ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 07
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಶ್ರೀ ಹರಿಮತಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಪಟ್ಟಣದ ಮಂಜುನಾಥ ಶಾಲೆಯ ರಸ್ತೆಯ ಹರಿಮತಿ ಚೌಡೇಶ್ವರಿ ದೇವಿಯ ಜೀರ್ಣೋದ್ದಾರ ಟ್ರಸ್ಟ್ನಿಂದ ಆಯೋಜಿಸಿದ್ದ ಜಾತ್ರೆಯಲ್ಲಿ ದೇವಿಗೆ ವಿಶೇಷ ಪುಷ್ಪಾಲಂಕಾರ ಸೇವೆ, ವಿವಿಧ ಪೂಜಾ ಕೈಂಕರ್ಯಗಳು ಶಾಸ್ತೋಕ್ತವಾಗಿ ನೆರವೇರಿದವು. ಜಾತ್ರೆ ಅಂಗವಾಗಿ ಸೋಮವಾರ ಮದುವಣಗಿತ್ತಿ ಶಾಸ್ತçದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಮಂಗಳವಾರ ಜಾತ್ರೋತ್ಸವ ಅಂಗವಾಗಿ ಆಮ್ಮನವರಿಗೆ ಮದುವಣಗಿತ್ತಿ ಕಾರ್ಯ, ಗಂಗಾ ಪೂಜೆ, ಕೆಂಡಾರ್ಚನೆ, ಅನ್ನ ಸಂತರ್ಪಣೆ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಗಳು ನೆರವೇರಿದವು ನೆರೆದಿದ್ದ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.

. ಶ್ರೀ ಹರಿಮತಿ ಚೌಡೇಶ್ವರಿ ದೇವಿಗೆ ಮಂಗಳವಾರದAದು ವಿವಿಧ ರೀತಿಯ ತರಕಾರಿಗಳನ್ನು ಬಳಿಸಿ ಅಲಂಕಾರವನ್ನು ಮಾಡಲಾಗಿತ್ತು ಇದರಲ್ಲಿ ತರಕಾರಿಗಳಾದ ಗೆಜ್ಜರಿ, ಹಾಗಲಕಾಯಿ, ಮೆಣಸಿನ ಕಾಯಿ. ಮುಳಗಾಯಿ, ಗೆಡ್ಡೆ ಕೋಸು, ಟಮೋಟೋ, ಅಲೂಗೆಡ್ಡೆ, ಸಿಮೇಬದನೆಕಾಯಿ.ಬೀಟರೂಟ್, ಡೋಣ ಮೆಣಸಿ ನಕಾಯಿ, ಈರುಳ್ಳಿ, ಹೊಕೋಸು, ಎಲೆ ಕೋಸು, ನುಗ್ಗೆಕಾಯಿ ಸೇರಿದಂತೆ ವಿವಿಧ ರೀತಿಯಲ್ಲಿ ಅಲಂಕಾರ ವನ್ನು ಮಾಡಲಾಗಿತ್ತು. ಅಮ್ಮನವರ ಹೋಮ ಹವನ, ಪೂಜೆ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳನ್ನು ಪುರೋಹಿತ ಪುನಿತ್ ಶಾಸ್ತಿç ನೆರವೇರಿಸಿದರು. ಟ್ರಸ್ಟ್ ಸದಸ್ಯರಾದ ಪೂಜಾರ್ ಕಾಳ್ಯನಾಯ್ಕ, ಹೀರಾ ನಾಯ್ಕ, ಮಂಜುನಾಥ್, ಶಿವಾನಂದಪ್ಪ, ಆನಂದ್, ಮಹೇಶ್ ಇತರರಿದ್ದರು.
ದೇವಿಯ ಜಾತ್ರೆಗೆ ರಾಜ್ಯದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಮಂಗಳೂರು, ಹೊರರಾಜ್ಯಗಳಾದ ಕೇರಳ, ತಮಿಳುನಾಡಿನಿಂದಲೂ ಭಕ್ತರು ಆಗಮಿಸಿ ಪೂಜೆ ನೆರವೇರಿಸಿ ಪ್ರಾರ್ಥಿಸುತ್ತಾರೆ. ಹಲವು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.
ಹರಿಮತಿ ಚೌಡೇಶ್ವರಿ ಅಮ್ಮನವರ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಎಂ. ಸತೀಶ್ ಕುಮಾರ್ ಮಾತನಾಡಿ, ಶಕ್ತಿದೇವತೆ ಹರಿಮತಿ ಚೌಡೇಶ್ವರಿ ದೇವಿ ದುಷ್ಟ ಶಕ್ತಿಗಳಿಂದ ಭಕ್ತರನ್ನು ರಕ್ಷಿಸುತ್ತಿದ್ದಾಳೆ. ಸಮಸ್ಯೆಗಳ ಪರಿಹಾರಕ್ಕಾಗಿ ಬೇಡಿ ಬರುವ ಭಕ್ತರಿಂದ ಟ್ರಸ್ಟ್ ಆಗಲಿ, ದೇವಸ್ಥಾನದವರಾಗಲೀ ಹಣ ಪಡೆಯುವುದಿಲ್ಲ. ಅಮ್ಮನ ಸನ್ನಿಧಿ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

