ಚಿತ್ರದುರ್ಗ: ಅಕ್ರಮ ಗ್ಯಾಸ್ ಸಿಲಿಂಡರ್ ಮಾರಾಟ ತಡೆಗೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ ಆಗ್ರಹ.

ಚಿತ್ರದುರ್ಗ ಮಾ. 27

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಗೃಹ ಉಪಯೋಗದ ಗ್ಯಾಸ್ ಸಿಲಿಂಡರ್‍ಗಳನ್ನು ವಾಣಿಜ್ಯ ವ್ಯವಹಾರಗಳಲ್ಲಿ ಅಕ್ರಮವಾಗಿ ಬಳಕೆಯಾಗುತ್ತಿ ರುವುಲ್ಲದೆ, ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದು ಇದರ ಬಗ್ಗೆ ಕ್ರಮ ಜರುಗಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ [ರಿ] ಆಗ್ರಹಿಸಿದೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ [ರಿ]ಯ ಅಧ್ಯಕ್ಷೆ ಪಾರ್ವತಿ ಇರಾನ್ ಮತ್ತು ಇಸ್ರೇಲ್, ಅಮೇರಿಕಾ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಅಭಾವವಾಗಿದ್ದು, ಅದರಂತೆ ಕರ್ನಾಟಕ ರಾಜ್ಯದಲ್ಲೂ ಸಹ ಸಿಲಿಂಡರ್‍ಗಳ ಪ್ರಭಾವ ತೀವ್ರವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಗೃಹಬಳಕೆ ಸಿಲಿಂಡರ್‍ಗಳನ್ನು ಅಥವಾ ಸಣ್ಣ ಸಿಲಿಂಡರ್‍ಗಳನ್ನು ಹೆಚ್ಚಿನ ದರಕ್ಕೆ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವುದನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ ಖಂಡಿಸಿದೆ ಜಿಲ್ಲೆಯಾದ್ಯಂತ ಗೃಹಬಳಕೆಯ ಗ್ಯಾಸ್ ಸಿಲಿಂಡರ್‍ಗಳನ್ನು ವಾಣಿಜ್ಯ ಉದ್ಯಮದಲ್ಲ ಬಳಸುತ್ತಿರುವುದರಿಂದ ಗೃಹಬಳಕೆಗೆ ತೊಂದರೆಯಾಗುತ್ತಿರುತ್ತದೆ. ಗೃಹ ಬಳಕೆಯ ಸಿಲಿಂಡರ್‍ಗಳನ್ನು ಕಾಳ
ಸಂತೆಯಲ್ಲಿ ರೂ.2000/ಗಳಿಗೆ ಮತ್ತು ವಾಣಿಜ್ಯಕ್ಕೆ ಉಪಯೋಗಿಸುವ ಸಿಲಿಂಡರ್‍ಗಳನ್ನುರೂ.5000/ಗಳಿಗೆ ಮಾರಾಟ
ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಗ್ರಾಹಕರಿಗೆ ಈಗಾಗಲೇ ಬುಕ್ಕಿಂಗ್ ಮಾಡುವಾಗ ಸರಿಯಾದ ಮಾಹಿತಿ ದೊರೆಯದೆ
ತಡವಾಗುತ್ತಿದ್ದು ಏಜೆನ್ಸಿಗಳಲ್ಲಿ ವಿಚಾರಿಸಿದಾಗ ಗ್ರಾಮಕ್ಕೆ 45 ದಿನ ಬುಕ್ಕಿಂಗ್ ಮಾಡಿದ ನಂತರ ಮತ್ತು ನಗರಕ್ಕೆ 25 ದಿನಗಳ ನಂತರ ಸಿಲಿಂಡರ್ ಕೊಡುವುದಾಗಿ ಹೇಳುತ್ತಾರೆ ಇದು ಎಷ್ಟು ಸಮಂಜಸ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದಿದ್ದಾರೆ.

ಸಿಲಿಂಡರ್ ವಿತರಣೆಯಲ್ಲಿ ಆಸ್ಪತ್ರೆಗಳು, ಶಾಲಾ-ಕಾಲೇಜು ಹಾಸ್ಟೆಲ್‍ಗಳು, ಅಂಗನವಾಡಿ, ಇಂದಿರಾ ಕ್ಯಾಂಟೀನ್‍ಗಳಿಗೆ ಸರಬರಾಜು ಯಥಾವತ್ತಾಗಿ ನಡೆಯಬೇಕು. ಗೃಹಬಳಕೆಯ ಸಿಲಿಂಡರ್‍ಗಳನ್ನು ಅಕ್ರಮವಾಗಿ ವಾಣಿಜ್ಯ ಬಳಕೆಗೆ ನೀಡದಂತೆ ನಿರ್ಬಂಧಿಸಬೇಕು.


ಅಕ್ರಮ ಅನಿಲ ಸಿಲಿಂಡರ್‍ಗಳ ವಿತರಣೆ ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿ ಏಜೆನ್ಸಿಗಳ ಮತ್ತು ವಿತರಕರುಗಳ ಮೇಲೆ ಮಾರಾಟ ಮಾಡುತ್ತಿರು ವುದನ್ನು ಪರಿಶೀಲಿಸಿ ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಏಜೆನ್ಸಿಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೊಬೈಲ್‍ಗಳಿಗೆ ಕೆಲವು ಕರೆಗಳ ಮುಖಾಂತರ ಗ್ಯಾಸ್ ಬುಕ್ಕಿಂಗ್ ಮಾಡುತ್ತೇವೆ ಎಂದು ಗ್ಯಾಸ್ ಏಜೆನ್ಸಿಗಳ ಸೋಗಿನಲ್ಲಿ ಲಿಂಕ್‍ನ್ನು ಕಳುಹಿಸಿ ಜನರಿಗೆ ವಂಚಿಸುತ್ತಿರುವ ಪ್ರಕರಣಗಳು ಈಗಾಗಲೇ ಹೆಚ್ಚಾಗಿದ್ದು, ಇತ್ತ ಪೊಲೀಸ್ ಇಲಾಖೆ ಗಮನಹರಿಸಿ ಸೂಕ್ತ ಕ್ರಮಜರುಗಿಸಿ ಗ್ರಾಹಕರಿಗೆ ಆಗುವಂತಹ ವಂಚನೆಯನ್ನು ತಪ್ಪಿಸಬೇಕಾಗಿದೆ. ಗ್ಯಾಸ್ ಸಿಲಿಂಡರ್‍ಗಳನ್ನು ಒದಗಿಸುವ ನೆಪದಲ್ಲಿ ಮಾಡುತ್ತಿರುವ ವಂಚನೆಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಕೂಡಲೇ ತಡೆಯಬೇಕಾಗಿದೆ. ಸಾರ್ವಜನಿಕರ ಅನುಕೂಲಕರವಾಗುವಂತಹ ಗ್ಯಾಸ್ ಸಿಲಿಂಡರ್‍ಗಳನ್ನು ಮೀನ ಮೇಷಮಾಡದೆ ಅಗತ್ಯಕ್ಕೆ ತಕ್ಕಂತೆ ಒದಗಿಸಬೇಕೆಂದು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆಯ ಅಧ್ಯಕ್ಷರಾದ ಪಾರ್ವತಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಗೋಷ್ಟಿಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆಯ ಖಜಾಂಚಿ ನಾಗಮಣಿ ಹೆಚ್.ವೈ ಸಂಘಟನಾ ಕಾರ್ಯದರ್ಶಿ ಶಬಾನಬಾನು ಭಾಗವಹಿಸಿದ್ದರು.

Leave a Reply

Your email address will not be published. Required fields are marked *