ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 14
ಅಸಮಾನತೆಯ ವಿರುದ್ಧ ಸಿಡಿದೆದ್ದ ಆ ಮಹಾನ್ ಚೇತನದ ಹೆಜ್ಜೆಗುರುತುಗಳನ್ನು ನಾವೆಲ್ಲರೂ ಅನುಸರಿಸೋಣ. ಅವರ ವಿಚಾರಧಾರೆಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಬಿ.ಪಿ. ಪ್ರೇಮನಾಥ್ ತಿಳಿಸಿದರು.
ಸಂವಿಧಾನ ಶಿಲ್ಪ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆಯ ಅಂಗವಾಗಿ ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿ 13ರಲ್ಲಿನ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲಿಯಿರಿ, ಸಂಘಟಿತರಾಗಿ, ಹೋರಾಡಿ ಇದು ಕೇವಲ ಘೋಷಣೆಯಲ್ಲ, ಪ್ರತಿಯೊಬ್ಬರ ಬದುಕಿಗೆ ದಾರಿದೀಪ. ಏಪ್ರಿಲ್ 14, ಕೇವಲ ಒಂದು ಆಚರಣೆಯ ದಿನವಲ್ಲ; ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ನಮ್ಮ ಉಸಿರಾಗಿಸಿಕೊಳ್ಳುವ ಸಂಕಲ್ಪದ ದಿನ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಅತಿದೊಡ್ಡ ಉಡುಗೊರೆ ಎಂದರೆ ನಮ್ಮ ಭಾರತದ ಸಂವಿಧಾನ ಇದು ಪ್ರತಿಯೊಬ್ಬ ಭಾರತೀಯನ ಹಕ್ಕುಗಳನ್ನು ರಕ್ಷಿಸುವ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಪವಿತ್ರ ಗ್ರಂಥ.
ಶಿಕ್ಷಣವೇ ಶಕ್ತಿ ಎಂದು ಜಗತ್ತಿಗೆ ಸಾರಿದ, ಅಸಮಾನತೆಯ ವಿರುದ್ಧ ಸಿಡಿದೆದ್ದ ಆ ಮಹಾನ್ ಚೇತನದ ಹೆಜ್ಜೆಗುರುತುಗಳನ್ನು ನಾವೆಲ್ಲರೂ ಅನುಸರಿಸೋಣ. ಅವರ ವಿಚಾರಧಾರೆಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ ಎಂದು ತಿಳಿಸಿದರು ಅಂಬೇಡ್ಕರ್ ಎಂದರೆ ಹೋರಾಟ. ಚಿಕ್ಕಂದಿನಿಂದಲೂ ಹೋರಾಟ ಮನೋಭಾವದಿಂದ ತಮ್ಮ ಜೀವನ ಕಳೆದರು. ಬಾಲ್ಯದಲ್ಲಿ ಅನುಭವಿಸಿದ ಕಹಿ ಅನುಭವಗಳಿಗೆ ಕಾರಣ ಹುಡುಕಿ ಇದಕ್ಕೆ ಶಿಕ್ಷಣವೇ ಮದ್ದು ಎಂದು ಅರಿತು ಶಿಕ್ಷಣದ ಕಡೆಗೆ ತಮ್ಮ ಗಮನ ಹರಿಸಿದರು ಪುಸ್ತಕಗಳ ಆಸಕ್ತಿ ಬೆಳಸಿಕೊಂಡು ಹೆಚ್ಚು ಸಮಯ ಗ್ರಂಥಾಲಯಗಳಲ್ಲಿ ಕಳೆಯುತ್ತಿದ್ದರು.
ಕೆಳವರ್ಗದವರ ಉನ್ನತಿಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಮೊದಲ ಕಾನೂನು ಸಚಿವರಾಗಿ, ಸಂವಿಧಾನ ಶಿಲ್ಪಿಯಾಗಿ, ಸಮ ಸಮಾಜದ ನಿರ್ಮಾತೃಗಳಾಗಿ ಹೊರಹೊಮ್ಮಿದರು. ತಳ ಸಮುದಾಯಕ್ಕೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟು ಸಮಾಜದಲ್ಲಿ ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾದರು. ಇಂದು ನಾವು ಸಮಾನತೆಗಾಗಿ ಪಡೆಯುತ್ತಿರುವ ಸೌಲಭ್ಯಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಮೂಲ ಕಾರಣ. ನಮ್ಮ ಸಂಸ್ಥೆ ಬುದ್ಧ, ಬಸವ, ಅಂಬೇಡ್ಕರ್‍ರವರ ತತ್ತ್ವಾದರ್ಶಗಳನ್ನು ಅನುಸರಿಸುತ್ತಿದೆ ಎಂದು ಬಿ.ಪಿ. ಪ್ರೇಮನಾಥ್ ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಶಾಖೆಯ ಕಾರ್ಯದರ್ಶಿ ಟಿ.ತಿಮ್ಮಪ್ಪ, ಖಂಜಾಚಿ ಎನ್.ಆರ್.ಭೈಯಣ್ಣ, ನಿರ್ದೆಶಕರುಗಳಾದ ಆರ್.ರಂಗಪ್ಪರೆಡ್ಡಿ, ವೈ.ಚಂದ್ರಶೇಖರ್‍ಯ್ಯ, ಟಿ.ಆರ್.ಮಂಜುನಾಥ್, ಬಿ.ಮಂಜುನಾಥ್, ಟಿ.ಪಿ.ಜ್ಞಾನಮೂರ್ತಿ, ಡಿ.ಟಿ.ನಾಗರಾಜ್,ಮ ಎಸ್.ಜಗದೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.


