ಮೊಬೈಲ್ ನಲ್ಲಿ ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ; ಮೃತ್ಯು.

ಲಕ್ನೋ: ಮೊಬೈಲ್‌ ನಲ್ಲಿ ಕಾರ್ಟೂನ್‌ ನೋಡುತ್ತಿದ್ದ 5 ವರ್ಷದ ಮಗುವೊಂದು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯದ ಹತೈಖೇಡಾದಲ್ಲಿ ನಡೆದಿದೆ.

ಘಟನೆ ಹಿನ್ನೆಲೆ: ಮಗು ಕಾಮಿನಿ ಬೆಡ್‌ ನಲ್ಲಿ ತನ್ನ ಅಮ್ಮನ ಪಕ್ಕದಲ್ಲಿ ಮಲಗಿಕೊಂಡು ಮೊಬೈಲ್‌ ನಲ್ಲಿ ಕಾರ್ಟೂನ್‌ ವೀಕ್ಷಿಸುತ್ತಿತ್ತು.

ಈ ವೇಳೆ ಮಗುವಿನ ಕೈಯಿಂದ ಫೋನ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದೆ. ಆ ಬಳಿಕ ಮಗು ಪ್ರಜ್ಞಾಹೀನವಾಗಿ ಬಿದ್ದಿದೆ. ಗಾಬರಿಗೊಂಡ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ ಬಳಿಕ ಮಗು ಆದಾಗಲೇ ಮೃತಪಟ್ಟಿದೆ ಎಂದು ಹೇಳಿದ್ದಾರೆ.

“ಮಗು ಹೃದಯಾಘಾತದಿಂದ ಸಾವನ್ನಪ್ಪಿರಬಹುದು” ಎಂದು ಹಸನಪುರ ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರಿ ಧ್ರುವೇಂದ್ರಕುಮಾರ್ ಹೇಳಿದ್ದಾರೆ.

“ಶವವನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸುವಂತೆ ನಾವು ಕುಟುಂಬಕ್ಕೆ ಮನವಿ ಮಾಡಿದ್ದೇವೆ. ಆದರೆ ಅವರು ಒಪ್ಪಲಿಲ್ಲ. ಮಗು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಬೇರೆ ಯಾವುದಾದರೂ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ತನಿಖೆಯ ವಿಷಯವಾಗಿದೆ” ಎಂದು ಅಮ್ರೋಹಾ ಮುಖ್ಯ ವೈದ್ಯಾಧಿಕಾರಿ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *