ಚಿತ್ರದುರ್ಗ ಆ. 03
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ದೃಶ್ಯ ಕಲಾವಿದ ಜವಳಿ ಶಾಂತಕುಮಾರ ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಆ. 4 ಮತ್ತು 6ರವರೆಗೆ ನಗರದ ಎಂ.ಕೆ. ಹಟ್ಟಿಯ ಎಸ್.ಜೆ.ಎಂ. ರೆಸಿಡೆನ್ಸಿಯಲ್ (ಸಿಬಿಎಸ್ಇ) ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಧನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಎಸ್.ಜೆ.ಎಂ. ವಿದ್ಯಾ ಪೀಠ (ರಿ.)ದ ಆಡಳಿತ ಮಂಡಳಿ,ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಆ. 4ರ ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್.ಜೆ.ಎಂ ರೆಸಿಡೆನ್ಸಿಯಲ್ (ಸಿಬಿಎಸ್ಇ) ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಬಿ.ಆರ್ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುನಾಥ್ ಬಿ.ಎಂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ, ಶ್ರೀಮತಿ ಪಲ್ಲವಿ ಹೆಚ್.ವಿ ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪವಲ್ಲಿ ಎನ್.ಎಂ ಎಸ್.ಜೆ.ಎಂ. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಎನ್.ಬಿ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾದ ಕಣೇಶ್. ಸಿ, ಚಿತ್ರ ಕಲಾವಿದರಾದ ್ರೀ ನಾಗರಾಜ ಬೇದ್ರೆ ಭಾಗವಹಿಸಲಿದ್ದಾರೆ.
ಆ. 4 ರಿಂದ 6ರವರೆಗೆ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ದೃಶ್ಯ ಕಲಾವಿದ ಜವಳಿ ಶಾಂತಕುಮಾರ ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವಾಗಲಿದೆ.