ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಮಾ. 18
ತುಮಕೂರು ಜಿಲ್ಲೆಯ ತುರುವೇಕೆರೆಯ ವಿದ್ಯಾರಣ್ಯ ಡಿಎಡ್ ಕಾಲೇಜ್ನಲ್ಲಿ 2006 2007ನೇ ಸಾಲಿನ ಹಿರಿಯ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಲಕ್ಷ್ಮೀಕಾಂತ್ ವಹಿಸಿದ್ದರು. ಶಿಕ್ಷಕರುಗಳಾದ ಶಿವಮೂರ್ತಿ, ತಸ್ಲಿಮಾ ಉನ್ನಿಸಾ, ಶಂಕರ್ ಸರ್, ಈಶ್ವರ್, ಬೋರಪ್ಪ ಹಾಗೂ ಗೋಪಾಲಯ್ಯ ರವರು ಸನ್ಮಾನ ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಸಂಸ್ಕೃತ ಶಿಕ್ಷಕರಾದ ದೇವರಾಜ್ ಕೆ ನಿರೂಪಣೆ ಮಾಡಿದರು ತೇಜಸ್ವಿನಿ ಸ್ವಾಗತಿಸಿದರು. ಹನುಮಂತಪ್ಪ ಪ್ರಾಸ್ತಾವಿಕ ನುಡಿದರೆ, ಮುಕುಂದ್ ಶಿಕ್ಷಕರನ್ನು ಪರಿಚಯಿಸಿದರು. ಹೊನ್ನೇಗೌಡ ಮತ್ತು ವೇಣುಗೋಪಾಲ್ ಭುವನೇಶ್ವರಿ ಸತೀಶ್ ಹಾಗೂ ನವೀನ್ ಈರಣ್ಣ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು
