
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 10 ಫೆ. 22 ರ ಶನಿವಾರ ಕೊಟ್ಟೂರಿನಲ್ಲಿ ನಡೆಯಲಿರುವ ಶ್ರೀ ಕ್ಷೇತ್ರ ಕೊಟ್ಟೂರು ರಥೋತ್ಸವ ಪ್ರಯುಕ್ತ ನಗರದ ದೊಡ್ಡಪೇಟೆಯಲ್ಲಿನ ಶ್ರೀ ಗುರು ಕೊಟ್ಟೂರು ಬಸವೇಶ್ವರ ಪಾದಯಾತ್ರೆ ಸಮಿತಿಯಿಂದ 27ನೇ ವರ್ಷದ ಸಮಗ್ರ ಪಾದಯಾತ್ರೆಯನ್ನು ಫೆ. 20ರ ಗುರುವಾರ ಪ್ರಾರಂಭ ಮಾಡಲಿದ್ದಾರೆ ಎಂದು ಸಮಿತಿ ತಿಳಿಸಿದೆ. ಈಗಾಗಲೇ ಕಳೆದ 26 ವರ್ಷಗಳಿಂದ ನಿರಂತರವಾಗಿ ಕೊಟ್ಟೂರು ರಥೋತ್ಸವಕ್ಕೆ ಚಿತ್ರದುರ್ಗದಿಂದ ಅಸಂಖ್ಯಾತ ಭಕ್ತಾಧಿಗಳು ಪಾದಯಾತ್ರೆಯ ಮೂಲಕ ಕೊಟ್ಟೂರನ್ನು ತಲುಪಿದ್ದಾರೆ ಎಂದಿನಂತೆ ಈ ಭಾರಿಯೂ ಸಹಾ 27ನೇ ವರ್ಷದ ಪಾದಯಾತ್ರೆ ನಡೆಯಲಿದೆ ಎಂದಿದ್ದಾರೆ.
ಫೆ. 20ರ ಗುರುವಾರ ಬೆಳ್ಳಿಗೆ 3 ಗಂಟೆಗೆ ನಗರದ ದೊಡ್ಡಪೇಟೆಯಲ್ಲಿನ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಮಹಾ
ಮಂಗಳಾರತಿಯೊಂದಿಗೆ ಪ್ರಾರಂಭ ಮಾಡಲಾಗುವುದು, ಪಾದಯಾತ್ರೆಯೂ ಮಲ್ಲಾಪುರ, ಗುಡ್ಡದ ರಂಗವ್ವನಹಳ್ಳಿ, ಬೊಗಳೇರಹಟ್ಟಿ,
ಕಲ್ಲೇದೇವರಪುರ, ದೊಣ್ಣೆಹಳ್ಳಿ, ಜಗಳೂರು, ಕಚ್ಚೇನಹಳ್ಳಿ, ಹೊಸಕೆ, ಗಡಿಮಾಕುಂಟೆ, ಉಜ್ಜನಿಯಿಂದ ಕೊಟ್ಟೂರನ್ನು ಫೆ. 22 ರಂದು
ತಲುಪಲಿದೆ.
ಈ ಪಾದಯಾತ್ರೆಗೆ ಆಗಮಿಸುವ ಭಕ್ತಾಧಿಗಳು ತಮ್ಮ ಹೆಸರನ್ನು ನೊಂದಾಯಿಸಲು 9972975010, 9986428930, ಇವರನ್ನು
ಸಂರ್ಪಕ ಮಾಡಬಹುದಾಗಿದೆ.