General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ.
- COP28 ಹವಾಮಾನ ಶೃಂಗಸಭೆ ಯಾವ ದೇಶದಲ್ಲಿ ನಡೆಯಿತು?
ಉತ್ತರ: ಯುನೈಟೆಡ್ ಅರಬ್ ಎಮಿರೇಟ್ಸ್ (UAE)
2. ಕರ್ನಾಟಕದಲ್ಲಿ ಮೊದಲ ಕನ್ನಡ ಪತ್ರಿಕೆ ಯಾವುದು?
ಉತ್ತರ: ಮಂಗಳೂರು ಸಮಾಚಾರ
3. ರಾಷ್ಟ್ರಪತಿಗೆ ಕ್ಷಮಾದಾನ ಅಧಿಕಾರ ನೀಡಿರುವ ವಿಧಿ ಯಾವುದು?
ಉತ್ತರ: ವಿಧಿ 72
4. ಸಂವಿಧಾನದ 6ನೇ ಅನುಸೂಚಿ ಯಾವ ಪ್ರದೇಶಗಳಿಗೆ ಸಂಬಂಧಿಸಿದೆ?
ಉತ್ತರ: ಈಶಾನ್ಯ ಭಾರತದ ಜನಾಂಗೀಯ ಪ್ರದೇಶಗಳು
5. RBI ಯ “Repo Rate” ಎಂದರೇನು?
ಉತ್ತರ: RBI ಬ್ಯಾಂಕುಗಳಿಗೆ ನೀಡುವ ಕಡಿಮೆ ಅವಧಿಯ ಸಾಲದ ಬಡ್ಡಿದರ
6. ಹಣದುಬ್ಬರ ನಿಯಂತ್ರಣಕ್ಕೆ RBI ಯಾವ ನೀತಿ ಬಳಸುತ್ತದೆ?
ಉತ್ತರ: ಹಣಕಾಸು ನೀತಿ (Monetary Policy)
7. ಭಾರತದ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಯಾರು ಮಂಡಿಸುತ್ತಾರೆ?
ಉತ್ತರ: ಕೇಂದ್ರ ಹಣಕಾಸು ಸಚಿವರು
8. NBFC ಎಂದರೆ ಏನು?
ಉತ್ತರ: Non-Banking Financial Company
9. Basel III ನಿಯಮಗಳು ಯಾವ ಕ್ಷೇತ್ರಕ್ಕೆ ಸಂಬಂಧಿಸಿದವು?
ಉತ್ತರ: ಬ್ಯಾಂಕಿಂಗ್ ನಿಯಂತ್ರಣ ಮತ್ತು ಬಂಡವಾಳ ಸುರಕ್ಷತೆ
10. ಕರ್ನಾಟಕದ ರಾಜ್ಯ ಚಿಹ್ನೆಯ ಕೆಳಗಿನ ಘೋಷವಾಕ್ಯ ಏನು?
ಉತ್ತರ: ಸತ್ಯಮೇವ ಜಯತೆ