ಚಿತ್ರದುರ್ಗ| ಶಿಕ್ಷಕರ ಸಂಘ ಚುನಾವಣೆ ಕಾವು: 21 ಸ್ಥಾನಗಳಿಗೆ 38 ಅಭ್ಯರ್ಥಿಗಳು ಕಣದಲ್ಲಿ, ಏ.19ರಂದು ಮತದಾನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 17

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ತಲಾ 21 ನಿರ್ದೇಶಕ ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭವಾಗಿದೆ. ನಾಮಪತ್ರ ಸಲ್ಲಿಕೆ ಏ.11, ಅಂತಿಮ ದಿನ 12, ಪರಿಶೀಲನೆ 13, ಉಮೇದುವಾರಿಕೆ ಹಿಂಪಡೆಯಲು 14ರಂದು ಅಂತಿಮಗೊಂಡಿದ್ದು, ಅಂದೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. 21 ನಿರ್ದೇಶಕ ಸ್ಥಾನಗಳಿಗೆ ಚಿತ್ರದುರ್ಗ ತಾಲ್ಲೂಕು ಸಂಘದ ಏ.19ರಂದು ಮತದಾನ ನಡೆಯಲಿದ್ದು, ಅಂದೇ ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ.

ವಿಶೇಷವಾಗಿ ಚಿತ್ರದುರ್ಗ ತಾಲ್ಲೂಕು ಸಂಘದ ನಿರ್ದೇಶಕ ಸ್ಥಾನಕ್ಕೆ 1. ಆಗನೂರು ಪ್ರಕಾಶ್, 2. ಬಸವರಾಜ್ ಸಿ, 3. ಭವ್ಯವಾಣಿ ಕೆ.ಎಂ., 4. ಭುವನೇಶ್ವರಿ ಡಿ.ಜೆ., 5. ದೇವರಾಜ್ ಹೆಚ್, 6. ದಿಲೀಪ್‍ಕುಮಾರ್ ಎಸ್, 7. ದುರುಗೇಶಪ್ಪ ಹೆಚ್, 8. ಗೀತಾ ಸಿ.ಕೆ., 9. ಗುರುಮೂರ್ತಿ ಜಿ.ವಿ., 10. ಗುರುನಾಥ್ ಪಿ.ಜೆ., 11. ಹನುಮಂತಪ್ಪ ಜಿ.ಟಿ., 12. ಹಿದಾಯತ್ ವುಲ್ಲಾ ಷರೀಫ್, 13. ಕುಮಾರಸ್ವಾಮಿ ಬಿ.ಟಿ.ಎಂ., 14. ಲತಾ ಎಂ.ಎಸ್., 15. ಲೋಲಾಕ್ಷಮ್ಮ ಬಿ.ಟಿ., 16. ಮಮತಾ ಕೆ.ಸಿ., 17. ಮಹಾಲಿಂಗಪ್ಪ ಸಿ.ಪಿ., 18. ಮಹಮ್ಮದ್ ತಾಜ್‍ಪೀರ್ ಭಾಷಾ, 19. ಮಹಾಂತೇಶ್ ಜಿ.ಬಿ., 20. ಮಹೇಶ್ ಸಿ.ಎನ್., 21. ನಾಗರಾಜ್ ಎಚ್.ಎಂ., 22. ನಟೇಶ್‍ಕುಮಾರ್ ಆರ್.ಜಿ., 23. ಓಬಳಪ್ಪ ಕೆ.ಕೆ., 24. ಪ್ರಭಾವತಿಬಾಯಿ ಸಿ.ಟಿ., 25. ರಂಗಪ್ಪ ಎಚ್.ಆರ್., 26. ರಂಗಸ್ವಾಮಿ ಎಸ್.ಟಿ., 27. ರೇಣುಕಮ್ಮ ಡಿ, 28. ರೂಪಾ ಸಿ.ಎನ್., 29. ಸರಸ್ವತಿ ಎನ್., 30. ಶಶಿಕಲಾ ಎಸ್, 31. ಶಿವಪ್ರಕಾಶ್ ಬಿ.ಎಚ್., 32. ಶಿವಸ್ವಾಮಿ ಆರ್, 33. ಸುರೇಶ್ ಎನ್., 34. ತಿಪ್ಪೇಸ್ವಾಮಿ ಬಿ.ಎಚ್., 35. ವಸಂತಕುಮಾರ್, 36. ವಾಸಂತಿ ಎಂ.ಬಿ., 37. ವಿಶ್ವನಾಥ್ ಎಂ., 38. ವಿಶ್ವನಾಥಯ್ಯ ಎಸ್ ಒಟ್ಟು 38 ಮಂದಿ ಕಣದಲ್ಲಿದ್ದಾರೆ.

17 ಮಂದಿಯ ನಾಮಪತ್ರ ವಾಪಸ್ ತೆಗೆಸಿ ಅವಿರೋಧ ಆಯ್ಕೆ ಕಸರತ್ತು ಅಂತಿಮ ಕ್ಷಣದವರೆಗೂ ನಡೆದರು ಎಲ್ಲ ಪ್ರಯತ್ನ ವಿಫಲಗೊಂಡಿದ್ದು, ಪರಿಣಾಮ ಎಲ್ಲರೂ ತಮ್ಮ ಬಣ ರಚಿಸಿಕೊಂಡು ಈಗಾಗಲೇ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ.

Leave a Reply

Your email address will not be published. Required fields are marked *