ಚಿತ್ರದುರ್ಗ: ಜವಳೇರ ಬೀದಿ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಡಿ.12ರಂದು ಕಡೇ ಕಾರ್ತಿಕ ದೀಪಾರಾಧನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಡಿ.11:
ನಗರದ ದೊಡ್ಡಪೇಟೆಯ ಜೈನ್ ದೇವಾಲಯದ ಹಿಂಭಾಗದಲ್ಲಿರುವ ಜವಳೇರ ಬೀದಿಯಲ್ಲಿನ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 12, ಶುಕ್ರವಾರ ಸಂಜೆ 7.30ಕ್ಕೆ ‘ಕಡೆ ಕಾರ್ತಿಕ’ ದೀಪಾರಾಧನೆ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮವನ್ನು ದೇವಸ್ಥಾನ ಅಭಿವೃದ್ದಿ ಸಮಿತಿ ಆಯೋಜಿಸಿದೆ.

ವಾರ್ಷಿಕವಾಗಿ ನಡೆಯುವ ಈ ವಿಶೇಷ ಪೂಜೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸುವರು ಎಂದು ನಿರೀಕ್ಷಿಸಲಾಗಿದೆ. ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಆಶೀರ್ವಾದಕ್ಕೆ ಪಾತ್ರರಾಗುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *