ಚಿತ್ರದುರ್ಗ ಹಿಂದೂ ಮಹಾಗಣಪತಿ ಮಹೋತ್ಸವ: ಸೆ. 28ಕ್ಕೆ ನವದುರ್ಗೆಯರ ಆಗಮನ, ಅ. 1ಕ್ಕೆ ಬೈಕ್ ರ್ಯಾಲಿ, ಅ. 3ಕ್ಕೆ ಬೃಹತ್ ಶೋಭಾಯಾತ್ರೆ.
ಚಿತ್ರದುರ್ಗ ಸೆ. 27
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಪ್ರತಿವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಹಿಂದೂ ಮಹಾಗಣಪತಿ ಮಹೋತ್ಸವದ ಅಂಗವಾಗಿ ಸೆ, 14 ರಿಂದ ಅ.03ರವರೆಗೆ ಮಹೋತ್ಸವವನ್ನು ಅದ್ದೂರಿಯಾಗಿ ಅಚರಣೆಯನ್ನು ಮಾಡಲಾಗುತ್ತಿದ್ದು ಸೆ.28ಕ್ಕೆ ನವದುರ್ಗೆ, ಅ.01ಕ್ಕೆ ಬೈಕ್ ರ್ಯಾಲಿ, ಆ.3 ಕ್ಕೆ ಶೋಭಾಯತ್ರೆ. ನಡೆಸಲಾಗುತ್ತಿದೆ ಎಂದು ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಚನ್ನಕೇಶವ್ ತಿಳಿಸಿದರು.
ಆ.26 ಬುಧವಾರ ಬೆಳಿಗ್ಗೆ ಗೋಪೂಜೆ ಹಾಗೂ ಧ್ವಜಪೂಜೆ ನೆಡೆಸಿದ್ದು, ಸೆ 9ರಂದು ಹಿಂದೂ ಮಹಾ ಗಣಪತಿಯ ಪುರಪ್ರವೇಶ ಮಾಡಿದ್ದು ಸೆ 14ರ ಸೋಮವಾರ ಬೆಳಿಗ್ಗೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನೆಡೆಸಲಾಯಿತು. ಅ. 3 ರಂದು ವಿಜೃಂಭಣೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.
ಪ್ರತಿ ದಿನ ಗಣಪತಿಗೆ ವಿಶೇಷ ಪೂಜೆ, ಅಲಂಕಾರ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗವನ್ನು ಮಾಡಲಾಗಿದೆ. ಇದ್ದಲ್ಲದೆ ಪ್ರತಿ ದಿನ ಸಂಜೆ ವಿವಿಧ ಗಣ್ಯರಿಂದ ಉಪನ್ಯಾಸ, ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಸೆ. 28ರ ಸೋಮವಾರ ಬೆಳ್ಳಗೆ 9.30ಕ್ಕೆ ಸಿಹಿ ನೀರು ಹೊಂಡದಿಂದ ಗಂಗೆ ಪೂಜೆಯೊಂದಿಗೆ ಹಿಂದೂ ಮಹಾ ಗಣಪತಿ ಮಂಟಪಕ್ಕೆ ಚಿತ್ರದುರ್ಗ ನಗರದ ಗ್ರಾಮ ದೇವತೆಗಳ ನವದುರ್ಗೆಯರ ಆಗಮನವಾಗಲಿದ್ದು, ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಬರಗೇರಮ್ಮ, ಕಾಳಿಕ ಮಠೇಶ್ವರಿ, ಕನ್ನಿಕಾ ಪರಮೇಶ್ವರಿ, ಬನಶಂಕರಿ ದೇವಿ, ಮಲೆನಾಡು ಚೌಡೇಶ್ವರಿ ದೇವಿ, ದುರ್ಗಾದೇವಿ, ಬಡ್ಡಾಂಬಿಕಾ ದೇವಿ, ಅಧಿ ಶಕ್ತಿ ಮಾರಿಕಾಂಭ ದೇವಿ, ಸಿಂಗಧೂರಿ ಚೌಡೇಶ್ವರಿ ದೇವಿ, ಕಣಿವೆ ಮಾರಮ್ಮ ದೇವಿಯರು ಆಗಮಿಸಲಿದ್ದಾರೆ.
