ಚಿತ್ರದುರ್ಗ: ಡಾ. ವಿಷ್ಣು, ಎಸ್. ಜಾನಕಿ ಸವಿನೆನಪಿನ ರಸಮಂಜರಿ.

ಚಿತ್ರದುರ್ಗ ಆ. 3

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಕರುಣಾಮಯಿ ಸಾಂಸ್ಕೃತಿಕ ಕಲಾ ವೇದಿಕೆ, ಬಂಜಾರ ಸಮಾಜ ಚಲನಚಿತ್ರ ಪೋಷಕ ಕಲಾವಿದರು ಬೆಂಗಳೂರು ಇವರು ಡಾ,ವಿಷ್ಣು ಹಾಗೂ ಎಸ್.ಜಾನಕಿಯವರ ಸವಿನೆನಪು ಅಂಗವಾಗಿ ಚಿತ್ರದುರ್ಗದ ಚಲನಚಿತ್ರ ನಟ-ನಟಿಯರಿಂದ ಕಾರ್ಯಕ್ರಮ ಕನ್ನಡ ನಿತ್ಯೋತ್ಸವ ರಸಮಂಜರಿ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದವರಿಗೆ ಸನ್ಮಾನವೂ ಆ, ೧೬ರ ಭಾನುವಾರ ಸಂಜೆ ೬ ಗಂಟೆಗೆ ನಗರದ ಮಹರ್ಷಿ ವಾಲ್ಮಿಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ ಸಮಾಜದ ಜಿಲ್ಲಾಧ್ಯಕ್ಷರಾದ ಎಂ ಸತೀಶ್ ಕುಮಾರ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಹಾಗೂ ಗಾನ ಕೋಗಿಲೆ ಎಸ್.ಜಾನಕಿ ಅಮ್ಮನವರ ಸವಿ ನೆನಪಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಇದರಲ್ಲಿ ಜೂನಿಯರ್ ಕಲಾವಿದರಾದ ಪುನಿತ್ ರಾಜಕುಮಾರ್, ರವಿಚಂದ್ರನ್, ಅಂಬರೀಷ್, ಹಾಗೂ ಜಿ.ಕನ್ನಡದ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಸಂಘಟಕರಾದ ಜಾಕಿರ್ ಮಾತನಾಡಿ ಈ ಕಾರ್ಯಕ್ರಮದಲ್ಲಿ ನಮ್ಮ ದುರ್ಗದ ಜನತೆಗೆ ಏನಾದರೂ ಕಾರ್ಯಕ್ರಮ ನೀಡಬೇಕೆಂದು ಈ ರಸಮಂಜರಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ಡಾ.ವಿಷ್ಣುವರ್ಧನ ರವರ ನೆನಪು ಹಾಗೂ ಎಸ್.ಜಾನಕಿಯವರ ಹಾಡುಗಳನ್ನು ಹಾಡಲಾಗುವುದು ಇದ್ದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದವರನ್ನು ಗುರುತಿಸಿ ಕನ್ನಡ ರತ್ನ, ಕರ್ನಾಟಕ ರತ್ನ, ಕನ್ನೆ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾಮ ಚುನಾಯಿತ ಪ್ರತಿನಿಧಿಗಳನ್ನು ಜಾತಿ, ಧರ್ಮ, ಪಕ್ಷವನ್ನು ಬಿಟ್ಟು ಕಲಾ ಸೇವೆಯ ಹಿನ್ನಲೆಯಲ್ಲಿ ಆಹ್ವಾನ ಮಾಡಲಾಗುವುದು ಎಂದರು. 

ಗೋಷ್ಟಿಯಲ್ಲಿ ಟಿಪ್ಪು ಸುಲ್ತಾನ್ ವೇದಿಕೆಯ ಅಧ್ಯಕ್ಷರಾದ ಟಿಪ್ಪು ಖಾಸಿಂ ಆಲಿ, ಮಹಮ್ಮದ್ ಆಲಿ ಹಾಗೂ ಸೈಯದ್ ಇಸ್ಮಾಯಿಲ್ ಉಪಸ್ಥಿತರಿದ್ದರು 

Leave a Reply

Your email address will not be published. Required fields are marked *