ಬೆನ್ನು ನೋವು ನಿವಾರಣೆಗೆ ಯೋಗಾಸನಗಳು: ಪ್ರತಿನಿತ್ಯ ಅಭ್ಯಾಸದಿಂದ ಶಾಶ್ವತ ಪರಿಹಾರ.

ಇಂದಿನ ಅನಾರೋಗ್ಯಕರ ಜೀವನಶೈಲಿ, ದೀರ್ಘಕಾಲ ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆ, ತಪ್ಪಾದ ಕುಳಿತುಕೊಳ್ಳುವ ಭಂಗಿ ಇವುಗಳ ಪರಿಣಾಮವಾಗಿ ಬೆನ್ನು ನೋವು ಸಮಸ್ಯೆ ಕೇವಲ ವೃದ್ಧರಲ್ಲಿ ಮಾತ್ರವಲ್ಲದೆ ಹದಿಹರೆಯದವರಲ್ಲೂ ಹೆಚ್ಚಾಗಿ ಕಾಣಿಸುತ್ತಿದೆ. ಬೆನ್ನುನೋವನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

ಆಯುರ್ವೇದ ತಜ್ಞರ ಪ್ರಕಾರ, ಪ್ರತಿನಿತ್ಯ ಸರಿಯಾದ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಬೆನ್ನುನೋವನ್ನು ಸಹಜವಾಗಿ ನಿಯಂತ್ರಿಸಬಹುದು. ನಮ್ಮ ಬೆನ್ನುಮೂಳೆಗೆ ಬೆಂಬಲ ನೀಡುವ ಕೋರ್ ಸ್ನಾಯುಗಳು (ಕಿಬ್ಬೊಟ್ಟೆ ಮತ್ತು ಕೆಳ ಬೆನ್ನಿನ ಸ್ನಾಯುಗಳು) ದುರ್ಬಲವಾದಾಗ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಯೋಗಾಸನಗಳು ಈ ಸ್ನಾಯುಗಳನ್ನು ಬಲಪಡಿಸಿ ನೋವನ್ನು ಕಡಿಮೆ ಮಾಡುತ್ತವೆ.

ಇಂದಿನ ಯುವಜನರಲ್ಲಿ ಬೆನ್ನುನೋವಿನ ಪ್ರಮುಖ ಕಾರಣಗಳು

  • ದೀರ್ಘಕಾಲ ಕುಳಿತು ಕೆಲಸ ಮಾಡುವುದು
  • ತಪ್ಪಾದ ಭಂಗಿ (Text Neck ಸಮಸ್ಯೆ)
  • ದೈಹಿಕ ಚಟುವಟಿಕೆ ಕೊರತೆ
  • ಅನಿಯಮಿತ ಆಹಾರ ಪದ್ಧತಿ
  • ಒತ್ತಡ ಮತ್ತು ಮಾನಸಿಕ ದಣಿವು

ಬೆನ್ನು ನೋವು ನಿವಾರಿಸಲು ಉಪಯುಕ್ತ ಯೋಗಾಸನಗಳು

1. ಭಾರದ್ವಾಜಾಸನ

ಈ ಆಸನವು ಬೆನ್ನುಮೂಳೆ ಹಾಗೂ ಶ್ರೋಣಿಯ ಸ್ನಾಯುಗಳನ್ನು ಬಲಪಡಿಸಿ ದೇಹಕ್ಕೆ ಲವಚಿಕತೆಯನ್ನು ನೀಡುತ್ತದೆ. ಬೆನ್ನು ತಿರುಗಿಸುವ ಚಲನೆಯಿಂದ ಸ್ನಾಯುಗಳ ಬಿಗಿತ ಕಡಿಮೆಯಾಗುತ್ತದೆ.

2. ಸೇತು ಬಂಧಾಸನ

ಬೆನ್ನುನೋವನ್ನು ಕಡಿಮೆ ಮಾಡುವ ಜೊತೆಗೆ ಮೆದುಳನ್ನು ಶಾಂತಗೊಳಿಸುತ್ತದೆ. ದೀರ್ಘಕಾಲ ಕುಳಿತು ಕೆಲಸ ಮಾಡುವವರಿಗೆ ಈ ಆಸನ ಅತ್ಯಂತ ಉಪಯುಕ್ತ.

3. ಮಾರ್ಜರಿಯಾಸನ

ಬೆನ್ನುಮೂಳೆಗೆ ಉತ್ತಮ ಸ್ಟ್ರೆಚಿಂಗ್ ನೀಡುವ ಈ ಆಸನ ಹೊಟ್ಟೆಯ ಅಂಗಗಳಿಗೆ ಮೃದುವಾದ ಮಸಾಜ್‌ನಂತೆ ಕಾರ್ಯನಿರ್ವಹಿಸುತ್ತದೆ.

4. ಪಶ್ಚಿಮೋತ್ಥಾನಾಸನ

ಸಂಪೂರ್ಣ ಬೆನ್ನನ್ನು ಹಿಗ್ಗಿಸುವ ಮೂಲಕ ಕೆಳ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ. ನರಮಂಡಲವನ್ನು ಶಮನಗೊಳಿಸುವ ಗುಣವೂ ಇದಕ್ಕೆ ಇದೆ.

5. ಅರ್ಧ ಮತ್ಸ್ಯೇಂದ್ರಾಸನ

ಬೆನ್ನು ನೋವು ನಿವಾರಣೆಯ ಜೊತೆಗೆ ಜೀರ್ಣಕ್ರಿಯೆ ಸುಧಾರಣೆಗೆ ಸಹಕಾರಿ. ಯಕೃತ್ತಿನ ಶುದ್ಧೀಕರಣಕ್ಕೂ ಸಹಾಯ ಮಾಡುತ್ತದೆ.

6. ಸುಪ್ತ ಮತ್ಸ್ಯೇಂದ್ರಾಸನ

ಸಿಯಾಟಿಕ್ ನರದ ಒತ್ತಡವನ್ನು ಕಡಿಮೆ ಮಾಡಿ ದೇಹದ ಬಿಗಿತವನ್ನು ಸಡಿಲಗೊಳಿಸುತ್ತದೆ.

7. ಧನುರಾಸನ

ಕೆಳ ಬೆನ್ನು ಹಾಗೂ ತೋಳುಗಳನ್ನು ಬಲಪಡಿಸುವ ಅತ್ಯುತ್ತಮ ಆಸನ. ಬೆನ್ನು ನೋವಿನಿಂದ ಬಳಲುವವರಿಗೆ ಪರಿಣಾಮಕಾರಿ.

ಇನ್ನೂ ಪ್ರಯೋಜನಕಾರಿ ಆಸನಗಳು

ಅಧೋಮುಖ ಶ್ವಾನಾಸನ, ಅಗ್ನಿಷ್ಠಂಬಾಸನ, ಅರ್ಧಚಂದ್ರಾಸನ, ಅರ್ಧಚಕ್ರಾಸನ, ಪದ್ಮಾಸನ, ಶಶಾಂಕಾಸನ, ಪವನಮುಕ್ತಾಸನ, ಶಲಭಾಸನ, ಭುಜಂಗಾಸನ ಮುಂತಾದ ಆಸನಗಳು ಸಹ ಬೆನ್ನುನೋವು ಕಡಿಮೆ ಮಾಡಲು ಸಹಾಯಕವಾಗಿವೆ.

ಮುಖ್ಯ ಸೂಚನೆ

ತೀವ್ರವಾದ ಬೆನ್ನುನೋವು, ಬೆನ್ನುಮೂಳೆಯ ಗಾಯ, ಕಡಿಮೆ ರಕ್ತದೊತ್ತಡ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಯೋಗಾಭ್ಯಾಸಕ್ಕೆ ಮುನ್ನ ತಜ್ಞ ವೈದ್ಯರು ಅಥವಾ ಯೋಗಗುರುಗಳ ಸಲಹೆ ಪಡೆಯುವುದು ಅತ್ಯಾವಶ್ಯಕ.

ಓದುಗರಿಗೆ ಸೂಚನೆ

ಈ ಲೇಖನದಲ್ಲಿರುವ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಸ್ವಯಂ ಚಿಕಿತ್ಸೆ ಮಾಡದೆ, ವೈದ್ಯರ ಸಲಹೆ ಪಡೆಯುವುದು ಉತ್ತಮ.

Views: 9

Leave a Reply

Your email address will not be published. Required fields are marked *