
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 6 ಚಿತ್ರದುರ್ಗ ನಗರದ ಹೂರವಲಯದ ಮದಕರಿಪುರದ ಬಳಿಯಲ್ಲಿನ ಶ್ರೀ ಮಂಜುನಾಥ್ಸ್ವಾಮಿ ಎಜುಕೇಷನ್ ಚಾರಿಟಬಲ್ ಟ್ರಸ್ಟ್ವತಿಯಿಂದ ಎಸ್.ಎಂ.ಎಸ್.ಗುರುಕುಲಮ್ ಹಾಗೂ ಎಸ್.ಎಂ.ಎಸ್. ಸ್ಕೂಲ್ ಅಫ್ ಎಕ್ಸ್ಲೆಂಟ್ ಶಾಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಶಾಲೆ ಪ್ರಾರಂಭದ ಹಿನ್ನಲೆಯಲ್ಲಿ ಮಕ್ಕಳಿಗೆ ಶುಕ್ರವಾರ ಅಕ್ಷರ ಅಭ್ಯಾಸದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಕ್ಕಳಿಗೆ ತಾವು ಕಲಿಯುವ ಪುಸ್ತಕಕ್ಕೆ ಪೂಜೆಯನ್ನು ಶಾಸ್ರೋಸ್ತವಾಗಿ ಮಾಡಿಸಿ ತಮ್ಮ ಮಕ್ಕಳ ಮುಂದಿನ ಅಭ್ಯಾಸ ಸರಿಯಾದ ರೀತಿಯಲ್ಲಿ ನಡೆಯಲಿ ಉತ್ತಮವಾದ ಶಿಕ್ಷಣವನ್ನು ಪಡೆಯಲಿ ಎಂದು ಪೋಷಕರು ಪ್ರಾರ್ಥಿಸಿದರು.
ಈ ಸಮಯದಲ್ಲಿ ಮಾತೃಶ್ರೀ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎನ್.ಶಾಂತ ವೆಂಕಟೇಶ್, ಶ್ರೀ ಮಂಜುನಾಥ್ ಸ್ವಾಮಿ ಎಜುಕೇಷನ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ವಿ.ಎಲ್. ಪ್ರಶಾಂತ್ ಕುಮಾರ್, ಕಾರ್ಯದರ್ಶಿ ವಿ.ಎಲ್.ಪ್ರವೀಣ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಗೌರಿ ಪ್ರಶಾಂತ್, ಶ್ರೀಮತಿ ಕಾವ್ಯ ಪ್ರವೀಣ್, ಮಕ್ಕಳ ಪೋಷಕರು, ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.