
ಉತ್ತಾರಖಂಡ್ ನ ಜೋಶಿ ಮಠವನ್ನು ದೇವ ಭೂಮಿ ಎಂದೇ ಕರೆಯುತ್ತಾರೆ. ಆದ್ರೆ ಈ ದೇವಭೂಮಿಯಲ್ಲೀಗ ಜನ ಪ್ರಾಣಾಪಯದಲ್ಲಿದ್ದಾರೆ. ಯಾವಾಗ..? ಯಾರಿಗೆ..? ಏನಾಗುತ್ತೋ ಎಂಬ ಆತಂಕವಿದೆ. ಯಾಕಂದ್ರೆ ದಿನೇ ದಿನೇ ಮನೆಗಳು, ರಸ್ತೆಗಳು ಬಿರುಕು ಬಿಡುತ್ತಿವೆ. ಹೀಗಾಗಿ ಜನ ಆತಂಕದಲ್ಲಿದ್ದಾರೆ. ಜೋಶಿಮಠವನ್ನು ಅದಾಗಲೇ ಮುಲುಗುತ್ತಿರುವ ವಲಯ ಎಂದು ಘೋಷಣೆ ಮಾಡಲಾಗಿದೆ.
ಜೋಶಿಮಠದಲ್ಲಿ ಒಟ್ಟು 4,500 ಕಟ್ಟಡಗಳಿವೆ. ಅದರಲ್ಲಿ 610 ಕಟ್ಟಡಗಳು ದೊಡ್ಡ ಬಿರುಕು ಬಿಟ್ಟಿದೆ. ಈಗಾಗಲೇ ಬಿರುಕು ಬಿಟ್ಟ ಮನೆಗಳಿಗೆ ಹೋಗಿ ಆ ಮನೆಯವರನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಹೊಟೇಲ್, ಹೋಂ ಸ್ಟೇಗಳಿಗೆ ಸ್ಥಳಾಂತರಿಸಲಾಗಿದೆ. ಹಾನಿಯ ಪ್ರಮಾಣದ ಮಾಹಿತಿ ಪಡೆದು ಜನರನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ.
ಜೋಶಿಮಠದಲ್ಲಾದ ಘಟನೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಮನವಿ ಮಾಡಿದ್ದಾರೆ. ಇನ್ನು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಜೊತೆಗೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಭೂಕುಸಿತದ ಬಗ್ಗೆ ಮಾಹಿತಿ ಪಡೆದಿದ್ದಾರೆ.
The post ಜೋಶಿ ಮಠದಲ್ಲಿ ಕಾಣಿಸುತ್ತಲೇ ಇದೆ ಬಿರುಕು : ಆತಂಕದಲ್ಲಿದ್ದಾರೆ ಜನ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/uVWS15J
via IFTTT