ಇಂದಿನ ದಿನವು ಕೆಲವು ರಾಶಿಗಳಿಗೆ ವಿಶ್ವಾಸ ಮತ್ತು ಪ್ರಾಮಾಣಿಕ ಪ್ರಯತ್ನಗಳ ಫಲ ನೀಡಲಿದ್ದರೆ, ಇನ್ನು ಕೆಲವರಿಗೆ ಆತಂಕ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮುನ್ಸೂಚನೆ ನೀಡುತ್ತಿದೆ. ನಿಮ್ಮ ರಾಶಿಗೆ ಇಂದಿನ ದಿನ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ:
ಇಂದಿನ ಪಂಚಾಂಗ
- ಶಕೆ & ಸಂವತ್ಸರ: ಶಾಲಿವಾಹನ ಶಕೆ 1948, ವಿಶ್ವಾವಸು ಸಂವತ್ಸರ
- ಆಯನ & ಋತು: ಉತ್ತರಾಯಣ, ಶಿಶಿರ ಋತು
- ಮಾಸ: ಫಾಲ್ಗುಣ ಮಾಸ (ಚಾಂದ್ರಮಾನ), ಮೀನ ಮಾಸ (ಸೌರಮಾನ)
- ಪಕ್ಷ & ತಿಥಿ: ಕೃಷ್ಣ ಪಕ್ಷ, ತ್ರಯೋದಶೀ / ಚತುರ್ದಶೀ
- ವಾರ & ನಕ್ಷತ್ರ: ಬುಧವಾರ, ಪೂರ್ವಾಭಾದ್ರ (ಮಹಾ ಹಾಗೂ ನಿತ್ಯ ನಕ್ಷತ್ರ)
- ಯೋಗ & ಕರಣ: ಸಾಧ್ಯ ಯೋಗ, ಚತುಷ್ಪಾತ್ ಕರಣ
- ಸೂರ್ಯೋದಯ / ಸೂರ್ಯಾಸ್ತ: ಬೆಳಗ್ಗೆ 06:31 / ಸಂಜೆ 06:33
ಇಂದಿನ ಶುಭಾಶುಭ ಕಾಲಗಳು:
- ರಾಹು ಕಾಲ: ಮಧ್ಯಾಹ್ನ 12:33 ರಿಂದ 02:03 ರವರೆಗೆ
- ಯಮಗಂಡ ಕಾಲ: ಬೆಳಗ್ಗೆ 08:02 ರಿಂದ 09:32 ರವರೆಗೆ
- ಗುಳಿಕ ಕಾಲ: ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:33 ರವರೆಗೆ
ಮೇಷ ರಾಶಿ: ಕೋಪದ ಕೈಗೆ ಬುದ್ಧಿ ಕೊಟ್ಟು ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಮನಸ್ಸಿನಲ್ಲೇ ನೋವುಗಳನ್ನು ನುಂಗಿ ಒಳಗೆ ಸಂಕಟಪಡುವಿರಿ. ಹೊಸ ಬಟ್ಟೆಗಳ ಖರೀದಿ ಅಥವಾ ಧಾರಣೆ ಮಾಡಲಿದ್ದೀರಿ. ಜವಾಬ್ದಾರಿಯುತ ಕೆಲಸಗಳಲ್ಲಿ ಮಗ್ನರಾಗಲಿದ್ದು, ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಎದುರಾಗಬಹುದು. ನಾಯಕರಾಗುವ ಬದಲು ಸೇವಕರಾಗಿ ಕೆಲಸ ಮಾಡುವ ವಿನಮ್ರತೆ ಮೂಡಲಿದೆ. ನಿಮ್ಮ ಮೌನವು ಇತರರಲ್ಲಿ ಅನುಮಾನ ಮೂಡಿಸಲು ಕಾರಣವಾಗಬಹುದು.
ವೃಷಭ ರಾಶಿ: ನಿಮ್ಮ ಕಷ್ಟದ ಸಮಯಕ್ಕಾಗಿ ವಿರೋಧಿಗಳು ಕಾಯುತ್ತಿರಬಹುದು. ಅನಗತ್ಯ ಮಾತುಗಳಿಂದ ಶತ್ರುಗಳನ್ನು ನೀವೇ ಪ್ರಬಲರನ್ನಾಗಿ ಮಾಡುವಿರಿ. ಸತ್ಯಕ್ಕೆ ದೂರವಾದ ವಿಚಾರಗಳು ಬೆಳಕಿಗೆ ಬರಲಿದ್ದು, ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳಲು ಮನಸ್ಸು ಒಪ್ಪದಿರಬಹುದು. ಆದರೂ ಹೊಸತು ಕಲಿಯುವತ್ತ ಆಸಕ್ತಿ ತೋರುವಿರಿ. ಕಳೆದುಕೊಂಡದ್ದರ ಬಗ್ಗೆ ಚಿಂತೆ ಮಾಡುವುದನ್ನು ಬಿಡಿ.
ಮಿಥುನ ರಾಶಿ: ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಪರದಾಡುವಿರಿ. ಸೌಂದರ್ಯದ ಕಡೆಗೆ ಹೆಚ್ಚಿನ ಒಲವು ಮೂಡಲಿದೆ. ನಿಮ್ಮ ನಡವಳಿಕೆ ಇತರರಲ್ಲಿ ಅನುಮಾನ ಮೂಡಿಸಬಹುದು. ಆರ್ಥಿಕವಾಗಿ ಹಣವಿದ್ದರೂ ತುರ್ತು ಪರಿಸ್ಥಿತಿಗೆ ಒದಗದಿರುವ ಸಾಧ್ಯತೆ ಇದೆ. ಆದರೂ ನಿಮ್ಮ ದೃಢ ನಿರ್ಧಾರಗಳಿಗೆ ಕುಟುಂಬದ ಬೆಂಬಲ ಸಿಗಲಿದೆ. ಆರ್ಥಿಕ ಹೊಂದಾಣಿಕೆ ಸ್ವಲ್ಪ ಚಿಂತೆಗೀಡು ಮಾಡಬಹುದು.
ಕರ್ಕಾಟಕ ರಾಶಿ: ಬರುವುದಿಲ್ಲ ಎಂದು ಕೈಬಿಟ್ಟಿದ್ದ ಹಣವು ಅನಿರೀಕ್ಷಿತವಾಗಿ ಕೈಸೇರಲಿದೆ. ಸಾಲಗಾರರೊಂದಿಗೆ ತಾಳ್ಮೆಯಿಂದ ವರ್ತಿಸಿ. ತಂದೆಯ ಕೆಲಸಗಳಿಗೆ ಆಸರೆಯಾಗಿ ನಿಲ್ಲುವಿರಿ. ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಭೀತಿ ಕಾಡಬಹುದು. ಸರ್ಕಾರಿ ಕೆಲಸಗಳಿಗೆ ಅಲೆದಾಟವಿದ್ದರೂ, ಪುಣ್ಯಕ್ಷೇತ್ರಗಳ ದರ್ಶನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅನಗತ್ಯ ಮಾತುಗಳಿಗಿಂತ ಮೌನವೇ ಒಳಿತು.
ಸಿಂಹ ರಾಶಿ: ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಅವಕಾಶಗಳು ಒದಗಿಬರಲಿವೆ. ಮೇಲಧಿಕಾರಿಗಳಿಂದ ಸಣ್ಣಮಟ್ಟಿನ ಅಸಮಾಧಾನ ಎದುರಿಸಬೇಕಾಗಬಹುದು. ದಿನಚರಿಯಲ್ಲಿ ಬದಲಾವಣೆ ಬಯಸುವಿರಿ. ದೂರದ ಪ್ರಯಾಣವಿದ್ದರೆ ಹಿರಿಯರ ಆಶೀರ್ವಾದ ಪಡೆದು ಮುಂದಡಿ ಇಡಿ. ಏಕಾಂತವನ್ನು ಇಷ್ಟಪಡಲಿದ್ದು, ನಿಮ್ಮ ಆಸೆಗಳು ಈಡೇರಲಿವೆ.
ಕನ್ಯಾ ರಾಶಿ: ವ್ಯಾಪಾರದಲ್ಲಿ ಕಾನೂನು ಸಲಹೆಗಳನ್ನು ಪಡೆಯುವಿರಿ. ಹಳೆಯ ಅನುಭವದ ಆಧಾರದ ಮೇಲೆ ಎಚ್ಚರಿಕೆಯಿಂದ ಕೆಲಸ ಮಾಡುವಿರಿ. ಬೇರೆಯವರ ಹೆಸರಿನಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಬಿಡುವಿಲ್ಲದ ನಡುವೆಯೂ ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ವಾಹನ ಚಾಲನೆಯಲ್ಲಿ ಆತುರ ಬೇಡ.
ತುಲಾ ರಾಶಿ: ನಿರಾಸೆಗಳನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ನಿಮ್ಮಲ್ಲಿ ಮೂಡಲಿದೆ. ನಿಮ್ಮ ಅಂತಃಸಾಕ್ಷಿಗೆ ತಕ್ಕಂತೆ ನಡೆಯುವಿರಿ. ವಿದೇಶಿ ಮೂಲದಿಂದ ಶುಭ ಸುದ್ದಿ ಬರಬಹುದು. ಆತುರದ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆಸ್ತಿ ವಿಚಾರದಲ್ಲಿ ಕಾನೂನು ಹೋರಾಟದ ಮುನ್ಸೂಚನೆ ಇದೆ. ಬೇರೆಯವರ ಮಾತಿಗಿಂತ ನಿಮ್ಮ ಸ್ವಂತ ನಿರ್ಧಾರಕ್ಕೆ ಬದ್ಧರಾಗಿರುವಿರಿ.
ವೃಶ್ಚಿಕ ರಾಶಿ: ಅನಿರೀಕ್ಷಿತ ಪ್ರಯಾಣದಿಂದ ದೇಹಕ್ಕೆ ಆಯಾಸವಾಗಲಿದೆ. ಸ್ಪರ್ಧೆಗಳಲ್ಲಿ ಅಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ. ಭಾವನೆಗಳ ಮೇಲೆ ಹಿಡಿತವಿರಲಿ, ಮಾಡದ ತಪ್ಪಿಗೆ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಬರಬಹುದು. ಸಾಲಗಾರರ ಕಾಟ ಹೆಚ್ಚಾಗಲಿದ್ದು, ಕೋಪದಿಂದ ಕೆಲಸಗಳು ಕೆಡಬಹುದು. ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವುದು ನೆಮ್ಮದಿ ನೀಡಲಿದೆ.
ಧನು ರಾಶಿ: ಅತಿಯಾದ ಕೋಪದಿಂದ ಕೈಗೆ ಬಂದ ಅವಕಾಶಗಳು ಕೈತಪ್ಪಬಹುದು. ನಿಮ್ಮ ತಪ್ಪುಗಳನ್ನು ಅರಿತು ತಿದ್ದಿಕೊಳ್ಳುವ ಮನೋಭಾವ ಬೆಳೆಯಲಿದೆ. ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ದರ್ಪದಿಂದ ವರ್ತಿಸದೆ ಮುಕ್ತ ಮನಸ್ಸಿನಿಂದ ಎಲ್ಲರೊಡನೆ ಬೆರೆಯಿರಿ.
ಮಕರ ರಾಶಿ: ಮನೆಗೆ ನೆಂಟರ ಆಗಮನದಿಂದ ಸಂತಸ ಮನೆಮಾಡಲಿದೆ. ಸ್ನೇಹಿತರ ಮೂಲಕ ಆರ್ಥಿಕ ಸಹಾಯ ದೊರೆಯಲಿದೆ. ಕೃಷಿ ಕ್ಷೇತ್ರದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಹಿರಿಯರ ತಪ್ಪುಗಳನ್ನು ಸರಿಪಡಿಸುವ ಜವಾಬ್ದಾರಿ ನಿಮ್ಮದಾಗುವುದು. ಹಣಕಾಸು ವ್ಯವಹಾರದಲ್ಲಿ ಎಚ್ಚರವಿರಲಿ, ಯಾರನ್ನೂ ಸುಲಭವಾಗಿ ನಂಬದಿರಿ. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಗಳಿಸುವಿರಿ.
ಕುಂಭ ರಾಶಿ: ವ್ಯಾಪಾರದಲ್ಲಿ ಹೆಚ್ಚಿನ ಶ್ರಮ ಮತ್ತು ಚಿಂತೆ ಕಾಡಲಿದೆ. ಸಂಗಾತಿಯ ಸಲಹೆ ಮೇರೆಗೆ ನಡೆಯುವುದು ಉತ್ತಮ. ಮನೆಯಲ್ಲಿ ಹಳೆಯ ವಿಚಾರಗಳು ಮರುಕಳಿಸಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಉದ್ಯೋಗ ಬದಲಾವಣೆಯ ಅನಿವಾರ್ಯತೆ ಎದುರಾಗಬಹುದು. ವಾಹನ ಬಳಕೆಯಲ್ಲಿ ಎಚ್ಚರಿಕೆ ಇರಲಿ.
ಮೀನ ರಾಶಿ: ದೂರದಲ್ಲಿರುವ ಮಕ್ಕಳ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಆಸ್ತಿ ಖರೀದಿ ಬಗ್ಗೆ ಕುಟುಂಬದಲ್ಲಿ ಗಂಭೀರ ಚರ್ಚೆಗಳು ನಡೆಯಲಿವೆ. ತಮಾಷೆಯ ಮಾತುಗಳು ವಿಕೋಪಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಮಾತಿನ ಮೇಲೆ ಹಿಡಿತವಿರಲಿ. ಪ್ರೀತಿ ಪಾತ್ರರ ವರ್ತನೆ ಬೇಸರ ತರಿಸಬಹುದು. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ.
