ಗರ್ಭಗುಡಿ ಸೇರಿದ ರಾಮಲಲ್ಲಾ, ಮುಗಿಲು ಮುಟ್ಟಿದ ಶ್ರೀರಾಮ ಭಕ್ತರ ಸಂಭ್ರಮ.

ಅಯೋಧ್ಯೆ: ಶ್ರೀರಾಮ ಮಂದಿರ ಉದ್ಘಾಟನೆಗೆ (Sri Ram Mandir inauguration) ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಶ್ರೀರಾಮ ಪ್ರಾಣ ಪ್ರತಿಷ್ಠೆ (Sri Ram Prana Pratishtha) ನಡೆಯಲಿದ್ದು, ಧಾರ್ಮಿಕ ಕಾರ್ಯಗಳು ಈಗಾಗಲೇ ಆರಂಭಗೊಂಡಿವೆ. ನಿನ್ನೆ ಸಂಜೆ ರಾಮ್ ಲಲ್ಲಾನ ವಿಗ್ರಹವನ್ನು (Ram Lalla idol) ಅಯೋಧ್ಯೆ ದೇವಸ್ಥಾನಕ್ಕೆ (Ayodhye Temple) ತರಲಾಗಿತ್ತು.

ಇದೀಗ ರಾಮ್‌ ಲಲ್ಲಾ ವಿಗ್ರಹ ರಾಮಮಂದಿರದ ಗರ್ಭಗುಡಿ (sanctum sanctorum) ಸೇರಿದೆ. ಕ್ರೇನ್‌ ಮೂಲಕ ವಿಗ್ರಹ ತಂದಿದ್ದು, ಗರ್ಭಗುಡಿಯಲ್ಲಿ ಇರಿಸಲಾಯ್ತು. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಅಲ್ಲಿ ಸ್ಥಾಪಿಸಲಾಗುತ್ತದೆ. ಈ ಮೂರ್ತಿಯನ್ನು ಮೈಸೂರಿನ ಶಿಲ್ಪಿ (Mysore sculptor) ಅರುಣ್ ಯೋಗಿರಾಜ್ (ಅವರು ಎಚ್‌ಡಿ ಕೋಟೆಯ (Arun Jogiraj) ಕಪ್ಪು ಕಲ್ಲು (Black Stone) ಬಳಸಿಕೊಂಡು ಕೆತ್ತಿದ್ದಾರೆ. ಇದು ಸುಮಾರ್ 150ರಿಂದ 200 ಕೆಜಿ ತೂಕ ಇದೆ ಎನ್ನಲಾಗಿದೆ.

ನಿನ್ನೆ ಸಂಜೆ ಅಯೋಧ್ಯೆ ತಲುಪಿದ್ದ ರಾಮಲಲ್ಲಾ ವಿಗ್ರಹ

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ಸುಮಾರು 150-200 ಕೆಜಿ ತೂಕದ ವಿಗ್ರಹವನ್ನು ನಿನ್ನೆ ಸಂಜೆ ಅಯೋಧ್ಯೆಗೆ ತರಲಾಗಿತ್ತು. ಟ್ರಕ್‌ಗೆ ಹೂವಿನ ಅಲಕಾಂರ ಮಾಡಿ, ವಿಗ್ರಹವನ್ನು ಮೆರವಣಿಗೆ ಮೂಲಕ ತರಲಾಯಿತು. ಸಂಜೆ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತಲುಪಿದ ಟ್ರಕ್‌ನಿಂದ ಕ್ರೇನ್ ಮೂಲಕ ಇಳಿಸಲಾಗಿತ್ತು

ಇಂದು ಗರ್ಭಗುಡಿ ಸೇರಿದ ರಾಮಲಲ್ಲಾ ವಿಗ್ರಹ

ನಿನ್ನೆ ಸಂಜೆ ಕ್ರೇನ್‌ ಮೂಲಕ ಇಳಿಸಲಾಗಿದ್ದು ರಾಮ್‌ ಲಲ್ಲಾ ವಿಗ್ರಹವನ್ನು ಇಂದು ಗರ್ಭಗುಡಿಯೊಳಗೆ ಸೇರಿಸಲಾಯ್ತು. ಮೂರ್ತಿಯನ್ನು ಒಳಗೆ ತರುವ ಮುನ್ನ ಗರ್ಭಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು.

ಪ್ರಾಣ ಪರಿಷ್ಠೆಗೂ ಮುನ್ನ ಮೂರ್ತಿ ಪ್ರತಿಷ್ಠಾಪನೆ

ಜನವರಿ 22, ಸೋಮವಾರದಂದು ಶ್ರೀರಾಮ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ. ಅದಕ್ಕೂ ಮುನ್ನ ಸಪ್ತಾಹದ ಆಚರಣೆಗಳ ಎರಡನೇ ದಿನವಾದ ಬುಧವಾರ ಮೂರ್ತಿಯನ್ನು ಮೊದಲ ಬಾರಿಗೆ ದೇವಾಲಯದ ಒಳಗೆ ತರಲಾಯಿತು. ಇಂದು ಅದನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ.

ಇನ್ನೆರಡು ವಿಗ್ರಹಗಳನ್ನು ಎಲ್ಲಿ ಇಡಲಾಗುತ್ತದೆ?

ಆ ಎರಡು ವಿಗ್ರಹಗಳನ್ನು ದೇವಾಲಯದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಇರಿಸಲಾಗುವುದು ಎಂದು ಚಂಪತ್ ರೈ ಹೇಳಿದರು. ರಾಮಮಂದಿರದ ಮೊದಲ ಮಹಡಿ ಸಿದ್ಧವಾದ ಕೂಡಲೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ರಾಮಲಲ್ಲಾನ ಉಳಿದ ಎರಡು ವಿಗ್ರಹಗಳಲ್ಲಿ ಒಂದನ್ನು ಸ್ಥಾಪಿಸಲಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮೂರ್ತಿಯೇ ಫೈನಲ್

ಅಯೋಧ್ಯೆಯ ರಾಮ ಮಂದಿರಕ್ಕಾಗಿ ಮೂವರು ಶಿಲ್ಪಿಗಳು ರಾಮಲ್ಲಾನ ಮೂರು ವಿಭಿನ್ನ ಪ್ರತಿಮೆಗಳನ್ನು ಕೆತ್ತಿದ್ದಾರೆ. ಜನವರಿ 22 ರಂದು ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪಿಸಲು ಕರ್ನಾಟಕ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕಪ್ಪು ಕಲ್ಲಿನ ಪ್ರತಿಮೆಯನ್ನು ದೇವಾಲಯದ ಟ್ರಸ್ಟ್ ಆಯ್ಕೆ ಮಾಡಿದೆ.

ಮೂರುಪ್ರತಿಮೆಗಳು 51 ಇಂಚುಎತ್ತರವಿದೆ

ಇತರ ಎರಡು ಪ್ರತಿಮೆಗಳಲ್ಲಿ ಒಂದನ್ನು ಕರ್ನಾಟಕದ ಗಣೇಶ್ ಭಟ್ ಅವರು ಕಪ್ಪು ಕಲ್ಲಿನಿಂದ ಕೆತ್ತಿದ್ದಾರೆ ಮತ್ತು ಇನ್ನೊಂದನ್ನು ರಾಜಸ್ಥಾನದ ಸತ್ಯ ನಾರಾಯಣ ಪಾಂಡೆ ಅವರು ಬಿಳಿ ಮಕ್ರಾನ ಅಮೃತಶಿಲೆಯಿಂದ ಕೆತ್ತಿದ್ದಾರೆ. ಎಲ್ಲಾ ಮೂರು ಪ್ರತಿಮೆಗಳು 51 ಇಂಚುಗಳಷ್ಟು ಎತ್ತರವಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *