೆಗಳನ್ನು ನೀಡಿದೆ.
ಕೆ.ಬಿರ್ಲಾ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕ ಡಾ.ರಾಜೀವ್ ಗುಪ್ತಾ, ಮಕ್ಕಳಲ್ಲಿ ಈ ವೈರಸ್ ಹರಡುವಿಕೆಯನ್ನು ತಪ್ಪಿಸಲು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಈ ಸೋಂಕು ಉಸಿರಾಟದ ಮೂಲಕ ಹರಡುವುದರಿಂದ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ.
ಈ ವೈರಸ್ ತಡೆಗಟ್ಟಲು ಕೆಲವು ಲಸಿಕೆಗಳು (ಇನ್ಫ್ಲುಯೆನ್ಸ, ಆರ್ಎಚ್ವಿ ವೈರಸ್ ಮತ್ತು ಕೋವಿಡ್ ಲಸಿಕೆಗಳು) ಪ್ರಯೋಜನಕಾರಿ ಆಗಿರಬಹುದು ಎಂದು ಹೇಳಲಾಗುತ್ತಿದ್ದು, ವೈದ್ಯರ ಸಲಹೆ ಪಡೆದು ಅಗತ್ಯವಿದ್ದರೆ ಈ ಲಸಿಕೆಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.
ಈ ನಿಗೂಢ ವೈರಸ್ ಹರಡದಂತೆ ತಡೆಯಲು ಪೋಷಕರು ಮಕ್ಕಳ ಬಗೆ ಆರೋಗ್ಯ ಕಾಳಜಿ ವಹಿಸುವುದರ ಜೊತೆಗೆ ಸ್ಥಳೀಯ ಆಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೂ ಕೂಡ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ. ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇದಕ್ಕಾಗಿ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ಮಾಡಬೇಕಿದೆ.
ಶೀತ, ನೆಗಡಿ, ಕೆಮ್ಮು ಚಳಿಗಾಲದಲ್ಲಿ ಬರುವ ಸರ್ವೇ ಸಾಮಾನ್ಯ ರೋಗ ಲಕ್ಷಣಗಳೇ ಆಗಿದ್ದರೂ ಸಹ ಇದನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ ಆಂಟಿವೈರಲ್ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0