ಚಿತ್ರದುರ್ಗ ನ. 11
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಮಲೆಬೆನ್ನೂರಿನಲ್ಲಿ ಇದೇ ತಿಂಗಳು 6, 7 ಮತ್ತು 8ನೇ ತಾರೀಕಿನಂದು ನಡೆದ 40ನೇ ರಾಜ್ಯ ಮಟ್ಟದ ಸಬ್ ಜೂನಿಯರ, ಕೇಡಿಟ್,ಜೂನಿಯರ್ ಮತ್ತು ಸೀನಿಯರ್ ಟೈಕೊಂಡ ಪಂದ್ಯಾವಳಿಯಲ್ಲಿ ಅದರಲ್ಲಿ ಚಿತ್ರದುರ್ಗ ಜಿಲ್ಲೆಯಿಂದ 40 ಕ್ರೀಡಾಪಟುಗಳ ಭಾಗವಹಿಸಿದ್ದು ಇದರಲ್ಲಿ 20 ಬಂಗಾರದ ಪದಕ ,15 ಬೆಳ್ಳಿ ಪದಕ, ಮತ್ತು 5 ಕಂಚಿನ ಪದಕಗಳನ್ನು ಪಡೆದು ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದು ನಮ್ಮ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ಬಂಗಾರದ ಪದಕ ಪಡೆದ ಕೆಡಿಟ್ ಮಕ್ಕಳು ಇದೇ ತಿಂಗಳು 21, 22, ಮತ್ತು 23 ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಎಲ್ಲಾ ಮಕ್ಕಳಿಗೂ ತರಬೇತಿದಾರರಾದ ಶ್ರೀಮತಿ ಎಂ. ಸುನೀತ ಪ್ರವೀಣ್ ಕುಮಾರ್, ಮತ್ತು ಶ್ರೀಮತಿ ಎಂ.ಅನಿತ ಮಹಾಂತೇಶ್ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.