ಐಪಿಎಲ್ 2026 ಉದ್ಘಾಟನಾ ಸಮರ: ಚಿನ್ನಸ್ವಾಮಿ ಅಂಗಳದಲ್ಲಿ RCB vs SRH ಹೈವೋಲ್ಟೇಜ್ ಫೈಟ್!

ಮಾರ್ಚ್ 28: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 19ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲೇ ಬದ್ಧ ವೈರಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಭಾರೀ ಕುತೂಹಲ ಮೂಡಿಸಿದೆ.

​ಚಾಂಪಿಯನ್ ಆರ್​​ಸಿಬಿಗೆ ತವರಿನ ಸವಾಲು

​ಕಳೆದ ಬಾರಿಯ ಚಾಂಪಿಯನ್ ಆಗಿರುವ ಆರ್‌ಸಿಬಿ, ಈ ಬಾರಿಯೂ ತನ್ನ ಪ್ರಾಬಲ್ಯ ಮುಂದುವರಿಸುವ ಗುರಿ ಹೊಂದಿದೆ. ಮಿನಿ ಹರಾಜಿನ ನಂತರ ತಂಡಕ್ಕೆ ಹೊಸ ಆಟಗಾರರ ಸೇರ್ಪಡೆಯಾಗಿದ್ದರೂ, ಮ್ಯಾನೇಜ್‌ಮೆಂಟ್ ಹಳೆಯ ವಿನ್ನಿಂಗ್ ಕಾಂಬಿನೇಶನ್ ಅನ್ನೇ ಉಳಿಸಿಕೊಳ್ಳಲು ಆಸಕ್ತಿ ತೋರಿದೆ. ಆದರೆ, ಕೆಲವು ಪ್ರಮುಖ ಆಟಗಾರರ ಇಂಜುರಿ ಸಮಸ್ಯೆ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಪ್ಲೇಯಿಂಗ್ 11 ನಲ್ಲಿ ಅನಿವಾರ್ಯ ಬದಲಾವಣೆಗಳಾಗಲಿವೆ.

ಆರ್‌ಸಿಬಿ ಸಂಭಾವ್ಯ ಬಲ:

ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಸ್ಫೋಟಕ ಜೋಡಿ ಇನ್ನಿಂಗ್ಸ್ ಆರಂಭಿಸಲಿದೆ. ನಾಯಕ ರಜತ್ ಪಾಟಿದಾರ್ ಮತ್ತು ದೇವದತ್ ಪಡಿಕ್ಕಲ್ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬಲಿದ್ದಾರೆ. ಫಿನಿಶಿಂಗ್ ಜವಾಬ್ದಾರಿಯನ್ನು ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ಹೊತ್ತಿದ್ದಾರೆ. ಬೌಲಿಂಗ್‌ನಲ್ಲಿ ಅನುಭವಿ ಭುವನೇಶ್ವರ್ ಕುಮಾರ್ ಮತ್ತು ಕಿವೀಸ್ ವೇಗಿ ಜಾಕೋಬ್ ಡಫಿ ಹೊಸ ಚೆಂಡನ್ನು ಹಂಚಿಕೊಳ್ಳಲಿದ್ದಾರೆ.

​ಬಲಿಷ್ಠವಾಗಿ ಕಾಣುತ್ತಿದೆ ಆರೆಂಜ್ ಆರ್ಮಿ (SRH)

​ಸನ್‌ರೈಸರ್ಸ್ ಹೈದರಾಬಾದ್ ಕೂಡ ಈ ಬಾರಿ ಅತ್ಯಂತ ಸಮತೋಲಿತ ತಂಡವಾಗಿ ಕಾಣುತ್ತಿದೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಆರಂಭಿಕ ಜೋಡಿ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಬಲ್ಲದು. ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸೆನ್ ಅವರಂತಹ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್ ಆಲ್‌ರೌಂಡ್ ಪ್ರದರ್ಶನ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

​ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 (Probable Playing XI)

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):

  1. ​ವಿರಾಟ್ ಕೊಹ್ಲಿ
  2. ​ಫಿಲ್ ಸಾಲ್ಟ್
  3. ​ದೇವದತ್ ಪಡಿಕ್ಕಲ್
  4. ​ರಜತ್ ಪಾಟಿದಾರ್ (ನಾಯಕ)
  5. ​ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  6. ​ಟಿಮ್ ಡೇವಿಡ್
  7. ​ಕೃನಾಲ್ ಪಾಂಡ್ಯ
  8. ​ರೊಮಾರಿಯೊ ಶೆಫರ್ಡ್
  9. ​ಭುವನೇಶ್ವರ್ ಕುಮಾರ್
  10. ​ಸುಯಾಶ್ ಶರ್ಮಾ
  11. ​ಜಾಕೋಬ್ ಡಫಿ

ಸನ್‌ರೈಸರ್ಸ್ ಹೈದರಾಬಾದ್ (SRH):

  1. ​ಅಭಿಷೇಕ್ ಶರ್ಮಾ
  2. ​ಟ್ರಾವಿಸ್ ಹೆಡ್
  3. ​ಇಶಾನ್ ಕಿಶನ್ (ನಾಯಕ)
  4. ​ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್)
  5. ​ಲಿಯಾಮ್ ಲಿವಿಂಗ್‌ಸ್ಟೋನ್
  6. ​ಅನಿಕೇತ್ ವರ್ಮಾ
  7. ​ನಿತೀಶ್ ಕುಮಾರ್ ರೆಡ್ಡಿ
  8. ​ಬ್ರೇಡನ್ ಕಾರ್ಸೆ
  9. ​ಹರ್ಷಲ್ ಪಟೇಲ್
  10. ​ಜಯದೇವ್ ಉನದ್ಕತ್
  11. ​ಶಿವಂ ಮಾವಿ

ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟರ್‌ಗಳ ಸ್ವರ್ಗವಾಗಿರುವುದರಿಂದ ಇಂದು ರನ್ ಮಳೆ ಹರಿಯುವುದು ಖಚಿತ. ಆರ್‌ಸಿಬಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಶುಭಾರಂಭ ಮಾಡುತ್ತಾ ಅಥವಾ ಹೈದರಾಬಾದ್ ತಂಡ ಮೇಲುಗೈ ಸಾಧಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *