“ದತ್ತ ಜಯಂತಿ 2025: ಹೊಳಲ್ಕೆರೆಯಲ್ಲಿ ಬಜರಂಗದಳದಿಂದ ದತ್ತ ಮಾಲಾಧಾರಣೆಯೊಂದಿಗೆ ಉತ್ಸವಕ್ಕೆ ಚಾಲನೆ”.

ಚಿತ್ರದುರ್ಗ ಡಿ 01

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ದತ್ತ ಜಯಂತಿ ಉತ್ಸವ 2025 ರ ಅಂಗವಾಗಿ ದತ್ತ ಮಾಲಾಧಾರಣೆ ಹಾಕುವುದರ ಮೂಲಕ ಹೊಳಲ್ಕೆರೆಯಲ್ಲಿ ದತ್ತ ಜಯಂತಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಬಜರಂಗದಳದ ಜಿಲ್ಲಾ ಸಂಯೋಜಕರಾದ ದಿನೇಶ್ ಮಾತನಾಡಿ, ಕರ್ನಾಟಕದ ಅಯೋಧ್ಯೆ ಎಂದೇ ಬಿಂಬಿತ ವಾಗಿರುವ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಶತಮಾನಗಳಿಂದ ಪೂಜೆ ನಡೆಯುತ್ತಿರಲಿಲ್ಲ ಇದೀಗ ವಿಶ್ವ ಹಿಂದೂ ಪರಿಷದ್ ಬಜರಂಗದಳದ ನಿರಂತರ ಹೋರಾಟ ಸಂಘರ್ಷದಿಂದ ಹಿಂದೂ ಅರ್ಚಕರ ನೇಮಕ ವಾಗಿದ್ದು. ದತ್ತಪೀಠದ ಗುಹೆಯಲ್ಲಿ ದತ್ತಪಾದುಕೆಗೆ ತ್ರಿಕಾಲ ಪೂಜೆ ಮತ್ತು ಪ್ರತಿ ಹುಣ್ಣಿಮೆಯಂದು ದತ್ತ ಹೋಮ ನಡೆಯುತ್ತಿದ್ದು. ಪಾದುಕೆಯ ಪೂಜೆಯಿಂದ ಇಡೀ ದತ್ತಪೀಠದ ಪರಿಸರದಲ್ಲಿ ವಿಶೇಷವಾದ ಶಕ್ತಿ ಅಹ್ವಾನವಾಗಿದೆ ಎಂದರು.

ಡಿಸೆಂಬರ್ 3 ಬುಧವಾರ ಸಂಜೆ 5 ಗಂಟೆಗೆ ನಗರದಲ್ಲಿ ದತ್ತ ಮಾಲಾಧಾರಿಗಳಿಂದ “ಸಂಕೀರ್ತನ ಯಾತ್ರೆ” ಹಾಗೂ ಡಿಸೆಂಬರ್ 4 ಗುರುವಾರ ಬೆಳಗ್ಗೆ ದತ್ತಪೀಠದಲ್ಲಿ ದತ್ತ ಜಯಂತಿ ಪ್ರಯುಕ್ತ ದತ್ತ ಪಾದುಕೆ ದರ್ಶನ ಮಾಡಲಾಗುವುದು ಎಂದು ಹೇಳಿದರು.

ವಿಶ್ವ ಹಿಂದೂ ಪರಿಷದ್ ತಾಲ್ಲೂಕು ಅಧ್ಯಕ್ಷರಾದ ಧೃವಕುಮಾರ್, ಸಂಯೋಜಕ ಜಯರಾಜ್, ಸೇವಾ ಪ್ರಮುಖ ಅಣ್ಣಪ್ಪ, ಲೋಹಿತ್, ಸುರೇಶ್ ಅಗ್ರಹಾರ, ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *