NEW FASTAG RULES : ಇತರೆ ಪ್ರಯಾಣಿಕರು ಎದುರಿಸುವ ಸಮಸ್ಯೆಗಳನ್ನು ನಿವಾರಿಸಲು ಹಾಗು ತಡೆರಹಿತ ಪ್ರಯಾಣಕ್ಕಾಗಿ FASTagನಲ್ಲಿ ಈ ಹೊಸ ನಿಯಮ ಜಾರಿ ಮಾಡಲಾಗುತ್ತಿದೆ.

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ಫಾಸ್ಟ್ಯಾಗ್ ಬಳಕೆದಾರರಿಗಾಗಿ ಇಂದಿನಿಂದ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಬ್ಯಾಲೆನ್ಸ್ ಇಲ್ಲದೇ ಪ್ರಯಾಣಿಸುವ ಟೋಲ್ ಪ್ರಯಾಣಿಕರಿಗೆ ಇದರಿಂದ ಹೆಚ್ಚು ಪರಿಣಾಮ ಉಂಟಾಗಲಿದೆ.
ಟೋಲ್ ತೆರಿಗೆ ಸಂಗ್ರಹವನ್ನು ಸುವ್ಯವಸ್ಥಿತಗೊಳಿಸುವ ಮತ್ತು ಪ್ರಯಾಣಿಕರಿಗೆ ತಡೆರಹಿತ ಅನುಭವವನ್ನು ಖಾತರಿಪಡಿಸುವ ಗುರಿಯೊಂದಿಗೆ ಈ ನಿಯಮವನ್ನು ಜಾರಿ ಮಾಡಲಾಗುತ್ತಿದೆ. ಹಾಗೆಯೇ ರಿಚಾರ್ಚ್ ಇಲ್ಲದೇ ಪ್ರಯಾಣಿಸುವ ಪ್ರಯಾಣಿಕರು ದುಪ್ಪಟ್ಟು ಪಾವತಿಸುವ ಅನಿವಾರ್ಯತೆಯೂ ಎದುರಾಗಲಿದೆ.
ನೀವು ತಿಳಿದಿರಬೇಕಾದ ಮಾಹಿತಿ:
- ಟೋಲ್ ಮೂಲಕ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದುವುದು ಅವಶ್ಯಕ.
- ಖಾತೆಯಲ್ಲಿ ಸಾಕಷ್ಟು ಹಣ ಹೊಂದಿಲ್ಲದಿದ್ದರೆ, ಸಿಸ್ಟಮ್ ನಿಮಗೆ ಮುಂದುವರಿಯಲು ಅವಕಾಶ ನೀಡುತ್ತದೆ. ಆದರೆ ನಿಮ್ಮ ಫಾಸ್ಟ್ಟ್ಯಾಗ್ನಲ್ಲಿ ಕಡಿಮೆ ಬ್ಯಾಲೆನ್ಸ್ ಹೊಂದಿದೆ ಎಂದು ತೋರಿಸುತ್ತದೆ.
- ಫಾಸ್ಟ್ಯಾಗ್ ಬ್ಯಾಲೆನ್ಸ್ ರಿಚಾರ್ಚ್ ಮಾಡಲು, ಈ ಕುರಿತು ನೆನಪಿಸಲು ಎಸ್ಎಂಎಸ್/ಫಾಸ್ಟ್ಯಾಗ್ ಅಪ್ಲಿಕೇಶನ್ ಮೂಲಕ ನೋಟಿಫಿಕೇಶನ್ ಸ್ವೀಕರಿಸುತ್ತೀರಿ.
- ಸರಿಯಾದ ಸಮಯಕ್ಕೆ ರೀಚಾರ್ಜ್ ಮಾಡಲು ಸಾಧ್ಯವಾಗದಿದ್ದರೆ, ಹೆದ್ದಾರಿಯಿಂದ ನಿರ್ಗಮಿಸುವಾಗ ಟೋಲ್ಗೆ ದುಪ್ಪಟ್ಟು ಪಾವತಿಸಬೇಕಾಗುತ್ತದೆ.
- ಟೋಲ್ ಶುಲ್ಕ ₹100 ಆಗಿದ್ದರೆ, ಹೆದ್ದಾರಿ ಪ್ರಯಾಣ ಆರಂಭಿಸುವ ಒಂದು ಗಂಟೆ ಮುಂಚೆ ರೀಚಾರ್ಜ್ ಮಾಡದಿದ್ದರೆ, ನೀವು 200 ರೂಪಾಯಿ ಪಾವತಿಸಬೇಕಾಗುತ್ತದೆ.
ಹೊಸ ಫಾಸ್ಟ್ಯಾಗ್ ನಿಯಮವೇಕೆ?:
- ಅನೇಕ ಚಾಲಕರು ತಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸದs ಟೋಲ್ ಪ್ಲಾಜಾಗಳನ್ನು ಪ್ರವೇಶಿಸಲು ಮುಂದಾಗುತ್ತಿದ್ದಾರೆ. ಇದರಿಂದ ಇತರೆ ವಾಹನಗಳ ಸಂಚಾರದಲ್ಲಿ ವಿಳಂಬ, ದಟ್ಟಣೆ ಸಮಸ್ಯೆಗಳಾಗುತ್ತಿವೆ. ಇದನ್ನು ಎನ್ಎಚ್ಎಐ ಗಂಭೀರವಾಗಿ ಪರಿಗಣಿಸಿದೆ.
- ಇನ್ಮುಂದೆ ಪ್ರಯಾಣಿಕರು ಸಾಕಷ್ಟು ಬ್ಯಾಲೆನ್ಸ್ ಹೊಂದಿಲ್ಲದೆ ಪ್ರಯಾಣಿಸಿದಲ್ಲಿ ಅದು ದಂಡಕ್ಕೆ ಕಾರಣವಾಗುತ್ತದೆ. ಹಾಗಾಗಿ, ಪ್ರಯಾಣ ಆರಂಭಿಸುವ ಮೊದಲು ಸಾಕಷ್ಟು ಮೊತ್ತದ ಬ್ಯಾಲೆನ್ಸ್ ಅನ್ನು ಫಾಸ್ಟ್ಯಾಗ್ ಖಾತೆಯಲ್ಲಿ ಹೊಂದಿದ್ದೀರಾ ಎಂಬುದನ್ನು ಪರಿಶೀಲಿಸುವುದು ಅಗತ್ಯ.