Viral Video: ಮಾತು ಬಾರದ ಮಗನ ಮೊದಲ ತೊದಲು ನುಡಿಗಳನ್ನು ಕೇಳಿ ಭಾವುಕಳಾದ ತಾಯಿ.

ಕಿವಿ ಕೇಳಿಸದ ಹಾಗೂ ಮಾತು ಬಾರದ ಮೂಕ ಮಕ್ಕಳ ವೇದನೆಯನ್ನು ಹೆತ್ತಮ್ಮ ಮಾತ್ರ ಸುಲಭವಾಗಿ ಅರ್ಥೈಸಬಲ್ಲಳು. ತನ್ನ ಮಗುವಿನ ಜೊತೆಗೆ ಪ್ರತಿನಿತ್ಯ ಸಂವಹನ ನಡೆಸುತ್ತಾ ಮೂಕ ಮಗುವನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾಳೆ. ಅಂತಹದೇ ತಾಯಿ ಮತ್ತು ಮೂಕ ಮಗುವಿನ ಸುಂದರ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಮಾತು ಬಾರದ ಮಗನ ಜೊತೆ ತಾಯಿಯೊಬ್ಬರು  “ಗುಡ್ ಮಾರ್ನಿಂಗ್ ಮಗನೇ” ಎಂದು ಹೇಳುವಾಗ ಮಾತು ಬಾರದ ಆ ಮಗು ಮೊದಲ ಬಾರಿಗೆ ಮೊದಲ ಬಾರಿಗೆ ಮಾತುಗಳನ್ನಾಡುತ್ತದೆ.  ಮೊದಲ ಸಲ ಮಗನ ಮಾತುಗಳನ್ನು ಕೇಳಿ ಆ ತಾಯಿ ಭಾವುಕರಾಗಿದ್ದಾರೆ. ಈ ಕುರಿತ ಭಾವನಾತ್ಮಕ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಈ ವಿಡಿಯೋವೊಂದನ್ನು buitengebieden ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಾತು ಬಾರದ ಮಗು ತನ್ನ ತಾಯಿಯೊಂದಿಗೆ ಮೊದಲ ಬಾರಿಗೆ ಮಾತನಾಡಿದ ಕ್ಷಣ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಮೂಕ ಮಗನೊಂದಿಗೆ ಆತನ ತಾಯಿ ಸಂವಹನ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು. ಬೆಳಗ್ಗೆ ಎದ್ದು ಮಾತು ಬಾರದ ಮಗನ ಬಳಿ ಬಂದಂತಹ ತಾಯಿ ಗುಡ್ ಮಾರ್ನಿಂಗ್ ಮಗನೇ ಎಂದು ಹೇಳುತ್ತಾರೆ. ಜೊತೆಗೆ ನೀನು ಕೂಡಾ ಗುಡ್ ಮಾರ್ನಿಂಗ್ ಎಂದು ಹೇಳು ಕಂದ ಅಂತ ಹೇಳ್ತಾರೆ. ಆ ಸಂದರ್ಭದಲ್ಲಿ ಅಮ್ಮನ ಹತ್ತಿರ ಬಂದು ಪುಟ್ಟ ಮಗ ಮುದ್ದಾಗಿ ಗುಡ್ ಮಾರ್ನಿಂಗ್ ಎನ್ನುತ್ತಾ ಅಲ್ಲಿಂದ ಎದ್ದು ಹೋಗ್ತಾನೆ. ಹೀಗೆ ಮಾತು ಬಾರದ ಮಗ ಮೊದಲ ಬಾರಿಗೆ ಮಾತನಾಡಿದ್ದನ್ನು ಕಂಡು ಆ ತಾಯಿ ಭಾವುಕರಾಗಿದ್ದಾರೆ.

ಜೂನ್  08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 11.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದ್ದು, ಈ ಮುದ್ದಾದ ವಿಡಿಯೋವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

Source : https://tv9kannada.com/trending/autistic-non-verbal-boy-speaks-directly-to-his-mother-for-the-first-time-heartwarming-video-goes-viral-viral-news-mda-848071.html

Leave a Reply

Your email address will not be published. Required fields are marked *