ಇಂದು ರಿಯಲ್‌ಮಿ ನಾರ್ಜೋ 70 5G ಫೋನ್‌ ಸೇಲ್‌; ಆಫರ್‌ ಮಾಹಿತಿ ಇಲ್ಲಿದೆ!

ಹೌದು, ಅಮೆಜಾನ್‌ನಲ್ಲಿ ರಿಯಲ್‌ಮಿ ನಾರ್ಜೋ 70 5G ಫೋನ್‌ ಮಾರಾಟ ಇಂದು ಶುರು ಆಗಲಿದೆ. ಅಂದಹಾಗೆ ಈ ಫೋನ್‌ 8 GB + 256 GB ವೇರಿಯಂಟ್‌ ಆಯ್ಕೆ ಪಡೆದಿದ್ದು, ಹಾಗೆಯೇ 8GB ಯ ವರ್ಚುವಲ್‌ RAM ಸೌಲಭ್ಯ ಸಹ ಪಡೆದಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 14,999 ರೂ. ಆಗಿದ್ದು, ಗ್ರಾಹಕರು ಆಯ್ದ ಕೆಲವು ಬ್ಯಾಂಕ್‌ಗಳಿಂದ ಭರ್ಜರಿ ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ.

ಇನ್ನು ಈ ಮೊಬೈಲ್‌ನ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿದ್ದು, ಜೊತೆಗೆ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಪಡೆದಿದೆ. ಇನ್ನು ಈ ಫೋನ್‌ ಸ್ಕೈ ಬ್ಲೂ ಹಾಗೂ ಆಲಿವ್‌ ಗ್ರೀನ್‌ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ರಿಯಲ್‌ಮಿ ನಾರ್ಜೋ 70 5G ಮೊಬೈಲ್‌ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ನಾರ್ಜೋ 70 5G ಫೀಚರ್ಸ್‌ ಮಾಹಿತಿ

ರಿಯಲ್‌ಮಿ ಸಂಸ್ಥೆಯ ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ (1,080 x 2,400 ಪಿಕ್ಸೆಲ್‌ ರೆಸಲ್ಯೂಶನ್‌) ಅಮೋಲೆಡ್‌ ಅನ್ನು ಹೊಂದಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಪಡೆದಿದೆ. ಅಲ್ಲದೇ ಇದು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 1,200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಹಾಗೆಯೇ ಮಾಲಿ-ಜಿ 68 ಜಿಪಿಯು ಬಲ ಸಹ ಪಡೆದಿದೆ. ಇದರೊಂದಿಗೆ ಇದು ಇನ್ನು 6GB RAM ಮತ್ತು 8 GB RAM ಆಯ್ಕೆಗಳಲ್ಲಿ ಲಭ್ಯ ಇದ್ದು, RAM ವಿಸ್ತರಣೆಯ ಆಯ್ಕೆ ಸಹ ಇದೆ. ಹಾಗೆಯೇ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ UI 5.0 ಸ್ಕಿನ್‌ ಓಎಸ್‌ ಸಪೋರ್ಟ್‌ ಇದೆ.

ರಿಯಲ್‌ಮಿ ನಾರ್ಜೋ 70 5G ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ಫೀಚರ್ಸ್‌ ಹೊಂದಿದ್ದು, ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ f/1.8 ಅಪರ್ಚರ್ ಮತ್ತು ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸರ್‌ ಆಯ್ಕೆ ಪಡೆದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್‌ 16 ಮೆಗಾಪಿಕ್ಸೆಲ್ ಕ್ಯಾಮೆರಾ ಅನ್ನು ಹೊಂದಿದೆ. ಉಳಿದಂತೆ

ರಿಯಲ್‌ಮಿ ನಾರ್ಜೋ 70 5G ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 45W ಸೂಪರ್‌ವೂಕ್‌ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, ವೈ ಫೈ ಮತ್ತು ಬ್ಲೂಟೂತ್ ಆವೃತ್ತಿ 5.2 ಅನ್ನು ಒಳಗೊಂಡಿವೆ. ಹಾಗೆಯೇ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌, ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP 54 ರೇಟಿಂಗ್ ಅನ್ನು ಪಡದಿದೆ.

Source : https://m.dailyhunt.in/news/india/kannada/gizbotkannada-epaper-kangiz/indu+riyalmi+naarjo+70+5g+fon+sel+aafar+maahiti+illide+-newsid-n604228658?listname=topicsList&topic=technology&index=8&topicIndex=10&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Views: 0

Leave a Reply

Your email address will not be published. Required fields are marked *