ಬಿಸಿಸಿಐ 19ನೇ ಆವೃತ್ತಿಯ ಐಪಿಎಲ್ (IPL 2026) ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಭಿಮಾನಿಗಳ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಲೀಗ್ ಹಂತದ ಪಂದ್ಯಗಳ ವಿವರ ಹೊರಬಿದ್ದಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದೊಂದಿಗೆ ಆರ್ಸಿಬಿ ತನ್ನ ಟೂರ್ನಿಯ ಅಭಿಯಾನವನ್ನು ಆರಂಭಿಸಲಿದೆ.
ತವರು ಮೈದಾನವಾಗಿ ರಾಯ್ಪುರ ಸೇರ್ಪಡೆ ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಆರ್ಸಿಬಿ ಒಟ್ಟು 14 ಪಂದ್ಯಗಳನ್ನು ಆಡಲಿದೆ. ಈ ಪೈಕಿ 7 ಪಂದ್ಯಗಳು ಆರ್ಸಿಬಿಯ ತವರು ಮೈದಾನದಲ್ಲಿ ನಡೆದರೆ, ಉಳಿದ 7 ಪಂದ್ಯಗಳು ಎದುರಾಳಿ ತಂಡಗಳ ಮೈದಾನದಲ್ಲಿ ನಡೆಯಲಿವೆ. ವಿಶೇಷವೆಂದರೆ, ಈ ಆವೃತ್ತಿಯಲ್ಲಿ ಆರ್ಸಿಬಿ ಎರಡು ತವರು ಮೈದಾನಗಳನ್ನು ಹೊಂದಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳನ್ನು ಹಾಗೂ ಛತ್ತೀಸ್ಗಢದ ರಾಯ್ಪುರದಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ 2 ಪಂದ್ಯಗಳನ್ನು ಆಡಲಿದೆ.
ಯಾರ ವಿರುದ್ಧ ಎಷ್ಟು ಪಂದ್ಯ? ಆರ್ಸಿಬಿ ತನ್ನ 14 ಲೀಗ್ ಪಂದ್ಯಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಲಾ ಒಂದು ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಆರ್ಸಿಬಿ ತಂಡದ ಸಂಪೂರ್ಣ ಲೀಗ್ ವೇಳಾಪಟ್ಟಿ:
- ಮಾರ್ಚ್ 28 (ಶನಿವಾರ): vs ಸನ್ರೈಸರ್ಸ್ ಹೈದರಾಬಾದ್ (ಬೆಂಗಳೂರು) – ಸಂಜೆ 7:30
- ಏಪ್ರಿಲ್ 05 (ಭಾನುವಾರ): vs ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರು) – ಸಂಜೆ 7:30
- ಏಪ್ರಿಲ್ 10 (ಶುಕ್ರವಾರ): vs ರಾಜಸ್ಥಾನ ರಾಯಲ್ಸ್ (ಗುವಾಹಟಿ) – ಸಂಜೆ 7:30
- ಏಪ್ರಿಲ್ 12 (ಭಾನುವಾರ): vs ಮುಂಬೈ ಇಂಡಿಯನ್ಸ್ (ಮುಂಬೈ) – ಸಂಜೆ 7:30
- ಏಪ್ರಿಲ್ 15 (ಬುಧವಾರ): vs ಲಕ್ನೋ ಸೂಪರ್ಜೈಂಟ್ಸ್ (ಬೆಂಗಳೂರು) – ಸಂಜೆ 7:30
- ಏಪ್ರಿಲ್ 18 (ಶನಿವಾರ): vs ಡೆಲ್ಲಿ ಕ್ಯಾಪಿಟಲ್ಸ್ (ಬೆಂಗಳೂರು) – ಮಧ್ಯಾಹ್ನ 3:30
- ಏಪ್ರಿಲ್ 24 (ಶುಕ್ರವಾರ): vs ಗುಜರಾತ್ ಟೈಟಾನ್ಸ್ (ಬೆಂಗಳೂರು) – ಸಂಜೆ 7:30
- ಏಪ್ರಿಲ್ 27 (ಸೋಮವಾರ): vs ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿ) – ಸಂಜೆ 7:30
- ಏಪ್ರಿಲ್ 30 (ಗುರುವಾರ): vs ಗುಜರಾತ್ ಟೈಟಾನ್ಸ್ (ಅಹಮದಾಬಾದ್) – ಸಂಜೆ 7:30
- ಮೇ 07 (ಗುರುವಾರ): vs ಲಕ್ನೋ ಸೂಪರ್ಜೈಂಟ್ಸ್ (ಲಕ್ನೋ) – ಸಂಜೆ 7:30
- ಮೇ 10 (ಭಾನುವಾರ): vs ಮುಂಬೈ ಇಂಡಿಯನ್ಸ್ (ರಾಯ್ಪುರ) – ಸಂಜೆ 7:30
- ಮೇ 13 (ಬುಧವಾರ): vs ಕೋಲ್ಕತ್ತಾ ನೈಟ್ ರೈಡರ್ಸ್ (ರಾಯ್ಪುರ) – ಸಂಜೆ 7:30
- ಮೇ 17 (ಭಾನುವಾರ): vs ಪಂಜಾಬ್ ಕಿಂಗ್ಸ್ (ಧರ್ಮಶಾಲಾ) – ಮಧ್ಯಾಹ್ನ 3:30
- ಮೇ 22 (ಶುಕ್ರವಾರ): vs ಸನ್ ರೈಸರ್ಸ್ ಹೈದರಾಬಾದ್ (ಹೈದರಾಬಾದ್) – ಸಂಜೆ 7:30