ಚಿತ್ರದುರ್ಗ ಏ. 17
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಿರಿಗೆರೆ ಯೋಜನಾ ಕಚೇರಿಯ ಕಸಬಾ ವಲಯದ ಮುಸಂಡಾಲ್ ಕಾರ್ಯ ಕ್ಷೇತ್ರ ಬಸವೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ. ಕಾಡಿನ ಹಕ್ಕಿ ಪ್ರಾಣಿಗಳಿಗೆ ಆಹಾರ ಮತ್ತು ನೀರು ಒದಗಿಸುವ ಕಾರೆಕ್ರಮ ಮತ್ತು ಅಜ್ಜಿಯ ಕೈತುತ್ತು ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಸಾಕಮ್ಮ ಕಾಡಿನ ಪಕ್ಷಿಗಳಿಗೆ ನೀರು ಮತ್ತು ಆಹಾರ ಒದಗಿಸುವ ಉದ್ದೇಶ ಬಿರು ಬಿಸಿಲಲ್ಲಿ ಕೆರೆ ಕಟ್ಟೆಗಳು ಬರಡು ಆಗಿದ್ದು ಪ್ರಾಣಿಗಳಿಗೆ,ಪಕ್ಷಿಗಳಿಗೆ ನೀರು ಆಹಾರ ಸಿಗಬೇಕು . ಇದರಿಂದ ಪಕ್ಷಿಗಳು ಪ್ರಾಣಿಗಳು ಸಂಕುಲ ಉಳಿಯಬೇಕು ಅನ್ನುವ ನಿಟ್ಟಿನಲ್ಲಿ . 56 ಗ್ರಾಮಗಳಲ್ಲಿ ಎಲ್ಲ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಅಜ್ಜಿಯ ಪ್ರೀತಿಯ ಕೈ ತುತ್ತು, ಬಾಲ್ಯದ ಮಧುರ ನೆನಪು ಮತ್ತು ಅಮೃತ ಸಮಾನವಾದ ರುಚಿಯನ್ನು ಹೊಂದಿರುತ್ತದೆ ಅಜ್ಜಿ ತೋರುವ ಮಮತೆ, ಕಥೆ ಹೇಳುವ ಶೈಲಿ ಮತ್ತು ಉಣಿಸುವ ಪ್ರೀತಿಯನ್ನು ಸ್ಮರಿಸುತ್ತದೆ.ಅಜ್ಜಿಯ ಕೈಯ ತುತ್ತು ಅಮೃತಕ್ಕೆ ಸಮಾನ.ಅನ್ನದ ಜೊತೆ ಪ್ರೀತಿಯನ್ನು ಬೆರೆಸಿ ಉಣಿಸುವ ಅಜ್ಜಿ.ಬಾಲ್ಯದ ನೆನಪುಗಳನ್ನು ಮರುಕಳಿಸುವ ಪ್ರೀತಿಯ ಕ್ಷಣ ಎಂದು ವಿವರಿಸಿದರು.
ಎಲ್ಲ ಕೂಡಿ ಬಾಳಿದರೆ ಅಜ್ಜಿಯ ಕೈತುತ್ತು ಸಿಗುತ್ತದೆ ಅಜ್ಜಿಯಿಂದ ಪ್ರೀತಿ ಮಮತೆ ವಾತ್ಸಲ್ಯ ಹಾಗೂ ಇಂದಿನ ಕಾಲದ ಮಕ್ಕಳಿಗೆ ಕುಟುಂಬದ ಪ್ರೀತಿ ಎಷ್ಟು ಮುಖ್ಯಕಥೆಗಳು ವಿವರಿಸಿ ಮಾಹಿತಿ ನೀಡಿದರು ಈ ಸಭೆಯಲ್ಲಿ ಸೇವಾ ಪ್ರತಿನಿಧಿ ಗೀತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.