ಸಂಜೆ 6ಗಂಟೆಯಿಂದ ನೈತಿಕ ಶಿಕ್ಷಣ ಮತ್ತು ಸಂಸ್ಕೃತ ವಿಭಾಗ ಕ್ಷೇತ್ರೀಯ ಪ್ರಮುಖರಾದ ಜಗನ್ನಾಥ ಶಾಸ್ತ್ರಿಯವರಿಂದ ಸನಾತನ ಧರ್ಮದ ಪ್ರಾಮುಖ್ಯತೆ ಮತ್ತು ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಎಸ್.ವಿ. ಮ್ಯೂಸಿಕಲ್ ಕ್ರಿಯೇಷನ್, ಇವರಿಂದ ಸ್ವರೋತ್ಸವ ಕಾರ್ಯಕ್ರಮ ನಡೆಯಲಿದೆ.
29ರ ಮಂಗಳವಾರ ಬೆಳಿಗ್ಗೆ 9.00 ರಿಂದ ಗಣ ಹೋಮ, ದುರ್ಗಾ ಹೋಮ ನವಗ್ರಹ ಹೋಮ ಹಾಗೂ ಮೃತ್ಯುಂಜಯ ಹೋಮ ಮಧ್ಯಾಹ್ನ 1.00 ರಿಂದ ಜೈ ಶ್ರೀರಾಮ ಬಳಗದಿಂದ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ವಿಶ್ವಹಿಂದೂ ಪರಿಷದ್ ಪ್ರಾಂತ ಕಾರ್ಯದರ್ಶಿಗಳಾದ ಬಿ.ಇ. ಸುರೇಶ್ರವರಿಂದ ರಾಷ್ಟ್ರೀಯತೆಯಲ್ಲಿ ಗೋವಿನ ಪಾತ್ರದ ಬಗ್ಗೆ ಉಪನ್ಯಾಸ ಸರಿಗಮ ಸಂಗೀತ ಪಾಠಶಾಲೆಯ ಸುಜಿತ ಕುಲಕರ್ಣಿ ಯವರಿಂದ ಭಕ್ತಿ ಸಂಗೀತ.
ಸೆ 30ರ ಬುಧವಾರ ಸಂಜೆ 6ಕ್ಕೆ ಬಜರಂಗದಳದ ಜಿಲ್ಲಾ ಸಂಯೋಜಕರಾದ ಬಾಲಕೃಷ್ಣರವರಿಂದ ಕಾರ್ಯಕರ್ತನ ಬಗ್ಗೆ ಉಪನ್ಯಾಸ ನಂತರ ಡ್ಯಾನ್ಸ್ ಸ್ಟುಡಿಯೋದ ಸಮ್ಯುನಿಯರು ಇವರಿಂದ ನೃತ್ಯನಿನಾದ ಕಾರ್ಯಕ್ರಮ ನಡೆಯಲಿದೆ.
ಅ.01ರ ಗುರುವಾರ ಬೆಳಿಗ್ಗೆ 10 ರಿಂದ ಬೃಹತ್ ಬೈಕ್ ರ್ಯಾಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂಜೆ 6ಕ್ಕೆ ಮಧುಕರ್ ಪಟ್ಟಾಭಿಯವರಿಂದ ಚೆನ್ ಜೀ ಮತ್ತು ರಾಷ್ಟ್ರೀಯತೆಯ ಬಗ್ಗೆ ಉಪನ್ಯಾಸ, ಕೆ.ಎ.16 ಬ್ಯಾಂಡ್ನ ಅಭಿಷೇಕ್ ಮುರುಡರವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಅ 03ರ ಬೆಳಿಗ್ಗೆ 10.40 ಬೃಹತ್ ಶೋಭಾ ಯಾತ್ರೆ ಪ್ರಾರಂಭವಾಗಲಿದೆ ದೇಶದ ಎರಡನೇ ಅತಿ ದೊಡ್ಡ ಹಿಂದೂ ಮಹಾಗಣಪತಿ ಉತ್ಸವ ಎಂದೇ ಹೆಸರು ಪಡೆದಿರುವ ಈ ಕಾರ್ಯಕ್ರಮವನ್ನು ಕಳೆದ 20 ವರ್ಷಗಳಿಂದ ಅತ್ಯಂತ ವೈಭವದಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿಯಾಗಿ ಚನ್ನಕೇಶವ್ ತಿಳಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j