ಬಂಧಿ ನಿವಾಸಿಗಳಿಗೆ ಯೋಗ ಉಚಿತ ಯೋಗ ಶಿಕ್ಷಣ: ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಆಯೋಜನೆ.
ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್
ಚಿತ್ರದುರ್ಗ: ಫೆ.8
ಜಿಲ್ಲಾ ಆಯುಷ್ ಇಲಾಖೆ ಇಲಾಖೆ ಚಿತ್ರದುರ್ಗ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಚಿತ್ರದುರ್ಗ ಜಿಲ್ಲಾ ಕಾರಾಗೃಹ ಬಂಧಿ ನಿವಾಸಿಗಳಿಗೆ ನೈತಿಕ ಶಿಕ್ಷಣ ಹಾಗೂ ಯೋಗ ಪ್ರಾಣಾಯಾಮ ಧ್ಯಾನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಕುರಿತು ಮಾತನಾಡಿದ ಕಾರಾಗೃಹ ಅಧೀಕ್ಷಕ ಸಿಧರಾಮ ಬಿ ಪಾಟೀಲ್ ಬಂಧಿ ನಿವಾಸಿಗಳು ತಮ್ಮ ಮಾನಸಿಕ ಒತ್ತಡ ಕಡಿಮೆ ಮಾಡಲು ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವುದು ಉತ್ತಮ, ಹಾಗೆಯೇ ಜೀವನದಲ್ಲಿ ಉತ್ತಮ ಮಾರ್ಗದಲ್ಲಿ ನಡೆಯಲು ನೈತಿಕ ಶಿಕ್ಷಣದ ಮೂಲಕ ಜೀವನದ ಮೌಲ್ಯಗಳನ್ನು ಅರಿತುಕೊಳ್ಳಬೇಕು ಇದರಿಂದ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯಗೊಳಿಸುತ್ತವೆ. ಭಾರತದಲ್ಲಿ ಇತ್ತೀಚಿಗೆ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ಜಾರಿಯಾಗುತ್ತಿವೆ ಮತ್ತು ಸಮಾಜದಲ್ಲಿ ಅಪರಾಧ ಪ್ರವೃತ್ತಿ ಕಡಿಮೆಗೊಳಿಸಲು ಸಹಕಾರಿಯಾಗಲಿದೆ ಅದಕ್ಕಾಗಿ ಯೋಗ ತರಬೇತಿ ಶಿಕ್ಷಣ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಇಲ್ಲಿಯ ಬಂಧಿ ನಿವಾಸಿಗಳಿಗೆ ನಿರಂತರ ಯೋಗ ಶಿಕ್ಷಣ ಸೌಲಭ್ಯ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು.
ಯೋಗ ತರಬೇತುದಾರ ಹಾಗು ಭಾರತೀಯ ಯೋಗ ಶಿಕ್ಷಣ ಸಂಖ್ಯೆ ಅಧ್ಯಕ್ಷ ರವಿ ಕೆ.ಅಂಬೇಕರ್ ತರಬೇತಿ ನೀಡಿದರು, ಈ ಸಂಧರ್ಭದಲ್ಲಿ ಜೈಲರ್ ರಾಜೇಂದ್ರ ಯು ಕೋಪರ್ಡೆ, ಸಹಾಯಕ ಜೈಲರ್ ಮಡಿವಾಳಪ್ಪ ಎಸ್ ತಳವಾರ್ ಹಾಗೂ ಬಂಧಿಖಾನೆ ಶಿಕ್ಷಕ, ಆರ್ ಎ ಶ್ರೀರಾಮ ರೆಡ್ಡಿ ಉಪಸ್ಥಿತರಿದ್ದರು.