Entertainment News: ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ‘ರಾಮಾಯಣ’ ಆಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತಿದೆ. ಈಗಾಗಲೇ ಮುಂಬೈನಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ ಶೂಟಿಂಗ್ ನಡೆಸಲಾಗುತ್ತಿದ್ದು, ಅರುಣ್ ಗೋವಿಲ್, ಲಾರಾ ದತ್ತಾ ಫೋಟೋಗಳು ವೈರಲ್ ಆಗಿವೆ.

ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ನಟಿಸಲಿದ್ದಾರೆ.
ಇದೀಗ ಈ ಮೂವರೂ ‘ರಾಮಾಯಣ’ ಚಿತ್ರಕ್ಕಾಗಿ ಪಡೆಯಲಿರುವ ಸಂಭಾವನೆಯ ಕುರಿತ ಸುದ್ದಿಯೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಮೂಲಗಳ ಪ್ರಕಾರ ನಿತೇಶ್ ತಿವಾರಿ ‘ರಾಮಾಯಣ’ ಮೂರು ಭಾಗಗಳಲ್ಲಿ ಮೂಡಿಬರಲಿದ್ದು, ರಣಬೀರ್ ಒಂದು ಚಿತ್ರಕ್ಕೆ 75 ಕೋಟಿ ರೂ.ನಂತೆ 225 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಹಾಗೇ ಯಶ್ ಒಂದು ಚಿತ್ರಕ್ಕೆ 50 ಕೋಟಿ ರೂ.ನಂತೆ ಮೂರು ಚಿತ್ರಗಳಿಂದ 150 ಕೋಟಿ ರೂ. ಮತ್ತು ಸಾಯಿ ಪಲ್ಲವಿ ಮೂರು ಚಿತ್ರಗಳಿಂದ 18 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ.
ಈಗಾಗಲೇ ರಣಬೀರ್ ತಮ್ಮ ಪಾತ್ರಕ್ಕೆ ಸಿದ್ಧತೆ ಆರಂಭಿಸಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಮತ್ತೊಂದೆಡೆ ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದ ಯಶ್, ‘ಬಾಲಿವುಡ್ನಿಂದ ಹಲವು ಪಾತ್ರಗಳಲ್ಲಿ ಅವಕಾಶ ಬಂದಿವೆ. ಆದರೆ, ನಾನು ಯಾವುದನ್ನೂ ಒಪ್ಪಿಲ್ಲ’ ಎಂದು ಹೇಳಿಕೊಂಡಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1