ದೇವಾಲಯಗಳು ಸಮಾಜ ನಿರ್ಮಾಣದ ಕೇಂದ್ರಗಳು: ಕಬೀರಾನಂದಾಶ್ರಮದಲ್ಲಿ 96ನೇ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 12

ನಮ್ಮ ದೇಶ ವಿವಿಧ ರೀತಿಯ ವೈವಿಧ್ಯಮಯದಿಂದ ಕೊಡಿದೆ. ನಮ್ಮಲ್ಲಿ ಹಲವಾರು ಭಾಷೆ, ಕಲೆ, ಸಾಹಿತ್ಯ ಸಂಸ್ಕøತಿ ಇದ್ದರೂ ಸಹಾ ನಾವೆಲ್ಲರು ಒಂದು ಎಂಬ ಬಾವನೆ ಮಾಡುತ್ತಿದೆ, ನಮ್ಮಲ್ಲಿನ ಮಂದಿರ, ಮಠಗಳು ಆಶ್ರಮಗಳು, ಕೋಟ್ಯಾಂತರ ಜನತೆಯನ್ನು ಸಾಕುತ್ತಿವೆ. ದೇವಾಲಯಗಳು ಸಮಾಜವನ್ನು ನಿರ್ಮಿಸುವ ಕೇಂದ್ರಗಳಾಗಿವೆ ಎಂದು ಕೊಲ್ಲಾಪುರದ ಕನ್ನೇರಿ ಶ್ರೀ ಸಿದ್ದಗಿರಿ ಸಂಸ್ಥಾನ ಮಠದ ಶ್ರೀ ಅದೃಶ್ಯ ಕಾಡ ಸಿದ್ದೇಶ್ವರ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿ ಶ್ರೀ ಸದ್ಗರು ಕಬೀರಾನಂದಾಶ್ರಮದಲ್ಲಿ ಪ್ರಾರಂಭವಾಧ 96ನೇ ಮಹಾ ಶಿವರಾತ್ರಿ ಮಹೋತ್ಸವದ ವೇದಿಕೆ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ನಮ್ಮ ದೇಶದಲ್ಲಿ 1500 ಭಾಷೆಗಳಿದ್ದು ವಿವಿಧ ರೀತಿಯ ಜಾತಿ, ಧರ್ಮ, ಜನಾಂಗಗಳು, ಭಾಷೆಗಳು, ಸಂಸ್ಕøತಿಯನ್ನು ಹೊಂದಿದ್ದರು ಸಹಾ ನಮ್ಮಲ್ಲಿ ಏಕತೆ ಇದೆ. ಎಲ್ಲರನ್ನು ಪ್ರೀತಿಸುವ ಮನೋಭಾವ ಇದೆ ಯಾರನ್ನು ಸಹಾ ದ್ವೇಷ ಮಾಡುವ ಮನೋಭಾವ ನಮ್ಮಲ್ಲಿ ಇಲ್ಲ ಇದಕ್ಕೆ ನಮ್ಮಲ್ಲಿನ ಗ್ರಂಥಗಳು, ವಚನಗಳು, ದಾಸರ ಕೀರ್ತಿನೆಗಳು, ಪುರಾಣಗಳು ಕಾರಣವಾಗಿವೆ ಇವುಗಳು ನಮ್ಮಲ್ಲಿ ಉತ್ತಮವಾದ ಗುಣಗಳನ್ನು ಮೂಡಿಸಿವೆ. ಇದರಿಂದ ನಮ್ಮಲ್ಲಿ ಯಾರೇ ಬಂದರೂ ಸಹಾ ಅವರನ್ನು ಮಕ್ಕಳಂತೆ ಸಾಕಲಾಗುತ್ತದೆ ಎಂದರು.

ನಮ್ಮಲ್ಲಿನ ಮಠಗಳು ಆಶ್ರಮಗಳು ನಮ್ಮ ಕಲೆಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿವೆ ಈ ರೀತಿಯಾದ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಅವುಗಳನ್ನು ಪೋಷಿಸುತ್ತಿವೆ, ಇದ್ದಲ್ಲದೆ ದೇವಾಲಯಗಳಿಂದ ಕೋಟ್ಯಾಂತರ ಕುಟುಂಬಗಳು ಜೀವನವನ್ನು ನಡೆಸುತ್ತಿವೆ ದೇವಾಲಯದ ಒಳಗಡೆ ಪೂಜಾರಿಕೆಯನ್ನು ಮಾಡುತ್ತಾ ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿದ್ದರೆ ದೇವಾಲಯದ ಹೊರಗಡೆಯಲ್ಲಿ ಲಕ್ಷಾಂತರ ಕುಟುಂಬಗಳು ವ್ಯಾಪಾರವನ್ನು ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿವೆ. ನಮ್ಮಲ್ಲಿ ದೇವ ಒಬ್ಬ ಆದರೆ ಆತನ ನಾಮ ಮಾತ್ರ ಹಲವಾರು ರೀತಿಯಿದೆ. ಶಿವರಾತ್ರಿ ದೇಶದೆಲ್ಲಡೆ ಆಚರಣೆಯಾಗುತ್ತದೆ ಆದರೆ ಚಿತ್ರದುರ್ಗ ಕಬೀರಾನಂದಾಶ್ರಮದಲ್ಲಿ ಮಾತ್ರ ಕಳೆದ 95 ವರ್ಷಗಳಿಂದ ನಿರಂತರವಾಗಿ ಶಿವರಾತ್ರಿಯನ್ನು ಆಚರಣೆ ಮಾಡುವುದರ ಮೂಲಕ ಶಿವಲಿಂಗಾನಂದ ಶ್ರೀಗಳು ಬರುವಂತ ಭಕ್ತಾಧಿಗಳಿಗೆ ಜ್ಞಾನವನ್ನು ತುಂಬುತ್ತಿದ್ದಾರೆ ಎಂದರು.

