ಭೋವಿ ಗುರುಪೀಠದಲ್ಲಿ ಪ್ರಜಾಪ್ರಭುತ್ವ ಮತ್ತು ತುರ್ತು ಪರಿಸ್ಥಿತಿ ಕುರಿತ ಸಂವಾದ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 28 ಶೋಷಣೆಯ ಬದುಕು ಬಹುಸಂಖ್ಯಾತರದ್ದಾಗಿತ್ತು ಅವರ ನೋವು ಅರಿಯಲು ಬುದ್ಧ ಸಾಮ್ರಾಜ್ಯವನ್ನು ತ್ಯಜಿಸಿದರು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. 

ನಗರದ ಹೊರ ವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಪ್ರಜಾಪ್ರಭುತ್ವ ಮತ್ತು ತುರ್ತು ಪರಿಸ್ಥಿತಿ ಕುರಿತ ಸಂವಾದದಲ್ಲಿ ಮಾತನಾಡಿದ ಅವರು ವೈಭವದ ಜೀವನವನ್ನು ಬುದ್ಧ ತ್ಯಜಿಸಿ ಬಹುಸಂಖ್ಯಾತರ ನೋವಿಗೆ ವಿಮೋಚನೆಯನ್ನು ನೀಡಿದರು. ಅವರ ಚಿಂತನೆಗಳು ಸಮಾಜದ ಪರಿವರ್ತನೆಗೆ ಬುನಾದಿಯಾಯಿತು ಎಂದು ಹೇಳಿದರು.

ದೇವ ಭಾಷೆಯನ್ನು ಯಾರಾದರೂ ಫಟಿಸಿದರೆ ನಾಲಿಗೆಯನ್ನು ಕತ್ತರಿಸುವ ಕೇಳಿದರೆ ಕಿವಿಗೆ ಸೀಸ ಹೊಯ್ಯುವ ಸಂದರ್ಭವಿತ್ತು ಅದರಿಂದ ಹೊರ ಬರಲು ಪ್ರಶ್ನಿಸಬೇಕು ಎಂದು ಬುದ್ಧ, ಬಸವ ಹೇಳಿದ್ದಾರೆ. ಪ್ರಶ್ನಿಸಿಕೊಳ್ಳದೆ ಯಾವುದನ್ನು ಒಪ್ಪಬಾರದು ಎಂದಿದ್ದಾರೆ. ಅಲ್ಲಮಪ್ರಭು ದೇವರನ್ನು ಪ್ರಶ್ನಿಸುವ ಪರಿಯನ್ನ ವಚನಗಳಲ್ಲಿ ನೋಡುತ್ತೇವೆ. ಪ್ರಶ್ನೆ ಇಲ್ಲದಿದ್ದರೆ ಅಭಿವೃದ್ಧಿ ಅಭಿವ್ಯಕ್ತಿ ಆಗಲಾರದು ಎಂದು ತಿಳಿಸಿದರು. 

ಸಂವಿಧಾನದ ಸಮಾನತೆಯ ಆಶಯಗಳು ಈಡೇರಬೇಕಾದರೆ ಪ್ರಶ್ನಿಸುವ ಮನೋಭಾವ ರೂಡಿಮಾಡಿಕೊಳ್ಳಬೇಕು. ಶಿಕ್ಷಣವಂತರಾಗಿ ಜ್ಞಾನವನ್ನು ಪಡೆದು ಸರಿಯಾದ ಮಾದರಿಯಲ್ಲಿಯೇ ತರ್ಕಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಜ್ಞಾನ ಸರಿದಾರಿಯಲ್ಲಿ ನಡೆಸಿದರೆ ವಿಧ್ಯೆ ಪ್ರಜ್ಞಾವಂತಿಕೆಯನ್ನ ಬಿಡಿಸಿ ಹೇಳುತ್ತದೆ, ಎರಡನ್ನೂ ಪ್ರತಿಪಾದಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು, ಪ್ರಶ್ನೆ ಕೇಳದವರು ಭಾರತವನ್ನು ವಿಶ್ವಗುರು ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿತ್ತು, ಆ ಸಂದರ್ಭದಲ್ಲಿ ಕಷ್ಟಗಳನ್ನು ಕಂಡರು ಸಹ ಸದೃಢ ಭಾರತವನ್ನ ಕಟ್ಟುವಲ್ಲಿ ಸಂವಿಧಾನದ ಆಶಯಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ಸದೃಢ ಭಾರತ ನಿರ್ಮಾಣಕ್ಕೆ ಮೂಲಭೂತವಾಗಿ ಸಂವಿಧಾನವನ್ನು ಸರಿಯಾದ ಮಾದರಿಯಲ್ಲಿ ಅರ್ಥೈಸಿಕೊಂಡಾಗ ಮಾತ್ರ ಸಂಪೂರ್ಣ ಯಶಸ್ಸು ಕಾಣಲು ಸಾಧ್ಯ. ಪ್ರಜೆಗಳನ್ನ ತುಳಿಯಬಾರದು ಎಂದು ಹೇಳಿದರು.

