ಭಕ್ತಿಯ ಶಕ್ತಿ: ಭಗವಂತನ ಆಶೀರ್ವಾದದಿಂದ ಸಂಕಷ್ಟ ನಿವಾರಣೆ — ಕೆ.ಎಸ್. ನವೀನ್.

ದೀಪಗಳ ಬೆಳಕು, ಭಕ್ತಿಯ ಸಂಗೀತ: ಚಿತ್ರದುರ್ಗದಲ್ಲಿ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಚಿತ್ರದುರ್ಗ ಜ. 15

ಭಕ್ತರಾದವರು ಭಗವಂತನಿಗೆ ನಿಜವಾದ ಭಕ್ತಿಯನ್ನು ನೀಡಿದರೆ ಆತ ಅದನ್ನು ಮರಳಿ ಭಕ್ತರಿಗೆ ಆರ್ಶೀವಾದದ ರೀತಿಯಲ್ಲಿ ಅವರ ಕಷ್ಟಗಳನ್ನು ಬಗೆಹರಿಸುತ್ತಾನೆ ಎಂಬ ನಂಬಿಕೆ ನಮ್ಮ ಹಿಂದೂಗಳಲ್ಲಿ ಇದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.

ನಗರದ ಮೆದೇಹಳ್ಳಿ ರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ (ರಿ.)ವತಿಯಿಂದ ಬುಧವಾರ ಸಂಜೆ ನಡೆದ 26ನೇ ವರ್ಷದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‍ವತಿಯಿಂದ ಕಳೆದ 25 ವರ್ಷಗಳಿಂದ ನಿರಂತರವಾಗಿ ದೀಪೋತ್ಸವನ್ನು ನಡೆಸುತ್ತಾ ಬರಲಾಗಿದೆ. ಇದು ರಾಜ್ಯದೆಲ್ಲಡೆ ಖ್ಯಾತಿಯನ್ನು ಪಡೆದಿದೆ. ಪ್ರತಿ ದಿನ ಪೂಜಾ ಚಟುವಟಿಕೆಗಳು ನಡೆಯುವುದರ ಮೂಲಕ ದೇವರಿಗೆ ಭಕ್ತಿಯನ್ನು ಪ್ರದರ್ಶನ ಮಾಡಿ ದೈವಿಕ ಶಕ್ತಿ ಬೆಳೆಯುತ್ತಿದೆ. ಭಕ್ತನಾದವರು ಭಗವಂತನಿಗೆ ನಿಜವಾದ ಭಕ್ತಿಯನ್ನು ನೀಡಿದರೆ ಆತನು ತನ್ನ ಭಕ್ತರು ಸಂಕಷ್ಟದಲ್ಲಿ ಇದ್ದಾಗ ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ದೇವರು ಭಕ್ತರ ಮಧ್ಯೆ ಅವಿನಾಭಾವ ಸಂಬಂಧ ಇದೆ, ನಿಜವಾದ ಭಕ್ತಿಯಿಂದ ದೇವರನ್ನು ಕಾಣಲು ಸಾಧ್ಯವಿದೆ ಎಂದರು.

ಹಿಂದೂ ಧರ್ಮದ ಉಗಮದ ಬಗ್ಗೆ ಯಾರಿಗೂ ಸಹಾ ಗೊತ್ತಿಲ್ಲ, ಮುಂದೆಯೂ ಸಹಾ ಗೊತ್ತಾಗುವುದಿಲ್ಲ, ಭಾವನೆಗಳ ಮಧ್ಯೆ ಹಿಂದು ಧರ್ಮ ಮೂಡಿದೆ, ಹಿಂದೂ ಧರ್ಮ ಶಾಂತಿಯನ್ನು ಪಾಲಿಸುತ್ತಿದೆ, ನಮ್ಮ ದೇಶ ಬೇರೆ ದೇಶಗಳ ಮೇಲೆ ಆಕ್ರಮಣವನ್ನು ಮಾಡಿಲ್ಲ ಎಲ್ಲರ ಒಳಿತಿಗಾಗಿ ಪ್ರಾರ್ಥನೆಯನ್ನು ಮಾಡುತ್ತಿದೆ, ಭಗವಂತ ಕಲ್ಲು, ಮಣ್ಣು, ಮರ, ನೀರು,ಬೆಂಕಿ,ಗಾಳಿಯಲ್ಲಿ ಸೇರಿದಂತೆ ಎಲ್ಲಾ ಕಡೆಯಲ್ಲಿಯೂ ಸಹಾ ಇರುತ್ತಾನೆ. ಇದರಿಂದ ಭಾರತೀಯರಲ್ಲಿ ಶ್ರೇಷ್ಠವಾದ ಮನೋಭಾವವನ್ನು ಮೂಡಿಸಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವಂತ ಕಾರ್ಯವಾಗಬೇಕಿದೆ ಆಧುನಿಕ ಹೆಸರಿನಲ್ಲಿ ಮಕ್ಕಳನ್ನು ಪೋಷಕರು ವಿಮುಖರನ್ನಾಗಿ ಮಾಡಲಾಗುತ್ತಿದೆ, ಮುಂಚೆ ಪ್ರತಿ ದಿನ ದೇವಸ್ಥಾನಕ್ಕೆ ಹೋಗಲಾಗುತ್ತಿತ್ತು ತದ ನಂತರ ವಾರಕ್ಕೆ ಒಮ್ಮು ತದ ನಂತರ ತಿಂಗಳಿಗೊಮ್ಮ ಈಗ ಹಬ್ಬ ಹರಿದಿನಗಳಲ್ಲಿ ಮಾತ್ರ ದೇವಸ್ಥಾನಗಳಿಗೆ ಹೋಗುವಂತ ಪ್ರವೃತ್ತಿ ಇದೆ ಈ ರೀತಿಯಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆ ತರುವಂತ ಕಾರ್ಯವನ್ನು ಮಾಡುವಂತೆ ಪೋಷಕರಲ್ಲಿ ಮನವಿ ಮಾಡಿದರು.

26ನೇ ವರ್ಷದ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಐಶ್ವರ್ಯ ಗ್ರೂಪ್ ಆಫ್ ಹೋಟೆಲ್ಸ್ ಮಾಲಿಕ ರಾದ ಅರುಣ್‍ಕುಮಾರ್ ಮಾತನಾಡಿ, ಗಂಗಾರಾತಿ, ತುಂಗಾರತಿ ಎನ್ನುವ ಹಾಗೇ ಚಿತ್ರದುರ್ಗದಲ್ಲಿ ಪ್ರತಿ ವರ್ಷ ಅಯ್ಯಪ್ಪಸ್ವಾಮಿಗೆ ಸಾವಿರಾರು ಭಕ್ತಿರಿಂದ ದೀಪಾರಾತಿ ನಡೆಯುತ್ತಿದೆ, ಇಲ್ಲಿ ಕಳೆದ 60 ದಿನಗಳಿಂದ ಸುಮಾರು 2 ಲಕ್ಷ ಮಾಲಾಧಿರಿಗಳು ಅನ್ನ ಪ್ರಸಾದವನ್ನು ಸ್ವೀಕಾರ ಮಾಡಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಇಲ್ಲಿಗೆ ಅಯ್ಯಪ್ಪ ಮಾಲಾಧಾರಿಗಳು ಬರುವವರ ಸಂಖ್ಯೆಯೂ ಸಹಾ ಹೆಚ್ಚಾಗುತ್ತಿದೆ. ಇದನ್ನು ಟ್ರಸ್ಟ್‍ನವರ ಉತ್ತಮವಾಗಿ ನಡೆಸುತ್ತಿದ್ದಾರೆ ಎಂದರು.

ದೀಪೋತ್ಸವವನ್ನು ಉದ್ಘಾಟನೆ ಮಾಡಿದ ಎಸ್.ಆರ್.ಎಸ್.ವಿದ್ಯಾಸಂಸ್ಥೆಯ ಲಿಂಗಾರೆಡ್ಡಿ ಮಾತನಾಡಿ, ಅಯ್ಯಪ್ಪಸ್ವಾಮಿ ನಂಬಿದವರಿಗೆ ಯಾವೋತ್ತುನ ಸಹಾ ಮೋಸವನ್ನು ಮಾಡುವುದಿಲ್ಲ, ಇಲ್ಲಿಗೆ ನೀಡದ ದೇಣಿಗೆ ಯಾವುತ್ತು ಸಹಾ ದರುಪಯೋಗವಾಗುವುದಿಲ್ಲ ಅನ್ನ ಸಂತರ್ಪಣೆಯನ್ನು ಮಾಡುವುದರ ಮೂಲಕ ಬಂದವರ ಹಸಿವನ್ನು ನೀಗಿಸುತ್ತಾರೆ,ಈ ಕಾರ್ಯಕ್ರಮ ಮುಂದಿನ ದಿನದಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಹಿಂದೂ ಮಹಾಗಣಪತಿ ಮಾದರಿಯಲ್ಲಿ ನಡೆಯಲಿದೆ. ಚಿತ್ರದುರ್ಗದಿಂದ ಕೇರಳದಲ್ಲಿನ ಅಯ್ಯಪ್ಪನ ದರ್ಶನಕ್ಕೆ 5 ರಿಂದ 6 ಸಾವಿರ ಮಾಲಾಧಾರಿಗಳು ತೆರಳಿದ್ದಾರೆ. ಮಾಲಾಧಾರಿಗಳು ಬರೀ ಮಾಲೆಯನ್ನು ಹಾಕಿದ ಸಮಯದಲ್ಲಿ ಮಾತ್ರ ಭಕ್ತಿಯಿಂದ ಇರದೇ ವರ್ಷ ಪೂರ್ತಿಯಾಗಿ ಭಕ್ತಿ, ದುಶ್ಚಟಗಳಿಂದ ದೂರ ಇದ್ದು ಅಯ್ಯಪ್ಪನ ಪ್ರತಿಗೆ ಪಾತ್ರರಾಗುವಂತೆ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ. ಬದರೀನಾಥ್ ಮಾತನಾಡಿ, ಚಿತ್ರದುರ್ಗ ಬರೀ ಪ್ರವಾಸ್ಯೋದ್ಯಮವಾಗುವುದು ಮಾತ್ರವಲ್ಲದೆ ಧಾರ್ಮೀಕ ಪ್ರವಾಸ್ಯೋದ್ಯಮವಾಗಿ ಪರಿವರ್ತನೆಯಾಗುತ್ತಿದೆ, ಇಲ್ಲಿ ಹಿಂದು ಮಹಾ ಗಣಪತಿ ಶೋಭಾಯಾತ್ರೆ, ಅಯ್ಯಪ್ಪಸ್ವಾಮಿಯ ದೀಪೋತ್ಸವ, ಅಕ್ಕ-ತಂಗಿಯರ ಭೇಟಿ, ಸಿಡಿ, ಜಾತ್ರೆಗಳು, ಶರಣ ಸಂಸ್ಕøತಿ ಉತ್ಸವ, ಮಹಾ ಶಿವರಾತ್ರಿ ಸಪ್ತಾಹದಂತಹ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ, ಉತ್ತರಾಯಣ ಕಾಲದಲ್ಲಿ ಪ್ರಾರಂಭ ಮಾಡಿದ ವಿವಿಧ ರೀತಿಯ ಕೆಲಸಗಳು ಯಾವುದೇ ರೀತಿಯ ತೊಂದರೆ ಇಲ್ಲದೆ ಸುಗಮವಾಗಿ ನಡೆಯುತ್ತವೆ ಎಂಬ ನಂಬಿಕೆ ಇದೆ ಎಂದ ಅವರು ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳುನ ಇವೆ ಅವುಗಳನ್ನು ನಮ್ಮ ಪ್ರಧಾನ ಮಂತ್ರಿಗಳಾದ ಮೋದಿಯವರು ದಿಟ್ಟ ತನದಿಂದ ಎದುರಿಸುತ್ತಿದ್ದಾರೆ, ನಮ್ಮ ದೇಶದ ಮೇಲೆ ದೊಡ್ಡ ದೇಶ ಸೇರಿದಂತಡೆ ನೆರೆ ದೇಶಗಳು ಸಹಾ ಧಾಳಿಯನ್ನು ಮಾಡಲು ಸಜ್ಜಾಗಿವೆ ಅದನ್ನು ಮೋದಿಯವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ಡಿ.ಸಿ.ಸಿ.ಬ್ಯಾಂಕ್‍ನ ನಿರ್ದೆಶಕರಾದ ಹೆಚ್.ಎಂ.ದ್ಯಾಮಣ್ಣ, ವರ್ತಕರಾದ ಉದಯ್ ಶೆಟ್ಟಿ, ಡಾ. ಸಿದ್ದಾರ್ಥ್,ಮೆದೇಹಳ್ಳಿ ಗ್ರಾಮಪಂಚಾಯಿತಿಯ ಅಧ್ಯಕ್ಷರಾದ ನಿರಂಜನಮೂರ್ತಿ, ಟೀಚರ್ಸ್ ಕಾಲೋನಿಯ ಸುಭಾಷ್‍ಬಾಬು, ಶ್ರೀ ಕಂಠೇಶ್ವರ ಏಜೆನ್ಸಿಸ್‍ಯ ಸುರೇಶ್ ಬಾಬು ಭಾಗವಹಿಸಲಿದ್ದು, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಶರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷರಾದ ಬೆಟ್ಟದ ಮಲ್ಲಪ್ಪ, ಮಲ್ಲಿಕಾರ್ಜನ್, ಕಾರ್ಯದರ್ಶಿ ಎಂ.ಪಿ.ವೆಂಕಟೇಶ್, ಸಹ ಕಾರ್ಯದರ್ಶಿ ಚಂದ್ರಶೇಖರ್, ನಿರ್ದೆಶಕರಾದ ಮೋಹನ್ ಕುಮಾರ್, ತಿಮ್ಮಣ್ಣ, ಜಗದೀಶ್, ಇಂದ್ರಪ್ಪ ರಮೇಶ್, ಸೂರಯ್ಯ, ಮಿಠಾಯಿ ಮುರುಗೇಶ್, ಮಂಜುನಾಥ್ ಶೆಟ್ಟಿ ಭಾಗವಹಿಸಿದ್ದರು.

ಹಿನ್ನಲೆ ಗಾಯಕರಾದ ಯಶವಂತ್, ಮಂಗಳೂರು, ನಿತಿನ್ ರಾಜಾರಾಮ್ ಶಾಸ್ತ್ರಿ, ಮೈಸೂರು ಹಾಗೂ ಕೃಪಾ ಎಸ್. ಬೆಂಗಳೂರು ಇವರಿಂದ ಸುರಸಾರವ ಭಕ್ತಿ ಕಾರ್ಯಕ್ರಮ ನಡೆಯಿತು.

ನಂತರ ಸಾವಿರಾರು ಭಕ್ತರು ದೇವಾಲಯದ ಆವರಣದಲ್ಲಿ ಇಡಲಾದ ದೀಪಗಳಿಗೆ ದೀಪವನ್ನು ಹಚ್ಚುವುದರ ಮೂಲಕ 26ನೇ ವರ್ಷದ ದೀಪೋತ್ಸವವನ್ನು ನಡೆಸಿಕೊಟ್ಟರು.

Leave a Reply

Your email address will not be published. Required fields are marked *