ಇತ್ತೀಚಿನ ದಿನದಲ್ಲಿ ಮಾನವನಿಗೆ ಇಂತಹ ಕಾರ್ಯಕ್ರಮಗಳಿಗೆ ಬರಲು ಸಮಯ ಇಲ್ಲದಾಗಿದೆ, ಇದರ ಬದಲಿಗೆ ಮೋಬೈಲ್ ಬಳಕೆಯನ್ನು ಮಾಡುತ್ತಾ ಸಮಯವನ್ನು ಹಾಳು ಮಾಡುತ್ತಿದ್ದಾನೆ, ಮೊಬೈಲ್ ನಿಂದಾಗ ಮಾನವನ ಸಂಬಂಧಗಳು ಹದಗೆಡುತ್ತಿವೆ, ಮಾತನಾಡುವ ಕ್ರಿಯೆ ಇಲ್ಲದಾಗಿದೆ, ಭಗವಂತ ನಮಗೆ ಎಲ್ಲವನ್ನು ನೀಡಿದ್ಧಾನಡೆ ಇದಕ್ಕೆ ತಕ್ಕನಾದ ರೂಪವನ್ನು ಮಾನವ ನೀಡಿದ್ದಾನೆ, ಇದು ಮಾನವ ಸಾಮರ್ಥಕ್ಕೆ ಇಟ್ಟ ಗನ್ನಡಿಯಾಗಿದೆ, ದೇವರು ನಮಗೆ ಉತ್ತಮವಾದ ದೇಹ, ಬುದ್ದಿ ಶಕ್ತಿ, ಆಗಾಂಗಗಳನ್ನು ನೀಡಿದ್ದಾನೆ ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗವನ್ನು ಮಾಡಿಕೊಳ್ಳಬೇಕಿದೆ ಹಾಳು ಮಾಡಿಕೊಳ್ಳಬಾರದೆಂದು ಶ್ರೀಗಳು ಎಚ್ಚರಿಸಿದರು.

ಶ್ರೀ ಮುರುಘಾರಾಜೇಂದ್ರಸ್ವಾಮಿ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ್ ಶ್ರೀಗಳು ಮಾತನಾಡಿ, ನಮ್ಮಲ್ಲಿ ಉತ್ತಮವಾದ ಸಂಪತ್ತು ಇದೆ ಅದರ ಸದುಪಯೋಗವಾಗಬೇಕಿದೆ, ಲಿಂಗ, ಜಂಗಮರ ದರ್ಶನ ಪ್ರಸಾದ ಮೂಲಕ ಭಗವಂತನನ್ನು ಕಾಣಬೇಕಿದೆ. ಶಿವಲಿಂಗಾನಂದ ಶ್ರೀಗಳ ಜೋತೆನೆ ನಮ್ಮ ಮಠದ ಭಾಂಧವ್ಯ ಉತ್ತಮವಾಗಿದೆ ಹಿರಿಯ ಜಗದ್ಗುರುಗಳಿಂದಲೂ ಸಹಾ ಚನ್ನಾಗಿದೆ. ಶಿವರಾತ್ರಿ ಸಪ್ತಾಹವನ್ನು ಮಾಡುವುದರ ಮೂಲಕ ಭಕ್ತಾಧಿಗಳಿಗೆ ಶಿವ ದೀಕ್ಷೆಯನ್ನು ನೀಡುತ್ತಿದ್ದಾರೆ ಜೊತೆಗೆ ಆರೂಢ ಪರಂಪರೆಯನ್ನು ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ್ ಶ್ರೀಗಳು, ಚಿಕ್ಕಬಳ್ಳಾಪುರದ ಶ್ರೀ ಮಂಗಳನಾಥ ಶ್ರೀಗಳು, ಶ್ರೀ ಸದ್ಗರು ಕಬೀರಾನಂದಾಶ್ರಮದ ಶಿವಲಿಂಗಾನಂದ ಶ್ರೀಗಳು, ಬಾಗಲ ಕೋಟೆಯ ಕೈಲಾಸನಾಥ ಶ್ರೀಗಳು ಸಾನಿಧ್ಯವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಶಿವಸ್ವಾಮಿ, ತಹಶೀಲ್ದಾರರಾದ ಗೋವಿಂದರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುನಾಥ್, ಮದೇಹಳ್ಳಿ ಗ್ರಾ,ಪಂ ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯಧರ್ಶಿ ಕೆ.ಎಂ.ವಿರೇಶ್, ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್‍ನ ಸಂಸ್ಥಾಪಕರಾದ ನಾಗರಾಜ್ ಭಟ್ಟರು ಭಾಗವಹಿಸಿದ್ದರು.

ವೆಂಕಟಾದ್ರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆದಿದ್ದು, ಸುಬ್ರರಾಯ್ ಭಟ್ಟರು ಹಾಗೂ ನಾಗರಾಜ್ ಭಟ್ಟರಿಂದ ವೇದ ಘೋಷ, ಪೂಜಾ ಪ್ರಾರ್ಥಿಸಿದರೆ, ಮುರುಗೇಶ ಸ್ವಾಗತಿಸಿದರು, ವಿಜಯಕಲಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ನಾಗವಲ್ಲಿ ಭರತನಾಟ್ಯ ಪ್ರದರ್ಶನ ಮಾಡಿದರು.

Leave a Reply

Your email address will not be published. Required fields are marked *