ಗುಜರಾತ್, ಬಿಹಾರದಲ್ಲಿ ಉಂಟಾದ ಹರಾಜಕ ಪರಿಸ್ಥಿತಿ ಮತ್ತು ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಭಾರತದಲ್ಲಿ ಜಾರಿ ಮಾಡಲಾಯಿತು, ವ್ಯವಸ್ಥೆಯಲ್ಲಿ ವಿರೋಧಪಕ್ಷದವರ ಟೀಕೆಗೆ ಹೆಚ್ಚು ಒಳಗಾಗಬೇಕಾಯಿತು, ಕರ್ನಾಟಕದಲ್ಲಿ ದೇವರಾಜ್ ಅರಸ್ ರವರು ಮುಖ್ಯಮಂತ್ರಿಯಾಗಿದ್ದರಿಂದ ತುರ್ತು ಪರಿಸ್ಥಿತಿಯ ಪರಿಣಾಮ ಕರ್ನಾಟಕದಲ್ಲಿ ಭಿನ್ನವಾಗಿತ್ತು, ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ವಿವಿಧ ಯೋಜನೆಗಳನ್ನು ಮತ್ತು ಬಡತನ ನಿವಾರಣೆಗೆ 20 ಅಂಶಗಳ ಕಾರ್ಯಕ್ರಮ ರೂಪಿಸಿದರು, ಭೂ-ಒಡೆತನ, ಜೀತಪದ್ಧತಿ ನಿರ್ಮೂಲನೆ ಮಾಡಿದರು. ಹಿಂದುಳಿದ ಅಲ್ಪಸಂಖ್ಯಾತ ವರ್ಗಗಳಿಗೆ ಸಾಮಾಜಿಕ ಸ್ವಾತಂತ್ರ?ಯವನ್ನು ಕಲ್ಪಿಸಿಕೊಟ್ಟರು, ಶಿಕ್ಷಣ ಉದ್ಯೋಗದಲ್ಲಿ ಅವಕಾಶ ಒದಗಿಸುವಂತೆ ಶ್ರಮಿಸಿದರು, ತುರ್ತು ಪರಿಸ್ಥಿತಿಯನ್ನ ಉತ್ತಮ ಕಾರ್ಯಗಳಿಗೆ ಉಪಯೋಗಿಸಿಕೊಂಡ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಯಾದವಜ ಗುರುಪೀಠದ ಶ್ರೀ ಕೃಷ್ಣಯಾದವನಂದಾ ಸ್ವಾಮೀಜಿ, ಕುಂಬಾರ ಗುರುಪೀಠದ ಕುಂಬಾರಗುಂಡಯ್ಯ ಸ್ವಾಮೀಜಿ, ಹಿರಿಯ ಪತ್ರಕರ್ತರಾದ ಎಂ.ಎಸ್.ರಾಜೇಂದ್ರಕುಮಾರ್, ಎ.ಎಸ್.ನಾರಾಯಣಸ್ವಾಮಿ ಮತ್ತು ಮಾಜಿ ಕಾರ್ಮಿಕ ಅಧಿಕಾರಿ ಎಂ.ಬಾಲಕೃಷ್ಣ, ಭೋವಿ ಗುರುಪೀಠದ ಸಿ.ಇ.ಓ ಗೌನಹಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *