Bigg Boss ಸ್ಫರ್ಧಿಗಳಿಗೆ ಕಿಚ್ಚನ ಖಡಕ್​ ಕ್ಲಾಸ್​; ಈ ವಾರವೂ TRPಯಲ್ಲಿ ದಾಖಲೆ ಬರೆಯುತ್ತಾ ಶೋ.

ಬೆಂಗಳೂರು: ಈಗಾಗಲೇ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss) 11ನೇ ಆವೃತ್ತಿಯೂ ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿದೆ. ಈ ವಾರ ಮನೆಯಲ್ಲಿ ನಡೆದ ಬೆಳವಣಿಗೆಯಿಂದಾಗಿ ಇಬ್ಬರು ಸ್ಫರ್ಧಿಗಳು ನೇರವಾಗಿ ಎಲಿಮಿನೇಟ್​ ಆಗಿದ್ದು, ವೀಕ್ಷಕರು ವಾರದ ಕೊನೆಯಲ್ಲಿ ನಡೆಯುವ ಕಿಚ್ಚನ (Kichcha Sudeep) ಪಂಚಾಯಿತಿಗಾಗಿ ಕಾತುರದಿಂದ ಕಾಯುತ್ತಿದ್ದರು.

ಇದೀಗ ಇದಕ್ಕೆ ಉತ್ತರ ದೊರೆತಿದ್ದು, ಇಂದಿನ ಸಂಚಿಕೆ ಟಿಆರ್​ಪಿ ರೇಟಿಂಗ್​ (TRP Rating) ವಿಚಾರದಲ್ಲಿ ಮತ್ತೊಮ್ಮೆ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ.

ಪಂಚಾಯ್ತಿ ಕಟ್ಟೇಲಿ ನ್ಯಾಯ ಎತ್ತಿ ಹಿಡಿದ ಕಿಚ್ಚ! ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ ಯಾರಿಂದ ಏನು ತಪ್ಪಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿ ಸುದೀಪ್​ (Kichcha Sudeep) ಮಾತನಾಡಿದ್ದಾರೆ. ತಪ್ಪು ಮಾಡಿದವರು ಹೊರಗೆ ಹೋದರು. ಆದರೆ ಇಲ್ಲಿ ಇರೋರು ಎಷ್ಟು ಜನ ಸರಿ ಇದ್ದೀರಿ ಎಂದು ಸ್ಪರ್ಧಿಗಳಿಗೆ ಪ್ರಶ್ನಿಸಿರುವ ಸುದೀಪ್​ (Kichcha Sudeep), ಸ್ಫರ್ಧಿಗಳಿಗೆ ಸಖತ್ತಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಈ ವಿಡಿಯೋಗೆ ಮೆಚ್ಚುಗೆಯೆ ಮಹಾಪೂರವೇ ಹರಿದು ಬರುತ್ತಿದೆ.

ಒಬ್ಬರು ಚಪ್ಪಲ್‌ ಎಸೆದು ಬಿಸಾಡುತ್ತಾರೆ ಅಂದರೆ ಅದು ಓಕೆನಾ ಎಂದು ಪ್ರಶ್ನೆ ಇಟ್ಟಾಗ ಹಂಸ ಅವರು ಪ್ರಾಮಾಣಿಕತೆ ಬಗ್ಗೆ ಮಾತಣಾಡುತ್ತಾರೆ. ಈ ವೇಳೆ ಕಿಚ್ಚ ಗರಂ ಆಗಿದ್ದು, ಈ ಮನೆಗೆ ಪ್ರಾಮಾಣಿಕತೆ ಎನ್ನುವ ವರ್ಡ್‌ ಸೂಟ್‌ ಆಗಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಇನ್ನು ಮಾನಸ ಅವರಿಗೂ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಮಾತುಗಳಿಂದ ಮನೆಯಿಂದ ಒಬ್ಬ ವ್ಯಕ್ತಿ ಹೊರಗೆ ಹೋದರು ಅಂತಾ ಹೇಳ್ತಾ ಇದ್ದಾರೆ. ಆದರೆ ನೀವು ಮಾತನಾಡಿರುವ ಕೆಲವು ತಪ್ಪು ಮಾತುಗಳನ್ನು ಇಟ್ಟುಕೊಂಡು ನಿಮ್ಮನ್ನು ಯಾಕೆ ಮನೆಯೊಳಗೆ ಇಟ್ಟುಕೊಂಡಿರಬೇಕು. ಇನ್ನು ಚೈತ್ರಾ ಅವರು ಹೆಣ್ಣು ಮಕ್ಕಳ ಬಗ್ಗೆ ಹಾಗೇ ಹೀಗೆ ಮಾತನಾಡಬೇಡಿ ಎನ್ನುತ್ತೀರಿ. ಒಬ್ಬ ಅಪ್ಪನಿಗೆ ಹುಟ್ಟಿದ್ದಿ ಎಂದು ಅಂತಿರಲ್ಲ..ಅದು ಅಪ್ಪನಿಗೆ ಬೈತಾ ಇರೋದಲ್ಲ ಅದು ತಾಯಿಗೆ ಬೈತಾ ಇರೋದು ಮೇಡಮ್‌ ಎಂದು ಖಡಕ್ಕಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಬಿಡುಗಡೆಯಾಗಿದ್ದ ಪ್ರೋಮೋದಲ್ಲಿ ನಿರೂಪಕ ಸುದೀಪ್​ ಬಿಗ್​ಬಾಸ್​ಗೆ (Bigg Boss) ಕ್ಲಾಸ್​ ತೆಗೆದುಕೊಂಡಂತೆ ಕಂಡು ಬಂದಿತು. ಇಷ್ಟೂ ವರ್ಷ ಮನೆಯವರು ಮಾಡೋ ತಪ್ಪನ್ನ ಚರ್ಚೆ ಮಾಡುತ್ತಿದ್ದ ಈ ವೇದಿಕೆಯಲ್ಲಿ ಈ ಸಲ ಕಂಪ್ಲೇಂಟ್​ ಇರೋದು ಬಿಗ್​​ಬಾಸ್‌ (Bigg Boss)ಮೇಲೆ, ಬಿಗ್​​ಬಾಸ್‌ (Bigg Boss) ಅವಸರದ ನಿರ್ಧಾರ ತೆಗೆದುಕೊಂಡ್ರಾ ಅಥವಾ ತೆಗೆದುಕೊಂಡ ನಿರ್ಧಾರ ತಪ್ಪಾಗಿದ್ಯಾ ಎಂದು ಕಿಚ್ಚ ಸುದೀಪ್‌ (Kichcha Sudeep) ಪ್ರಶ್ನಿಸಿದ್ದಾರೆ.

ಜಗದೀಶ್​ ಅವರನ್ನು ಮನೆಯಿಂದ ಹೊರಗೆ ಕಳಿಸಿರುವುದನ್ನು ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಅನೇಕರು ಬಿಗ್​ಬಾಸ್​ (Bigg Boss) ಸ್ಫರ್ಧಿಗಳನ್ನು ಟ್ರೋಲ್​ ಮಾಡುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಮಾನಸ (ತುಕಾಲಿ ಸಂತೋಷ್​ ಪತ್ನಿ) ಅವರನ್ನು ಹೀನಾಯವಾಗಿ ಟ್ರೋಲ್​ ಮಾಡುತ್ತಿದ್ದು, ಜಗದೀಶ್​ ಅವರು ಮನೆಯಿಂದ ಹೊರಹೋಗಲು ಈಕೆಯೇ ನೇರ ಕಾರಣ ಎಂದು ಕಿಡಿಕಾರಿದ್ದಾರೆ. ಈಕೆಯನ್ನು ಮೊದಲು ಎಲಿಮಿನೇಟ್​ ಮಾಡಿ ಎಂದು ಆಗ್ರಹಿಸಿದ್ದಾರೆ. ಇದಲ್ಲದೆ ಚೈತ್ರಾ ಕುಂದಾಪುರ, ಉಗ್ರಂ ಮಂಜು, ಹಂಸಾರ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Source : https://m.dailyhunt.in/news/india/kannada/vijayvani-epaper-vijaykan/bigg+boss+sfardhigalige+kichhana+khadak+klaas+ee+vaaravu+trpyalli+daakhale+bareyutta+sho-newsid-n635726215?listname=topicsList&topic=news&index=6&topicIndex=1&mode=pwa&action=click

Leave a Reply

Your email address will not be published. Required fields are marked *